ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ತಡೆಗಟ್ಟಲು ಆರೋಗ್ಯ, ಪೊಲೀಸ್ ಇಲಾಖೆ ವಿಫಲ

Published : Jul 23, 2023, 10:05 AM ISTUpdated : Jul 23, 2023, 10:15 AM IST
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ತಡೆಗಟ್ಟಲು ಆರೋಗ್ಯ, ಪೊಲೀಸ್ ಇಲಾಖೆ ವಿಫಲ

ಸಾರಾಂಶ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನು ಬಾಹಿರ ಅಪರಾಧವಾಗಿದೆ. ಹೀಗಿದ್ದು ಪಬ್ಲಿಕ್ ನಲ್ಲಿ ಧೂಮಪಾನ ಮಾಡುವವರ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿರೋದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ. 

ಬೆಂಗಳೂರು (ಜು.23): ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನು ಬಾಹಿರ ಅಪರಾಧವಾಗಿದೆ. ಹೀಗಿದ್ದು ಪಬ್ಲಿಕ್ ನಲ್ಲಿ ಧೂಮಪಾನ ಮಾಡುವವರ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿರೋದು ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ದಂಡ ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದಾರೆ. 

ನಗರದಲ್ಲಿ ಪರೋಕ್ಷ ಧೂಮಪಾನದಿಂದ ಆರೋಗ್ಯ ಸಮಸ್ಯೆ ಪ್ರಕರಣಗಳು ಹೆಚ್ಚಾಗಿದೆ. ಧೂಮಪಾನ ಮಾಡದಿದ್ರೂ ಸಹ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ವೈದ್ಯರ ಬಳಿಗೆ ಹೋದರೆ ಧೂಮಪಾನ ಬಿಡಿ ಅಂತಾರೆ! ಧೂಮಪಾನ ಮಾಡುವುದಿಲ್ಲ ಅಂದ್ರೆ ಅಂಥವರಿಂದ ದೂರ ಇರಿ ಅಂತಾರೆ ಎಂದು ಅಳಲು ತೋಡಿಕೊಂಡಿದ್ದಾರೆ. 

ಸ್ಮೋಕ್ ಮಾಡೋದ್ರಿಂದ ಗರ್ಭಧಾರಣೆಗೆ ತೊಂದರೆಯಾಗುತ್ತಾ?

ಸಾರ್ವಜನಿಕ ಪ್ರದೇಶಗಳಾದ ಶಾಲೆ, ಕಾಲೇಜು ಆವರಣ, ಬಸ್ ನಿಲ್ದಾಣ, ರೈಲು ನಿಲ್ದಾಣ ಸ್ಮೋಕ್ ಬ್ಯಾನ್ ಮಾಡಿದ್ರೂ ಜನರು ಹೆಚ್ಚಾಗಿ ಅದೇ ಸ್ಥಳದಲ್ಲಿ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ಆರೋಗ್ಯ, ಪೊಲೀಸ್ ಇಲಾಖೆ ವಿಫಲವಾಗಿದೆ. State Tobacco Control Cell ಪ್ರಕಾರ ರಾಜ್ಯದಲ್ಲಿ 1.4 ಲಕ್ಷ ಪಬ್ಲಿಕ್ ಸ್ಮೋಕರ್ಸ್ ಇದ್ದಾರೆ. ಇವರು ಪಬ್ಲಿಕ್ ಅಲ್ಲಿ ಸ್ಮೋಕ್ ಮಾಡೋದ್ರಿಂದ ಫ್ರೀ ಆಗಿ ಆರೋಗ್ಯಯುವ ಜನರ ದೇಹಕ್ಕೆ ರೋಗಗಳು ಎಂಟ್ರಿ. ಧೂಮಪಾನ ಮಾಡದಿದ್ರೂ ಶ್ವಾಸಕೋಶ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಸ್ಮೋಕಿಂಗ್ ನಿಂದ ಆಗುವ ಆರೋಗ್ಯ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ.  ಹೃದಯ ಸಂಬಂಧ ಕಾಯಿಲೆಗಳ ಹೆಚ್ಚಳ ಜತೆಗೆ ಶ್ವಾಸಕೋಶದ ಕ್ಯಾನ್ಸರ್, ಉಸಿರಾಟದ ಕಾಯಿಲೆ ಶಿಶುಗಳಲ್ಲಿ ಇದು ಹಠಾತ್ ಸಾವಿನ ಪ್ರಮಾಣದ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಿಣಿ ಮಹಿಳೆಯರಿಗಂತೂ ಗರ್ಭಧಾರಣೆಯ ತೊಂದರೆಗಳು ಕಟ್ಟಿಟ್ಟಬುತ್ತಿ. ಧೂಮಪಾನದಿಂದ ಪಾರ್ಶ್ವವಾಯು ಆಗುವ ಸಂಭವವೂ ಅಧಿಕವಾಗಿರುತ್ತದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಕಟ್ಟುನಿಟ್ಟಾಗಿ ಬ್ಯಾನ್ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 

ದಿನಕ್ಕೆ 100 ಸಿಗರೇಟ್​- ಕ್ಯಾನ್ಸರ್​ ಹೊಗೆಯಿಂದ ಸುತ್ತುವರಿದಿದ್ದೇನೆ: ಶಾರುಖ್​ ಖಾನ್​!

ಸದ್ಯ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವವರಿಗೆ 200 ರೂಪಾಯಿ ದಂಡ ಇದೆ ಇದನ್ನ ಹೆಚ್ಚು ಮಾಡಬೇಕು.  ಸೆಕೆಂಡ್ ಹ್ಯಾಂಡ್ ಸ್ಮೋಕ್ ಗಳಿಂದ ಲಕ್ಷಾಂತರ ರೂಪಾಯಿ ಆಸ್ಪತ್ರೆಯಲ್ಲಿ ಖರ್ಚಾಗುತ್ತಿದೆ. ಇಂಥವರಿಗೆ ದಂಡ ಹೆಚ್ಚಳ ಮಾಡಲೇಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಟ್ಟುನಿಟ್ಟು ಜಾರಿಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌