ಇಂಡಿಯನ್ ಕೋಸ್ಟ್‌ಗಾರ್ಡ್ ಸಾಕಷ್ಟು ಪ್ರಬಲವಾಗಿ ಬೆಳೆದಿದೆ. ಸರ್ಕಾರ ಸಾಕಷ್ಟು ಬಲ ನೀಡಿದೆ. ಈಗಾಗಲೇ ಆಧುನಿಕ ತಂತ್ರಜ್ಞಾನ ಇರುವ ೮ ಹೆಲಿಕಾಪ್ಟರ್ ಇದ್ದು, ಇನ್ನೂ ೮ ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಡಿಯನ್ ಕೋಸ್ಟ್‌ಗಾರ್ಡ್ ಇನ್‌ಸ್ಪೆಕ್ಟರ್ ಆಫ್ ಜನರಲ್ ಮನೋಜ ಬಾಡಕರ ಹೇಳಿದರು.
ಕಾರವಾರ (ಸೆ.14) : ಇಂಡಿಯನ್ ಕೋಸ್ಟ್‌ಗಾರ್ಡ್ ಸಾಕಷ್ಟು ಪ್ರಬಲವಾಗಿ ಬೆಳೆದಿದೆ. ಸರ್ಕಾರ ಸಾಕಷ್ಟು ಬಲ ನೀಡಿದೆ. ಈಗಾಗಲೇ ಆಧುನಿಕ ತಂತ್ರಜ್ಞಾನ ಇರುವ ೮ ಹೆಲಿಕಾಪ್ಟರ್ ಇದ್ದು, ಇನ್ನೂ ೮ ಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಡಿಯನ್ ಕೋಸ್ಟ್‌ಗಾರ್ಡ್ ಇನ್‌ಸ್ಪೆಕ್ಟರ್ ಆಫ್ ಜನರಲ್ ಮನೋಜ ಬಾಡಕರ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಆಧುನಿಕ ಹೆಲಿಕಾಪ್ಟರ್‌ಗಳು ಕೋಸ್ಟ್‌ಗಾರ್ಡ್ ಬಳಿಯಿದ್ದು, ಕಾರ್ಯಾಚರಣೆಗೆ ಅನುಕೂಲವಾಗುತ್ತಿವೆ. ಬೇರೆ ಬೇರೆ ರಕ್ಷಣಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಕೆಲವು ದಿನಗಳ ಹಿಂದೆ ಚೀನಾದ ಶಿಪ್ ಒಂದರಲ್ಲಿ ತೊಂದರೆ ಆದಾಗ ಅಲ್ಲಿಗೆ ತೆರಳಿ ತಮ್ಮ ತಂಡ ರಕ್ಷಣಾ ಕಾರ್ಯ ಮಾಡಿದೆ ಎಂದರು.
undefined
ಮೈನವಿರೇಳಿಸುವ ಕೋಸ್ಟ್ ಗಾರ್ಡ್ ಅಣಕು ಕಾರ್ಯಾಚರಣೆ: ಸಮುದ್ರದಲ್ಲಿ ಒಂದು ದಿನ ವಿಶೇಷ!
ಕಾರವಾರ ತಾಲೂಕಿನ ಅಮದಳ್ಳಿಯಲ್ಲಿ ಕೋಸ್ಟ್‌ಗಾರ್ಡ್ ಸ್ವಂತ ಕಚೇರಿ ಹಾಗೂ ವಸತಿ ಸಮುಚ್ಚಯ ನಿರ್ಮಾಣ ಹಂತದಲ್ಲಿದ್ದು, ಎರಡರಿಂದ ಎರಡುವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ೭೫೦೦ ಕಿಮೀ ದೂರದ ಕರಾವಳಿಯಲ್ಲಿ ಕೋಸ್ಟಲ್ ಸೆಕ್ಯೂರಿಟಿ ನೆಟ್ವರ್ಕ್(ಸಿಎಸ್‌ಎನ್) ಅಳವಡಿಕೆ ಮಾಡಲಾಗುತ್ತಿದೆ. ರಡಾರ್, ಕ್ಯಾಮೆರಾ ಮೊದಲಾದ ಸೌಲಭ್ಯ ಇರುತ್ತದೆ. ಇದು ಅನುಷ್ಠಾನಗೊಳ್ಳುವುದರಿಂದ ಶಿಪ್, ಹಡಗುಗಳ ಚಲನ-ವಲನ ಬಗ್ಗೆ ನಿಗಾ ಇಡಲು ಅನುಕೂಲವಾಗಲಿದೆ ಎಂದು ವಿವರಿಸಿದರು.
ಕಳೆದ ೩೭ ವರ್ಷದಿಂದ ದೇಶ ಸೇವೆಯಲ್ಲಿ ತೊಡಗಿದ್ದು, ಈ ತಿಂಗಳು ನಿವೃತ್ತಿಯಾಗಲಿದ್ದೇನೆ ಎಂದು ಇಂಡಿಯನ್ ಕೋಸ್ಟ್‌ಗಾರ್ಡ್‌ನ ಇನ್‌ಸ್ಪೆಕ್ಟರ್ ಆಫ್ ಜನರಲ್ ಮನೋಜ ಬಾಡಕರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಮೂಲತಃ ಇಲ್ಲಿಯವನೇ ಆಗಿದ್ದು, ಕಾರವಾರದಲ್ಲಿ ಉಳಿದುಕೊಂಡು ಜನರ ಸೇವೆ ಮಾಡುತ್ತೇನೆ. ಯಾವ ರೀತಿ ಜನರ ಸೇವೆಯಲ್ಲಿ ತೊಡಗಬೇಕು ಎನ್ನುವುದನ್ನು ಸೇವಾ ನಿವೃತ್ತಿಯ ಬಳಿಕ ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು.
ಕೋಸ್ಟ್ ಗಾರ್ಡ್ ಯೋಜನೆ ಸ್ಥಗಿತ: ರೇಂಜ್ ಕಮಾಂಡರ್ ಬಾಡ್ಕರ್