
ಬೆಂಗಳೂರು (ಜು.23) : ರಾಜ್ಯ ಸರ್ಕಾರ ಮಹಿಳೆಯರಿಗಾಗಿ ರೂಪಿಸಿರುವ ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಬಸ್‌ಗಳ ಮಾಲೀಕರು ಮತ್ತು ಸಿಬ್ಬಂದಿ ಜುಲೈ 27 ರಂದು ನಗರದಲ್ಲಿ ಖಾಸಗಿ ಸಾರಿಗೆ ಬಂದ್‌ಗೆ ಕರೆಕೊಟ್ಟಿವೆ.
ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಬಂದ್ ಕರೆಕೊಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಾರಿಗೆ ಇಲಾಖೆ ಸಂಘಟನೆಗಳ ಒಕ್ಕೂಟದ ಜೊತೆಗೆ ಮಾತುಕತೆಗೆ ಮುಂದಾಗಿದೆ. ಈ ಹಿನ್ನೆಲೆ ನಾಳೆ ಸಾರಿಗೆ ಸಚಿವರು ಈ ಕುರಿತ ಚರ್ಚೆ ಮಾಡಲು ನಿರ್ಧರಿಸಿದ್ದು, ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಮಾತುಕತೆ ನಡೆಯಲಿದೆ. ಈ ಸಭೆಯಲ್ಲಿ ಸುಮಾರು 35 ಸಂಘಟನೆ ಮುಖಂಡರು ಭಾಗಿಯಾಗಲಿದ್ದಾರೆ.
ಖಾಸಗಿಗೆ ಪೈಪೋಟಿ ನೀಡುವಷ್ಟು ಸಾರಿಗೆ ಸುಧಾರಣೆ: ಸಿಎಂ ಬೊಮ್ಮಾಯಿ
ಪ್ರತಿಭಟನೆಗೆ ಕಾರಣಗಳವೇನು?
ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರು ಸರ್ಕಾರಿ ಬಸ್ ಪ್ರಯಾಣ. ಇದರಿಂದ ಖಾಸಗಿ ಸಾರಿಗೆ ಬಸ್ ಗಳು, ಆಟೋರಿಕ್ಷಾ, ಟ್ಯಾಕ್ಸಿಗೆ ಪ್ರಯಾಣಿಕರ ಕೊರತೆಯಿಂದ ನಷ್ಟವುಂಟಾಗಿದೆ. ಖಾಸಗಿ ವಾಹನ ಚಾಲಕರು, ಮಾಲೀಕರಿಗೆ ಪರಿಹಾರ ಕೊಡುವಂತೆ ಒತ್ತಾಯ.
ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳ ಸೇವೆ ಲಭ್ಯವಿದ್ದು, ಅಂದಿನಿಂದಲೂ ಸೇವೆ ಸಲ್ಲಿಸುತ್ತಾ ಬಂದಿರುವುದು ಸ್ವಾಗತಾರ್ಹ. ಆದರೆ ಪ್ರಸ್ತುತ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿರುವುದರಿಂದ ಖಾಸಗಿ ಬಸ್ ಮಹಿಳೆಯರು ಬಸ್ ಹತ್ತಲು ಬಾರದೇ ಖಾಸಗಿ ಬಸ್ ನಿಲ್ದಾಣ ಸಂಪೂರ್ಣ ಬಣಗುಡುತ್ತಿದೆ. ಇದರಿಂದ ಖಾಸಗಿ ಬಸ್ ನಂಬಿ ಜೀವನ ನಡೆಸುತ್ತಿದ್ದ ಡ್ರೈವರ್, ಕ್ಲೀನರ್, ಕಂಡಕ್ಟರ್ ಮತ್ತು ಮಾಲೀಕರಿಗೂ ಆರ್ಥಿಕವಾಗಿ ದೊಡ್ಡ ಹೊಡೆತ ಬಿದ್ದಿದೆ.
ಖಾಸಗಿ ಸಾರಿಗೆ ಕಂಪನಿಗಳ ವಿರುದ್ಧ ಹೆಚ್ಚುವರಿ ಶುಲ್ಕ ವಸೂಲಿ ಆರೋಪ
ಬಜೆಟ್‌ನಲ್ಲೂ ಸಹ ಇವರಿಗೆ ಯಾವುದೇ ಅನುದಾನ ಘೋಷಿಸಿಲ್ಲ. ಆರ್ಥಿಕವಾಗಿ ತತ್ತರಿಸಿರುವ ಖಾಸಗಿ ಬಸ್ ಮಾಲೀಕರು ಮತ್ತು ಸಿಬ್ಬಂದಿ ಈ ನಷ್ಟದಿಂದ ಹೊರ ಬರಲಾಗದೆ ಒದ್ದಾಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ