ಆರ್ಥಿಕ ಸ್ಥಿತಿ ಆಧರಿಸಿ ಮಕ್ಕಳ ಸುಪರ್ದಿ ನಿರ್ಧಾರ ಅಸಾಧ್ಯ: ಹೈಕೋರ್ಟ್‌

Published : Apr 18, 2024, 11:48 AM IST
ಆರ್ಥಿಕ ಸ್ಥಿತಿ ಆಧರಿಸಿ ಮಕ್ಕಳ ಸುಪರ್ದಿ ನಿರ್ಧಾರ ಅಸಾಧ್ಯ: ಹೈಕೋರ್ಟ್‌

ಸಾರಾಂಶ

ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು(ಏ.18):  ಆರ್ಥಿಕ ಸದೃಢತೆ ಅಂಶವೊಂದೇ ಮಗುವಿನ ಸುಪರ್ದಿ ವಿಷಯವನ್ನು ನಿರ್ಧರಿಸಲು ಆಧಾರವಾ ಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಹಣಕಾಸಿನ ಸಾಮರ್ಥ್ಯ ಹೊಂದಿರು ವುದರಿಂದ 14 ವರ್ಷದ ಅಪ್ರಾಪ್ತ ಪುತ್ರಿಯನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ವಿಚ್ಛೇದಿತ ಪತ್ನಿಗೆ ಆದೇಶಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದೆ.

ಮಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಬೆಂಗಳೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಿಂದ 'ನ್ಯಾಯಾಂಗ ನಿಂದನೆ' ನೋಟಿಸ್‌ ಜಾರಿ

ಅಪ್ರಾಪ್ತ ಮಗಳನ್ನು ಮೇಲ್ಮನವಿದಾರನ ವಶಕ್ಕೆ ನೀಡಲು ನಿರಾಕರಿಸಿದ ಹೈಕೋರ್ಟ್, ಮಗಳ ಭೇಟಿ ಹಕ್ಕು ನೀಡಲು ಮತ್ತು ಮಗಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆಗೆ ಹಣಕಾಸಿನ ಸೌಲಭ್ಯ ಒದಗಿಸಲು ಅವಕಾಶ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಲು ಮೇಲ್ಮನವಿದಾರ ಸ್ವತಂತ್ರರಾಗಿದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದೆ.

ಪ್ರಕರಣದ ವಿವರ: 

ಪ್ರಕರಣದಲ್ಲಿ ಮೇಲ್ಮನವಿದಾರ ಪತಿ ಮತ್ತು ಆತನ ಪತ್ನಿ 2008ರ ಏ.27ರಂದು ಮದುವೆಯಾಗಿ ದ್ದರು. 2009ರ ಸೆ.29ರಂದು ದಂಪತಿಗೆ ಪುತ್ರಿ ಜನಿಸಿದ್ದಳು. ಕೌಟುಂಬಿಕ ವ್ಯಾಜ್ಯ ದಿಂದ 2010ರ ನಂತರ ಪತ್ನಿ ಮೇಲ್ಮನವಿ ದಾರನಿಂದ ಬೇರ್ಪಟ್ಟು, ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ವಿಚ್ಛೇದನ ಕೋರಿ ಪತ್ನಿ 2011ರಲ್ಲಿ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯವು 2012ರಲ್ಲಿ ದಂಪತಿಯ ವಿವಾಹ ಅನೂರ್ಜಿತಗೊಳಿಸಿ, ವಿಚ್ಛೇದನ ಮಂಜೂರು ಮಾಡಿತ್ತು.
ನಂತರ ಮಗಳನ್ನು ಶಾಶ್ವತವಾಗಿ ತನ್ನ ಸುಪರ್ದಿಗೆ ನೀಡಲು ಪತ್ನಿಗೆ ಆದೇಶಿಸುವಂತೆ ಕೋರಿ ಮೇಲ್ಮನವಿದಾರ, 'ಪೋಷಕರು ಮತ್ತು ಪಾಲಕರ ಕಾಯ್ದೆ' - 1890ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು
ವಜಾಗೊಳಿಸಿ ನೆಲಮಂಗಲದ ಕೌಟುಂಬಿಕ ಹಿರಿಯ ಸಿವಿಲ್ ನ್ಯಾಯಾಲಯ 2019ರ ಡಿ.19ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಬೇಕು ಹಾಗೂ ಮಗಳನ್ನು ತನ್ನ ಸುಪರ್ದಿಗೆ ನೀಡಿ ಆದೇಶಿಸಬೇಕು ಎಂದು ಕೋರಿ ಮೇಲ್ಮನವಿದಾರ 2021ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿದಾರ ಪರ ವಕೀಲರು, ಕೌಟುಂಬಿಕ ನ್ಯಾಯಾಲಯವು ತಪ್ಪಾಗಿ ಅರ್ಜಿ ವಜಾಗೊಳಿಸಿದೆ. ಮೇಲ್ಮನವಿದಾರರು ಉತ್ತಮ ವೇತನದ ಉದ್ಯೋಗ ಹೊಂದಿದ್ದಾರೆ. ಹಣಕಾಸಿನ ಸಾಮರ್ಥ ಉತ್ತಮವಾಗಿದ್ದು, ಮಗುವನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಮೇಲ್ಮನವಿದಾರರ ಸುಪರ್ದಿಗೆ ಮಗಳನ್ನು ನೀಡುವುದರಿಂದ ಆಕೆಯ ಹಿತರಕ್ಷಣೆ ಮಾಡಿದಂತಾಗುತ್ತದೆ ಎಂದು ಕೋರಿದರು.

ಎದೆಹಾಲು ಮಾರಾಟ ತಡೆಗೆ ಕಾಯ್ದೆ ಇದೆಯೇ?: ಹೈಕೋರ್ಟ್‌

ಮೇಲ್ಮನಿದಾರನ ಪತ್ನಿಯ ಪರ ವಕೀಲರು ವಾದಿಸಿ, 2013ರಲ್ಲಿ ಡಿ.12ರಂದು ಮೇಲ್ಮನವಿದಾರ ಮರು ಮದುವೆಯಾಗಿದ್ದಾರೆ. ಮಗಳ ಪರವಾಗಿ ಪತ್ನಿ ಮೇಲ್ಮನವಿದಾರನ ಆಸ್ತಿಯಲ್ಲಿ ಪಾಲು ಕೋರಿ ದಾವೆ ಹೂಡಿದ್ದಾರೆ. ನಂತರ ಮಗಳ ಸುಪರ್ದಿಗೆ ಕೋರಿ ಮೇಲ್ಮನವಿದಾರ ಅರ್ಜಿ ಸಲ್ಲಿಸಿದ್ದಾರೆ. ಈ ಅಂತ ಪರಿಗಣಿಸಿಯೇ ಕೌಟುಂಬಿಕ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು. ಮೇಲ್ಮನವಿದಾರ ಮಗಳ ಭೇಟಿಗೆ ಕೋರಿ ಯಾವುದೇ ಅರ್ಜಿ ಸಹ ಸಲ್ಲಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಹಣಕಾಸಿನ ಸಾಮರ್ಥವೊಂದೇ ಮಗುವಿನ ಸುಪರ್ದಿ ವಿಚಾರ ನಿರ್ಧರಿಸಲು ಆಧಾರವಾಗುವು ದಿಲ್ಲ. ಇದೇ ಅಭಿಪ್ರಾಯ ವ್ಯಕ್ತಪಡಿಸಿ ಕೌಟುಂಬಿಕ ನ್ಯಾಯಾಲಯವು ಮೇಲ್ಮನವಿ ದಾರನ ಅರ್ಜಿ ವಜಾಗೊಳಿಸಿದೆ. ಕೌಟುಂಬಿಕ ನ್ಯಾಯಾಲಯದ ಅಭಿಪ್ರಾಯ ಹಾಗೂ ಆದೇಶವನ್ನು ಅಕ್ರಮವೆಂದು ಹೇಳಲಾಗದು. ಇನ್ನೂ ಮೇಲ್ಮನವಿದಾರನೊಂದಿಗೆ ಪುತ್ರಿ ಸುಪರಿಚಿತರಾಗಿದ್ದಾರೆ (ಫೆಮಿಲಿಯರ್) ಎನ್ನುವುದನ್ನು ಸಾಬೀತುಪಡಿಸುವ ದಾಖಲೆಯನ್ನು ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸಿಲ್ಲ. ಆದ್ದರಿಂದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಲು ಸಕಾರಣ ಕಂಡು ಬರುತ್ತಿಲ್ಲ ಎಂದು ತಿಳಿಸಿ ಮೇಲ್ಮನವಿ ವಜಾಗೊಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್