ಬಡ್ಡಿ ಮನ್ನಾ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ: ಟಿ.ಡಿ.ರಾಜೇಗೌಡ ಭರವಸೆ

By Kannadaprabha News  |  First Published Jul 2, 2023, 11:34 AM IST

ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರು ಬೆಳೆ ಹಾಳಾಗಿ ಅಸಲು ಸಹ ಕಟ್ಟಲಾಗದೆ ಸುಸ್ತಿದಾರರಾಗಿರುವವರು ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.


ನರಸಿಹರಾಜಪುರ (ಜು.2) : ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರು ಬೆಳೆ ಹಾಳಾಗಿ ಅಸಲು ಸಹ ಕಟ್ಟಲಾಗದೆ ಸುಸ್ತಿದಾರರಾಗಿರುವವರು ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ಶುಕ್ರವಾರ ಪಿಸಿಎಆರ್‌ಡಿ ಬ್ಯಾಂಕಿನಲ್ಲಿ ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನರಸಿಂಹರಾಜಪುರ ಪಿಸಿಎಆರ್‌ಡಿ ಬ್ಯಾಂಕ್‌ 6 ಕೋಟಿ ರು. ರೈತರಿಗೆ ಸಾಲ ನೀಡಿದ್ದು ಶೇ 85 ರಷ್ಟುಸಾಲ ವಸೂಲಿ ಮಾಡಿದೆ. ಕಾಂಗ್ರೆಸ್‌ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ವಿದರ್ಭ ಪ್ಯಾಕೇಜ್‌ ಘೋಷಣೆ ಮಾಡಿತ್ತು. ಈ ಪ್ಯಾಕೇಜ್‌ ಘೋಷಣೆಯಿಂದ ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ಭಾಗದ ರೈತರಿಗೂ ಸಾಲ ಮನ್ನಾ ಆಗಿತ್ತು. ವಿಎಸ್‌ಎಸ್‌ಎನ್‌, ಭೂ ಅಭಿವೃದ್ದಿ ಬ್ಯಾಂಕಿನಲ್ಲಿ ಸಾಲ ಕಟ್ಟಲಾಗದೆ ಇದ್ದ ರೈತರ ಸಾಲ ಮನ್ನಾ ಆಗಿತ್ತು. ನಾನು ಕಳೆದ ಬಾರಿ ಸಹಕಾರ ಸಚಿವ ಸೋಮಶೇಖರ್‌ ಅವರನ್ನು ಭೇಟಿ ಮಾಡಿ ಸುಸ್ತಿದಾರರ ಬಡ್ಡಿ ಮನ್ನಾ ಮಾಡುವಂತೆ ಮನವಿ ಮಾಡಿದ್ದೆ. ಆದರೆ, ಬಿಜೆಪಿ ಸರ್ಕಾರ ಸ್ಪಂದಿಸಲಿಲ್ಲ. ಈ ಬಾರಿ ಕಾಂಗ್ರೆಸ್‌ ಸರ್ಕಾರ 5 ಗ್ಯಾರಂಟಿ ಘೋಷಣೆ ಮಾಡಿದ್ದರಿಂದ ಆ ಯೋಜನೆಗಳಿಗೆ ಸಂಪನ್ಮೂಲ ಒದಗಿಸಬೇಕಾಗಿದೆ. ಮುಂದಿನ ವರ್ಷದ ಬಜೆಟ್‌ನಲ್ಲಿ ಸುಸ್ತಿದಾರರ ಬಡ್ಡಿ ಮನ್ನಾ ಬಗ್ಗೆ ಪ್ರಸ್ತಾಪಿಸುತ್ತೇನೆ. ಅಗತ್ಯ ಬಿದ್ದರೆ ನಿಯೋಗ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದರು.

Latest Videos

undefined

300 ಹಾಸ್ಟೆಲ್‌ ಮಕ್ಕಳ ಫುಡ್‌, ಬೆಡ್‌ಗಾಗಿ ಶಾಸಕರ ಬಳಿ ಮನವಿಗೆ ಬಂದ ಪ್ರಿನ್ಸಿಪಾಲ್‌ ಸಸ್ಪೆಂಡ್‌! ಕಾರಣವೇನು?

ಯಶಸ್ವಿನಿ ಯೋಜನೆಯಡಿ ಮಣಿಪಾಲ ಆಸ್ಪತ್ರೆ, ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಸೇರಿಸಬೇಕು ಎಂದು ಪ್ರಸ್ತಾಪ ಮಾಡಿದ್ದೀರಿ. ಈ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳ ಜತೆæ ಚರ್ಚೆ ಮಾಡುತ್ತೇನೆ. ಪ್ರಧಾನ ಮಂತ್ರಿಗಳ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೂರಾರು ರೋಗಿಗಳಿಗೆ ಪರಿಹಾರ ಕೊಡಿಸಿದ್ದೇನೆ. ಇದರ ಜೊತೆಗೆ ಆಯು ಷ್ಮಾನ್‌ ಕಾರ್ಡು ಇದೆ. ಬಿಪಿಎಲ್‌ ಕಾರ್ಡು ಹೊಂದಿದವರಿಗೆ 5 ಲಕ್ಷ ರು.ಚಿಕಿತ್ಸೆಗೆ ಹಣ ಸಿಗಲಿದೆ ಎಂದರು. ಬ್ಯಾಂಕಿನ ಅಧ್ಯಕ್ಷರು ಹಾಗೂ ನಿರ್ದೇಶಕರು ಸೇರಿ ಶಾಸಕರಿಗೆ ಅಭಿನಂದಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಿಸಿಎಆರ್‌ಡಿ ಬ್ಯಾಂಕಿನ ಅಧ್ಯಕ್ಷ ರಂಗನಾಥ್‌ ಶಾಸಕರಿಗೆ ಮನವಿ ಸಲ್ಲಿಸಿ, ಸುಸ್ತಿದಾರರ ಬಡ್ಡಿ ಮನ್ನಾ ಮಾಡುವಂತೆ ಮನವಿ ಸಲ್ಲಿಸಿದರು. ಉಪಾಧ್ಯಕ್ಷ ಎ.ಎಲ್‌.ಮಹೇಶ್‌, ಬ್ಯಾಂಕಿನ ನಿರ್ದೇಶಕರು ಉಪಸ್ಥಿತರಿದ್ದರು. ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿ ಪ್ರದ್ಯುಮ್ನ ಸ್ವಾಗತಿಸಿದರು.

 

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೂಲಮಂತ್ರ: ಶಾಸಕ ರಾಜೇಗೌಡ

click me!