ತಹಶೀಲ್ದಾರ್ ಕಚೇರಿಯ ಮಧ್ಯವರ್ತಿಗಳ ಹಾವಳಿ ಮುಖ್ಯದ್ವಾರದಲ್ಲಿ ಚೇರ್ ಹಾಕಿಕೊಂಡ ಕುಳಿತ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ತುಮಕೂರು (ಸೆ.14): ತಹಶೀಲ್ದಾರ್ ಕಚೇರಿಯ ಮಧ್ಯವರ್ತಿಗಳ ಹಾವಳಿ ಮುಖ್ಯದ್ವಾರದಲ್ಲಿ ಚೇರ್ ಹಾಕಿಕೊಂಡ ಕುಳಿತ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.
ಕೊರಟಗೆರೆ ತಹಸೀಲ್ದಾರ್ ಮುನಿಸ್ವಾಮಿ ತಾಲೂಕು ಕಚೇರಿ ಮುಖ್ಯದ್ವಾರದಲ್ಲೇ ಚೇರ್ ಹಾಕಿ ಕುಳಿತು ಕೆಲಸ ನಿರ್ವಹಿಸುತ್ತಿರುವುದು ಎಲ್ಲೆಡೆ ವೈರಲ್ ಆಗಿದೆ. ಕೊರಟಗೆರೆ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ತಹಶೀಲ್ದಾರ್ ಮುನಿಸ್ವಾಮಿ ರೆಡ್ಡಿ ಹಲವು ಬಾರಿ ಎಚ್ಚರಿಕೆ ನೀಡಿದ್ರೂ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಾಧ್ಯವಾಗಿಲ್ಲ. ಅಲ್ಲದೆ ಮಧ್ಯವರ್ತಿಗಳ ಹಾವಳಿ ತಡೆಯುವಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ. ಹೀಗಾಗಿ ಎಚ್ಚೆತ್ತ ತಹಶೀಲ್ದಾರ್ ಮುನಿಸ್ವಾಮಿರೆಡ್ಡಿ , ಈ ಬಾರಿ ತಮ್ಮ ಕಚೇರಿ ಕೊಠಡಿಯಿಂದ ಹೊರ ಬಂದು ತಾಲ್ಲೂಕು ಕಚೇರಿಯ ಮುಖ್ಯದ್ವಾರದಲ್ಲೇ ಕುರ್ಚಿ ಹಾಕಿ ಕುಳಿತು ಸಾರ್ವಜನಿಕರ ದೂರು ಆಲಿಸಿದ್ದಾರೆ.
ಉದ್ಘಾಟನೆಯಾದರೂ ಕ್ರೀಡಾಪಟುಗಳಿಗಿಲ್ಲ ಅಭ್ಯಾಸ ಭಾಗ್ಯ: 66 ಕೋಟಿ ವೆಚ್ಚದ ಹೈಟೆಕ್ ಕ್ರೀಡಾಂಗಣ ಮೂಲೆ ಗುಂಪು..!
ಮಧ್ಯವರ್ತಿಗಳ ಬಳಿಗೆ ಹೋಗದೆ ನೇರವಾಗಿ ತಮ್ಮ ಬಳಿಯೇ ಬರುವಂತೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ತಹಶೀಲ್ದಾರ್ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.