Mysore ಮುಂದಿನ ಸಿಎಂ ಸಿದ್ಧರಾಮಯ್ಯ.. ಎಂದು ಕೂಗಿ ಜೈಕಾರ!

By Suvarna News  |  First Published Mar 26, 2022, 8:41 PM IST

ಪ್ರೊಫೆಸರ್ ಕೆಎಸ್ ಭಗವಾನ್ ಅವರ ಪುಸ್ತಕ ಬಿಡುಗಡೆ

ಪುಸ್ತಕ ಬಿಡುಗಡೆಗೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ

ಈ ವೇಳೆ ಸಿದ್ಧರಾಮಯ್ಯ ಮುಂದಿನ ಸಿಎಂ ಎಂದು ಕೂಗಿ ಜೈಕಾರ


ಮೈಸೂರು (ಮಾ.26): ರಾಜ್ಯದಲ್ಲಿ ಮತ್ತೆ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋ ವಿಚಾರದ ಕುತೂಹಲ ಆರಂಭವಾಗಿದೆ. ಶನಿವಾರ ಮೈಸೂರಿನಲ್ಲಿ ಪ್ರೊಫೆಸರ್ ಕೆಎಸ್ ಭಗವಾನ್ (KS Bhagavan) ಅವರ ಕೃತಿ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ  ಸಿದ್ಧರಾಮಯ್ಯ (Siddaramaiah) ಅವರಿಗೆ ಅಭಿಮಾನಿಗಳು, (Fans) "ಸಿದ್ಧರಾಮಯ್ಯ ನೆಕ್ಸ್ಟ್ ಸಿಎಂ" ಎಂದು ಜೈಕಾರ ಕೂಗಿ ಸ್ವಾಗತಿಸಿದ್ದಾರೆ.

ಹಿರಿಯ ಸಾಹಿತಿ ಹಾಗೂ ವಿವಾದಗಳಿಂದಲೇ ಸುದ್ದಿಯಾಗುವ ಫ್ರೊಫೆಸರ್ ಕೆಎಸ್ ಭಗವಾನ್ ಅವರು ಬರೆದಿರುವ ಸಮಸದ್ವಿವೇಕ ಕೃತಿ ಬಿಡುಗಡೆ ಕಾರ್ಯಕ್ರಮಕ್ಕಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಶನಿವಾರ ಮೈಸೂರಿಗೆ (Mysore ) ಆಗಮಿಸಿದ್ದರು. ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಿದ್ಧರಾಮಯ್ಯ ಕಾರ್ಯಕ್ರಮಕ್ಕಾಗಿ ಬರುತ್ತಿರುವ ವೇಳೆ ಕೆಲ ಅಭಿಮಾನಿಗಳು, ಸಿದ್ಧರಾಮಯ್ಯ ಮುಂದಿನ ಸಿಎಂ ಎಂದು ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು.

 ಹಿರಿಯ ಸಾಹಿತಿ ಪ್ರೊ.ಕೆ.ಎಸ್ ಭಗವಾನ್ ಕುರಿತು ರಚಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ಧರಾಮಯ್ಯ ಅವರಿಗೆ ಈ ವೇಳೆ ಸ್ವಲ್ಪ ಕಸಿವಿಸಿ ಆದರೂ, ನಗುತ್ತಲೇ ಇದನ್ನು ಗಮನಿಸಿದರು. ಕಾರ್ಯಕ್ರಮದ ವೇದಿಕೆ ಏರುವವರೆಗೂ ಅಭಿಮಾನಿಗಳು ಈ ಜೈಕಾರ ಹಾಕುತ್ತಿದ್ದರು. ಇದಲ್ಲದೆ, ಸಿದ್ದರಾಮಯ್ಯ ಮೇಲೆ ಹೂ ಎರಚಿ ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದ ಅಭಿಮಾನಿಗಳು. ಈ ಹಿಂದೆಯೂ ರಾಜ್ಯದಲ್ಲಿ ಮುಂದಿನ ಸಿಎಂ ಕೂಗು ಭಾರೀ ಚರ್ಚೆಗೆ ಕಾರಣವಾಗಿತ್ಉತ.

ಎಂಎಲ್‌ಸಿ ತಿಮ್ಮಯ್ಯ, ಮೈಸೂರು ವಿವಿ ಕುಲಪತಿ ಪ್ರೊ‌.ಹೇಮಂತ್ ಕುಮಾರ್, ಸಾಹಿತಿಗಳಾದ ಡಾ.ಸಿ.ವೆಂಕಟೇಶ್, ಡಾ.ನಾಗಣ್ಣ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಂ, ಚಿಂತಕಿ ಬಿ.ಟಿ.ಲಲಿತಾ ನಾಯಕ್ ಭಾಗಿ. ಕಾರ್ಯಕ್ರಮದಲ್ಲಿ ಡಾ.ಪುನೀತ್‌ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಲಾಯಿತು.

Latest Videos

undefined

ಇತ್ತೀಚೆಗಷ್ಟೇ ತಮ್ಮ ಸ್ವಗ್ರಾಮ ಸಿದ್ಧರಾಮಹುಂಡಿಯಲ್ಲಿ ಮಾತನಾಡಿದ್ದ ಸಿದ್ಧರಾಮಯ್ಯ, ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ನಂತರ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಆದರೆ, ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದರು.

ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಗೆ ತುಟಿ ಪಿಟಿಕ್ ಎನ್ನದ ಕಾಂಗ್ರೆಸ್

ಮುಂದಿನ ಚುನಾವಣೆಗೆ ಬಹಳಷ್ಟು ಕ್ಷೇತ್ರದ ನಾಯಕರು ತಮ್ಮಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ನಾನು ಇನ್ನೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಿರ್ಧರಿಸಿಲ್ಲ. ಚುನಾವಣೆಗೆ(Election) ಇನ್ನೂ ಒಂದು ವರ್ಷವಿದೆ. ಈಗಲೇ ಈ ಬಗ್ಗೆ ತೀರ್ಮಾನ ಮಾಡಲ್ಲ. ವರುಣ, ಚಾಮುಂಡೇಶ್ವರಿ, ಹುಣಸೂರು ಕ್ಷೇತ್ರದಿಂದಲ್ಲೂ ಒತ್ತಡವಿದೆ. ರಾಜಕೀಯ ಪುನರ್‌ಜನ್ಮ ಕೊಟ್ಟಚಾಮುಂಡೇಶ್ವರಿ ಕ್ಷೇತ್ರದ ಜನರೆ ನನ್ನನ್ನು ಸೋಲಿಸಿದರು. ಆದರೂ ನಾನು ಅವರನ್ನು ದ್ವೇಷಿಸಲಿಲ್ಲ. ಆಗ ಮತ್ತೆ ಅವರೇ ನನ್ನನ್ನು ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ ಎಂದು ಹೇಳಿದ್ದರು.
ಊರ ಹಬ್ಬ ಸಿದ್ದರಾಮೇಶ್ವರ ಚಿಕ್ಕಮ್ಮತಾಯಿ ಜಾತ್ರಾ ಮಹೋತ್ಸವಕ್ಕಾಗಿ ಸಿದ್ದರಾಮನ ಹುಂಡಿಯಲ್ಲಿ ಉಳಿದುಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಜಾಲಿ ಮೂಡ್‌ನಲ್ಲಿದ್ದರು. ರಾಜಕೀಯ ಜಂಜಾಟ ಮರೆತು ಜಾಲಿಯಾಗಿದ್ದ ಸಿದ್ದರಾಮಯ್ಯ  ಗ್ರಾಮ ದೇವತೆಯಾದ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಬರೊಬ್ಬರಿ 45 ನಿಮಿಷ ವೀರ ಕುಣಿತ ಕುಣಿದು ಕುಪ್ಪಳಿಸಿದ್ರು. ಅವರು ವೀರಕುಣಿತ ಮಾಡಿರುವ ವಿಡಿಯೋ ರಾಜ್ಯಾದ್ಯಂತ ಸಖತ್ ವೈರಲ್ ಆಗಿದೆ.

Karnataka Politics: 2023ರ ಚುನಾವಣೆ ನನ್ನ ಕೊನೆ ಎಲೆಕ್ಷನ್‌: ಸಿದ್ದು

ಇನ್ನೊಂದೆಡೆ ಸಿದ್ದರಾಮಯ್ಯ ಅವರಿಗೆ, ಸ್ವಾಮೀಜಿಗಳ ವೇಷಭೂಷಣದ ಕುರಿತಾಗಿ ಮಾಡಿರುವ ಹೇಳಿಕೆಗಳು ಕಾಡುತ್ತಿವೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೇಳುವ ಹಾದಿಯಲ್ಲಿ ಸ್ವಾಮೀಜಿಗಳೂ ತಲೆಗೆ ಬಟ್ಟೆ ಹಾಕಿಕೊಳ್ತಾರೆ ಎಂದು ಹೇಳಿದ ಮಾತು ರಾಜ್ಯಾದ್ಯಂತ ವಿವಾದದ ಕಿಚ್ಚು ಎಬ್ಬಿಸಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸಿದ್ಧರಾಮಯ್ಯ ತಾವು, ಹಿಜಾಬ್ ಕುರಿತಾಗಿ ಮಾತನಾಡಿಲ್ಲ. ದುಪ್ಪಟ್ಟಾ ಬಗ್ಗೆ ಮಾತ್ರ ಕೇಳಿದ್ದೇನೆ. ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ ಎಂದು ಹೇಳಿದ್ದಾರೆ.

click me!