HSR Layout ಪೊಲೀಸ್‌ ಠಾಣೆಯಲ್ಲಿ ಹೀಗೊಂದು ಅಸಂಬದ್ಧ ಎಫ್‌ಐಆರ್! ಅಧಿಕಾರಿಗಳೇ ಹೈರಾಣು!

Published : Jul 02, 2023, 10:46 AM IST
HSR Layout ಪೊಲೀಸ್‌ ಠಾಣೆಯಲ್ಲಿ ಹೀಗೊಂದು ಅಸಂಬದ್ಧ ಎಫ್‌ಐಆರ್! ಅಧಿಕಾರಿಗಳೇ ಹೈರಾಣು!

ಸಾರಾಂಶ

'ಆತ್ಮಹತ್ಯೆಗೆ ಕಾರಿನ ಲೈಟ್ ಒಡೆದು ಹಾಕಿದ್ದೇ ಕಾರಣ. ಮೃತದೇಹದ ಮೇಲೆ ಕ್ರಮ ಕೈಗೊಳ್ಳಿ' ಹೀಗೊಂದು ಅಸಂಬದ್ಧ ಎಫ್‌ಐಆರ್‌ ಹೆಚ್‌ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಜು.2) : 'ಆತ್ಮಹತ್ಯೆಗೆ ಕಾರಿನ ಲೈಟ್ ಒಡೆದು ಹಾಕಿದ್ದೇ ಕಾರಣ. ಮೃತದೇಹದ ಮೇಲೆ ಕ್ರಮ ಕೈಗೊಳ್ಳಿ' ಹೀಗೊಂದು ಅಸಂಬದ್ಧ ಎಫ್‌ಐಆರ್‌ ಹೆಚ್‌ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಾಝಿಲಾ ಎಂಬಾಕೆ ಇಂಥ ಅಸಂಬದ್ಧ ದೂರು ನೀಡಿರುವ ಮಹಿಳೆ. ಮೃತ ದೇಹದ ಮೇಲೆ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಮಹಿಳೆ. ದೂರುದಾರರು ಈ ರೀತಿ ದೂರು ಕೊಟ್ಟಿದ್ದಾರೆ .ಆದರೆ ಪೊಲೀಸರು ಇದನ್ನು ಗಮನಿಸದೇ ನಿರ್ಲಕ್ಷ್ಯದಿಂದ ದ ಎಫ್ಐಆರ್ ದಾಖಲಿಸಿಕೊಂಡಿರುವುದು ಸ್ಪಷ್ಟವಾಗಿದೆ.

Suicide case: ರಸ್ತೆ ಅಪಘಾತದಿಂದ ಖಿನ್ನತೆ: ನೈಜೀರಿಯನ್‌ ಪ್ರಜೆ ಅತ್ಮಹತ್ಯೆ

 

ಏನಿದು ಘಟನೆ: 

ಫಜೀಲಾ ಎಂಬ ಮಹಿಳೆಯ ಮಗಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಆತ್ಮಹತ್ಯೆಗೆ  ಮನೆಯ ಸಮೀಪದ ರಾಮಕೃಷ್ಣ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನದ ಸಮಿತಿಯವರು ಕಾರಣವೆಂದು ದೂರು ನೀಡಿದ್ದಾಲೆ. ಮನೆಯೆದುರು ಇರುವ ದೇವಾಸ್ಥಾನದ ಧ್ವನಿವರ್ಧಕದಿಂದಾಗ ತೊಂದರೆಯಾಗುತ್ತಿದೆ. ಮಕ್ಕಳು ಫುಟ್ಬಾಲ್ ಆಡುವಾಗಲೂ ತೊಂದರೆ ಕಿರಿಕ್ ಮಾಡಿದ್ದಾರೆ. ಇಷ್ಟು ಸಾಲದೆಂಬಂತೆ ನಮ್ಮೊಂದಿಗೆ ಗಲಾಟೆ ಮಾಡಿ ಕಾರಿನ ಲೈಟ್ ಒಡೆದುಹಾಕಿದ್ದಾರೆ. ಇದರಿಂದ ಮನನೊಂದು ನಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಆದರೆ ದೂರಿನ ಕೊಲೆಯಲ್ಲಿ "ಮೃತದೇಹದ ವಿರುದ್ಧ ಕ್ರಮ ಕೈಗೊಳ್ಳಿ" ಎಂದಿದೆ. 

ಇದು ದೂರುದಾರಿಂದ ಟೈಪಿಂಗ್ ಮಿಸ್ಟೇಕ್ ಆಗಿದ್ದರೆ ಅದನ್ನ ರೈಟರ್ ಅಥವ ಎಸ್ ಹೆಚ್ ಒ ಆದರೂ ಎಫ್ ಐ ಆರ್ ನ್ನು ಪರಿಶೀಲನೆ ನಡೆಸಬೇಕಿತ್ತು. ಎಫ್ ಐ ಆರ್ ನ್ನು ಮೂರ್ನಾಲ್ಕು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ . ಅದರೂ ಇಲ್ಲಿರುವ ತಪ್ಪು ಯಾರ ಗಮನಕ್ಕೆ ಬಂದಿಲ್ಲವೇ? ಎಂಬುದು ಪ್ರಶ್ನೆಯಾಗಿದೆ. ಒಂದು ಸಾವಿಗೆ ಏನಾದರೂ ಕಾರಣ ನೀಡಿ ಎಫ್ ಐ ಆರ್ ಮುಗಿಸಿ ಬಿಟ್ಟರೆ ಸಾಕು ಎನ್ನುವಷ್ಟರ ಮಟ್ಟಿಗೆ ಪೊಲೀಸರು ನಿರ್ಲಕ್ಷ್ಯ, ಹೊಣೆಗೇಡಿತನ ಎದ್ದು ಕಾಣುತ್ತಿದೆ.

ಕೋಲಾರ: ಸ್ನೇಹಿತರಿಗೆ ಮೆಸೇಜ್‌ ಕಳಿಸಿ ಕೆರೆಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಯವೂ ಹೊರಗುತ್ತಿಗೆ?: ಬೆಂಗಳೂರಿನ ಕಾನೂನು ಕೆಲಸ ಮಾಡಿದ ಮಹಾರಾಷ್ಟ್ರ ಪೊಲೀಸರು!
ಕೋಗಿಲು ಅಕ್ರಮ ನಿವಾಸಿಗಳಿಗೆ ಸಿಹಿ ಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ: ನೈಜ ಫಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ!