Bengaluru news: ನಾಳೆ 108‘ನಮ್ಮ ಕ್ಲಿನಿಕ್‌’ಗೆ ಸಿಎಂ ಚಾಲನೆ

By Kannadaprabha NewsFirst Published Feb 6, 2023, 7:38 AM IST
Highlights
  • ನಾಳೆ 108‘ನಮ್ಮ ಕ್ಲಿನಿಕ್‌’ಗೆ ಸಿಎಂ ಚಾಲನೆ
  • ಒಟ್ಟು 155.77 ಕೋಟಿ ರು.ವೆಚ್ಚದಲ್ಲಿ ಕ್ಲಿನಿಕ್‌
  • ಪ್ರತಿ ಕ್ಲಿನಿಕ್‌ ನಿರ್ವಹಣೆಗೆ ಸರ್ಕಾರದಿಂದ 36 ಲಕ್ಷ ರು.

ಬೆಂಗಳೂರು (ಫೆ.6) : ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್‌ಗಳ ಪೈಕಿ 108 ವಾರ್ಡ್‌ಗಳಲ್ಲಿ ಸ್ಥಾಪಿಸಲಾದ ‘ನಮ್ಮ ಕ್ಲಿನಿಕ್‌’ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆ.7ರ ಮಂಗಳವಾರ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಮಹಾಲಕ್ಷ್ಮೇಪುರ ವಾರ್ಡ್‌ನ ‘ನಮ್ಮ ಕ್ಲಿನಿಕ್‌’ಗೆ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ. ಉಳಿದ ಕಡೆ ವರ್ಚುಯಲ್‌ ಮೂಲಕ ಚಾಲನೆ ದೊರೆಯಲಿದೆ. ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌, ಅಬಕಾರಿ ಸಚಿವ ಗೋಪಾಲಯ್ಯ ಸೇರಿದಂತೆ ಅನೇಕ ಸಚಿವರು, ಶಾಸಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ ಮಾಹಿತಿ ನೀಡಿದ್ದಾರೆ.

ಜ.15ರೊಳಗೆ 108 ವಾರ್ಡಲ್ಲಿ Namma Clinic ಆರಂಭ; ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌

ಬಿಬಿಎಂಪಿಯ 243 ವಾರ್ಡ್‌ಗಳು ಸೇರಿದಂತೆ ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್‌’ ಆರಂಭಿಸುವುದಾಗಿ ರಾಜ್ಯ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿತ್ತು. ಅದರಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ 114 ನಮ್ಮ ಕ್ಲಿನಿಕ್‌ಗಳಿಗೆ ಕಳೆದ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಬಿಬಿಎಂಪಿ ವ್ಯಾಪ್ತಿಯ 108 ನಮ್ಮ ಕ್ಲಿನಿಕ್‌ಗಳಿಗೆ ಮಂಗಳವಾರ ಚಾಲನೆ ದೊರೆಯಲಿದೆ. ಇನ್ನುಳಿದ ನಮ್ಮ ಕ್ಲಿನಿಕ್‌ಗಳಿಗೆ ಮುಂದಿನ ಹಂತದಲ್ಲಿ ಚಾಲನೆ ನೀಡುವುದಾಗಿ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ 155.77 ಕೋಟಿ ರು. ವೆಚ್ಚದಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪಿಸಲಾಗುತ್ತಿದೆ. ಪ್ರತಿ ಕ್ಲಿನಿಕ್‌ಗೆ ಸಿಬ್ಬಂದಿ ವೇತನ ಸೇರಿದಂತೆ ನಿರ್ವಹಣೆ 36 ಲಕ್ಷ ರು. ಸರ್ಕಾರ ನೀಡಲಿದೆ.

ನಮ್ಮ ಕ್ಲಿನಿಕ್‌ನ 12 ಆರೋಗ್ಯ ಸೇವೆಗಳು

ನಮ್ಮ ಕ್ಲಿನಿಕ್‌ಗಳು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ಕಾರ್ಯನಿರ್ವಹಿಸಲಿವೆ. ಉಚಿತ ತಪಾಸಣೆ ಮತ್ತು ಉಚಿತ ಔಷಧ ವಿತರಣೆ ಮಾಡಲಾಗುತ್ತದೆ. ಒಟ್ಟು 12 ತರಹದ ಆರೋಗ್ಯ ಸೇವೆಗಳು ಹಾಗೂ 14 ವಿಧದ ಪ್ರಯೋಗ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಇ-ಸಂಜೀವಿನಿ ಹಾಗೂ ಟೆಲಿ ಕೌನ್ಸೆಲಿಂಗ್‌ ಮೂಲಕ ಕೊಡಿಸುವ ವ್ಯವಸ್ಥೆ ಇಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ‘ನಮ್ಮ ಕ್ಲಿನಿಕ್‌’ ಲೋಕಾರ್ಪಣೆ

ಗರ್ಭಿಣಿ ಆರೈಕೆ, ಶಿಶುವಿನ ಆರೈಕೆ, ಮಕ್ಕಳ ಸೇವೆ, ಕುಟುಂಬ ಕಲ್ಯಾಣ ಸೇವೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಂಪೂರ್ಣ ಓಪಿಡಿ ಸೇವೆಗಳು, ಮಧುಮೇಹ, ರಕ್ತದೊತ್ತಡ ತಪಾಸಣೆ, ಕ್ಯಾನ್ಸರ್‌ ತಪಾಸಣೆ, ಬಾಯಿ ಆರೋಗ್ಯ ಸಮಸ್ಯೆಗಳು ಸೇವೆ, ಕಣ್ಣಿನ ತಪಾಸಣೆ, ಮೂಗು, ಗಂಟಲು ಇಎನ್‌ಟಿ ಸೇವೆಗಳು, ಮಾನಸಿಕ ಆರೋಗ್ಯ, ವೃದ್ಧಾಪ್ಯ ಆರೈಕೆ ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಒಟ್ಟು 12 ಪ್ರಮುಖ ಆರೋಗ್ಯ ಸೇವೆಗಳು ‘ನಮ್ಮ ಕ್ಲಿನಿಕ್‌’ನಲ್ಲಿ ಲಭ್ಯವಿದ್ದು, ಎಲ್ಲ ಸೇವೆಗಳು ಉಚಿತವಾಗಿ ಸಿಗಲಿದೆ.

click me!