ಲೋಕಸಭಾ ಚುನಾವಣೆ ಮುಕ್ತಾಯವಾದ 15 ದಿನಗಳ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಪ್ಲ್ಯಾನ್ ಹಾಕಿದ್ದಾರೆ. ಇದರಿಂದ ಕೈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರ (ಏ.17): ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಮುಕ್ತಾಯವಾದ 15 ದಿನಗಳ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಪ್ಲ್ಯಾನ್ ಹಾಕಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ಒಡೆದು ಹೋಗಿ, ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿದ 15 ದಿನಗಳಲ್ಲಿ ಡಿಕೆಶಿ ಸಿಎಂ ಆಗುವ ಪ್ಲಾನ್ ಹಾಕಿದ್ದಾರೆ. ಕಾಂಗ್ರೆಸ್ ಒಡೆದು ಹೋಗುತ್ತೆ, ಹೊಸ ಸರ್ಕಾರ ರಚನೆಯಾಗುತ್ತದೆ. ಸಿಎಂ ಸಿದ್ದರಾಮಯ್ಯ ಇಳಿಸೋಕೆ ಹೋದ್ರೆ ಕಾಂಗ್ರೆಸ್ ಇರದು. ಸರ್ಕಾರ ಪತನಬಾಗಲಿದೆ. ಆದರೆ, ಡಿ.ಕೆ.ಶಿವಕುಮಾರ್ ಈಗಾಗಲೇ ತನ್ನ ಪರವಾಗಿರುವ ಲೋಕಸಭಾ ಸದಸ್ಯರ ಆಯ್ಕೆಗೆ ಸ್ಕೆಚ್ ಹಾಕಿದ್ದಾರೆ. ಚುನಾವಣೆ ಮುಗಿದ ಬಳಿಕ ಡಿಕೆಶಿ ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಇದೇ ಕಾರಣಕ್ಕೆ ಬಾಗಲಕೋಟೆಯಲ್ಲಿ ಒಕ್ಕಲಿಗರು, ಲಿಂಗಾಯತರು ಒಂದೆ ಎನ್ನುವ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದಾರೆಂದು ಮಾಹಿತಿ ನೀಡಿದರು.
ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕೊಂಡ ದಾಖಲೆಯಿದೆ; ಹೆಚ್.ಡಿ. ದೇವೇಗೌಡ ಆರೋಪ
ಸಚಿವ ಶಿವಾನಂದ ಪಾಟೀಲ್ ಮಗಳನ್ನ ಗೆಲ್ಲಿಸಿಕೊಟ್ಟರೆ ಶಿವಾನಂದ ಪಾಟೀಲ್ ನನ್ನ ಜೊತೆಗಿರ್ತಾರೆ. ನಾನು ಅವರು ಸೇರಿ ಸಿದ್ದರಾಮಯ್ಯ ಅವರನ್ನ ಇಳಿಸೋಕೆ ಕಾರ್ಯತಂತ್ರ ಮಾಡಿದ್ದೇವೆ ಎನ್ನುವ ಸಂದೇಶವನ್ನ ಜನರಿಗೆ ಡಿಕೆಶಿ ಕೊಟ್ಟಿದ್ದಾರೆ. ಮುಂದೆ ಕಾಂಗ್ರೆಸ್ ಒಡೆದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ. ಹೀಗಾಗಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪರವಾಗಿರುವ ಅಭ್ಯರ್ಥಿಗಳನ್ನ ಸೋಲಿಸಬೇಕು. ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ಮಾಡದೆ ಹೋದರೆ ಅವರ ಸಿಎಂ ಸ್ಥಾನ ಹೋಗೋದು ಗ್ಯಾರಂಟಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆಗೆ ಕೊಟ್ಟಿರುವ ಪಂಚ ಗ್ಯಾರಂಟಿಗಳಲ್ಲಿ ಸಿದ್ದರಾಮಯ್ಯ ಸಿಎಂ ಹೋಗೋದು ಕೂಡ ಒಂದು ಗ್ಯಾರಂಟಿ. ಬೆಳಗಾವಿ, ಕಾರವಾರ, ಬಾಗಲಕೋಟೆಯಲ್ಲಿ ಡಿ.ಕೆ.ಶಿವಕುಮಾರ್ ಬೆಂಬಲಿಗರಿದ್ದಾರೆ. ಈ ಬೆಂಬಲಿಗರನ್ನ ಸಿದ್ದರಾಮಯ್ಯ ಸೋಲಿಸದಿದ್ದರೆ ಅವರ ಖುರ್ಚಿ ಹೋಗೋದು ಗ್ಯಾರಂಟಿ. ಹೀಗಾಗಿ, ನಾನು ಕೂಡ ಗ್ಯಾರಂಟಿಯಿಂದಲೇ ಹೇಳ್ತೇನೆ ಸಿದ್ದರಾಮಯ್ಯ ಗ್ಯಾರಂಟಿ ಸೋಲ್ತಾರೆ ಎಂದು ಹೇಳಿದರು.
ಮಂಡ್ಯದಲ್ಲಿ ಮಗ ಸೋತ ಬಳಿಕ ಮತ್ತೆ ಬಂದಿರುವ ಕುಮಾರಸ್ವಾಮಿಯನ್ನೂ ಸೋಲಿಸಿ ಮನೆಗೆ ಕಳುಹಿಸಿ: ಸಿಎಂ ಸಿದ್ದರಾಮಯ್ಯ
ವಚನಾನಂದ ಸ್ವಾಮೀಜಿ ಕಾಂಗ್ರೆಸ್‌ಗೆ ಬುಕ್ ಆಗಿದ್ದಾರೆ. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ವಚನಾನಂದ ಸ್ವಾಮೀಜಿ ಎಷ್ಟು ಹಣ ಒಯ್ದಿದ್ದಾರೆ, ಎಷ್ಟು ದುರುಪಯೋಗ ಮಾಡಿಕೊಂಡಿದ್ದಾರೆ ಹೇಳಲಿ. ಸ್ವತಃ ಸಿಎಂ ಬೊಮ್ಮಾಯಿ ಅವರ ಹೆಲಿಕಾಪ್ಟರ್‌ನಲ್ಲಿ ವಚನಾನಂದ ಸ್ವಾಮೀಜಿ ಅಡ್ಡಾಡ್ತಿದ್ದರು. ಬಿಜೆಪಿ ಸರ್ಕಾರ ಹತ್ತಾರು ಕೋಟಿ ಕೊಟ್ಟಿದೆ. ಈಗ ಬಿಜೆಪಿ ವಿರುದ್ಧ ಮಾತನಾಡ್ತಿದ್ದಾರೆ ಎಂದರೆ ಕಾಂಗ್ರೆಸ್ ಗೆ ಬುಕ್ ಆಗಿದ್ದಾರೆ. ವಚನಾನಂದ ಬುಕ್ಕಿಂಗ್ ಗಿರಾಕಿ. ಪರಮಪೂಜ್ಯ ಬುಕ್ಕಿಂಗ್ ಮಹಾಸ್ವಾಮಿಗಳು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ವ್ಯಂಗ್ಯವಾಡಿದರು.