ರಾಜ್ಯದ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ನಾಲ್ಕು ಜನ ಪ್ರಾಣವನ್ನ ಕಳೆದುಕೊಂಡಿದ್ದಾರೆ.
ಬೆಂಗಳೂರು(ಜು.02): ರಾಜ್ಯದ ವಿವಿಧೆಡೆ ಇಂದು(ಭಾನುವಾರ) ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ನಾಲ್ಕು ಜನ ಪ್ರಾಣವನ್ನ ಕಳೆದುಕೊಂಡಿದ್ದಾರೆ. ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ಪಟ್ಡಣದ ಹೊರವಲಯದಲ್ಲಿ ನಡೆದಿದೆ.
ಮೃತ ಬೈಕ್ ಸವಾರನ್ನ ಬಸವರಾಜ್ (23) ಅಂತ ಗುರುತಿಸಲಾಗಿದೆ. ಮತ್ತೊಂದು ಬೈಕಿನಲ್ಲಿದ್ದ ರಾಜು, ಅಮರೇಶ್ ಎಂಬುವರಿಗೆ ಗಾಯಗಳಾಗಿವೆ. ಮೃತ ಬಸವರಾಜ್ ಒಂದೇ ಬೈಕ್‌ನಲ್ಲಿ ಇಬ್ಬರು ಗೆಳೆಯರನ್ನ ಕೂರಿಸಿಕೊಂಡು ಹೋಗುತ್ತಿದ್ದ, ಈ ವೇಳೆ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಕೆಎಸ್‌ಅರ್‌ಟಿಸಿ ಎಲೆಕ್ಟ್ರಿಕ್ ಬಸ್ ಮೊದಲ ಅಪಘಾತ: ಚಾಲಕ ಸಾವು, 25 ಮಂದಿಗೆ ಗಾಯ
ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಸವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಜೊತೆಗೆ ಬೈಕ್ ನಲ್ಲಿದ್ದ ಇನ್ನಿಬ್ಬರಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ಹಾವು ಕಚ್ಚಿ ಯುವಕ ಸಾವು
ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಚ್ಚಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಹುಣಚೇಡ್ ಗ್ರಾಮದಲ್ಲಿ ನಡೆದಿದೆ. ಮಾರೆಪ್ಪ ನಾಯಕ (19) ಎಂಬಾತನೇ ಮೃತ ಯುವಕನಾಗಿದ್ದಾನೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರು ಚಾಲಕ ಸಜೀವ ದಹನ
ಟೆಂಪೋ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವವಾಗಿ ದಹನವಾದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ನಿನ್ನೆ(ಶನಿವಾರ) ತಡರಾತ್ರಿ ನಡೆದಿದೆ.
ಬೆಂಗಳೂರು: ಒನ್‌ವೇನಲ್ಲಿ ನುಗ್ಗಿ ಬೈಕ್‌ಗೆ ಲಾರಿ ಡಿಕ್ಕಿ, ಇಬ್ಬರು ಕಾರ್ಮಿಕರ ಸಾವು
ಮೈಸೂರಿನ ಮುಜಾಮಿಲ್ ಅಹಮದ್ ಮೃತಪಟ್ಟ ಚಾಲಕನಾಗಿದ್ದಾನೆ. ಟೆಂಪೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟೆಂಪೋ ಮುಂಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವಾಹ ಡಿಕ್ಕಿ- ಬೈಕ್ ಸವಾರ ಸಾವು
ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಕೃಷ್ಣಗಿರಿ ಕ್ರಾಸ್ ಬಳಿ ನಡೆದಿದೆ. ಗೋವಿಂದಪ್ಪ (38) ಮೃತ ಸವಾರನಾಗಿದ್ದಾನೆ. ಮೃತ ಗೋವಿಂದಪ್ಪ ವೀರಲಗೊಂದಿ ಗ್ರಾಮದವರು ಅಂತ ತಿಳಿದು ಬಂದಿದೆ. ಈ ಸಂಬಂಧ ಪಾವಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.