ಹೂವಿನಹಡಗಲಿ (ಫೆ.6) : ರಾಜ್ಯದಲ್ಲಿ ಅನೇಕ ಶೋಷಿತ ಸಮುದಾಯಗಳಿವೆ. ಮೀಸಲಾತಿಗಾಗಿ ಸಾಕಷ್ಟುಹೋರಾಟಗಳು ನಡೆಯುತ್ತಿವೆ. ಆದರೂ ಮೀಸಲಾತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುತ್ತಿಲ್ಲ. ಆದರೆ ಮೀಸಲಾತಿ ಕೇಳದ ಮೇಲ್ವರ್ಗಕ್ಕೆ ಶೇ. 10ರಷ್ಟುಮೀಸಲಾತಿ ನೀಡಿದ್ದಾರೆ. ಈ ಕುರಿತು ಸಂವಿಧಾನದಲ್ಲಿ ತಿದ್ದುಪಡಿಯೇ ಆಗಿಲ್ಲ. ಜತೆಗೆ ಮೇಲ್ವರ್ಗಕ್ಕೆ ಶೇ.10ರಷ್ಟುಮೀಸಲಾತಿ ನೀಡಬೇಕೆಂಬ ನಿಯಮವೇ ಇಲ್ಲ, ಆ ರೀತಿ ನಿಯಮ ಇದ್ದರೆ ನಾನು ರಾಜೀನಾಮೆ ನೀಡುತ್ತೇನೆಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ತಾಲೂಕಿನ ಮೈಲಾರ ಗ್ರಾಮದಲ್ಲಿ ಕಾಗಿನೆಲೆ ಮಹಾಸಂಸ್ಥಾನ ಪೀಠದಿಂದ ನಿರ್ಮಾಣಗೊಂಡ ಗಂಗಮಾಳಮ್ಮ ದೇವಿ ಯಾತ್ರಾ ನಿವಾಸವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ,
undefined
ಶೇ.10 ಮೇಲ್ವರ್ಗ ಮೀಸಲು ವಿರುದ್ಧ ಸುಪ್ರೀಂಗೆ ಕಾಂಗ್ರೆಸ್ ನಾಯಕಿ ಅರ್ಜಿ
ಮೇಲ್ವರ್ಗಕ್ಕೆ ಶೇ.10ರಷ್ಟುಮೀಸಲಾತಿ ನೀಡಿದಾಗ ಯಾವ ಸಮುದಾಯಗಳ ಸ್ವಾಮೀಜಿಗಳೂ ವಿರೋಧಿಸಲಿಲ್ಲ, ನೀವೆಲ್ಲ ಅಂಥ ವಿಷಯಗಳ ಬಗ್ಗೆ ಆಸಕ್ತಿ ವಹಿಸುವ ಮೂಲಕ ಸಮಾಜ ಜಾಗೃತಗೊಳಿಸಬೇಕಿದೆ. ಇದನ್ನು ನಾನು ಹೇಳಬಾರದು, ಆದರೂ ಹೇಳುತ್ತಿದ್ದೇನೆ ಎಂದು, ವೇದಿಕೆ ಮೇಲಿದ್ದ ವಿವಿಧ ಸಮುದಾಯಗಳ ಪೀಠದ ಸ್ವಾಮೀಜಿಗಳ ಕಡೆಗೆ ಮುಖ ಮಾಡಿ ಹೇಳಿದರು.
ಹಣೆಗೆ ತುಪ್ಪ: ರಾಜ್ಯದ ಹಾಲುಮತ ಸಮುದಾಯಕ್ಕೆ ಎಸ್ಟಿಮೀಸಲಾತಿಯನ್ನು ಕಾನೂನಾತ್ಮಕವಾಗಿ ನೀಡುತ್ತೇವೆಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಮೂಗಿನ ಬದಲು ಹಣೆಗೇ ತುಪ್ಪ ಸವರಿದೆ. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯಾದಗಿರಿ, ಕೊಡಗು, ಕಲಬುರಗಿ ಸೇರಿ 4 ಜಿಲ್ಲೆಗಳ ಹಾಲುಮತ ಸಮುದಾಯಕ್ಕೆ ಎಸ್ಟಿಮೀಸಲು ನೀಡಬೇಕೆಂದು ಕೇಂದ್ರಕ್ಕೆ ಕಳುಹಿಸಿದ ಶಿಫಾರಸ್ಸಿಗೆ ಇನ್ನೂ ಒಪ್ಪಿಗೆ ನೀಡಿಲ್ಲ. ಇವರು ಕಾನೂನಾತ್ಮಕವಾಗಿ ಎಸ್ಟಿಮೀಸಲಾತಿ ನೀಡುತ್ತೇವೆಂದು ಬಿಜೆಪಿ ಸರ್ಕಾರ ಹೇಳಿದೆ, ಆದಷ್ಟುಬೇಗ ನೀಡಲಿ ಎಂದರು.
ಮೇಲ್ವರ್ಗದ ಬಡವರ 10% ಮೀಸಲು ಉಳಿಯುತ್ತಾ? ಇಂದು ಸುಪ್ರೀಂ ತೀರ್ಪು
ಹಿಂದುತ್ವ ಮನುವಾದಿಗಳ ಧರ್ಮ: ಹಿಂದೂ ಬೇರೆ, ಹಿಂದುತ್ವ ಬೇರೆ. ಹಿಂದುತ್ವ ಮನುವಾದಿಗಳ ಧರ್ಮ. ಜಾತಿ ವ್ಯವಸ್ಥೆಯನ್ನು ತಂದಿದ್ದೇ ಮನುವಾದಿಗಳು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಅವರ ಹೇಳಿಕೆಯನ್ನು ಇಂದು ಮರೆಮಾಚುವ ಹುನ್ನಾರ ನಡೆಯುತ್ತಿದೆ. ಒಟ್ಟಾರೆ ಈ ವ್ಯವಸ್ಥೆಯನ್ನು ಹೋಗಲಾಡಿಸುವುದು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.