ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯಯೋಜನೆಯನ್ನು ಸಿದ್ದರಾಮಯ್ಯ ನಾನು ಕೊಟ್ಟಿದ್ದು ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ರಾಜ್ಯದಲ್ಲಿ ಉಚಿತ ಅಕ್ಕಿ ಕೊಡುವ ಯೋಜನೆ ಯಾಕಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಶಿವಮೊಗ್ಗ (ನ.29): ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಅನ್ನಭಾಗ್ಯಯೋಜನೆಯನ್ನು ಸಿದ್ದರಾಮಯ್ಯ ನಾನು ಕೊಟ್ಟಿದ್ದು ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ರಾಜ್ಯದಲ್ಲಿ ಉಚಿತ ಅಕ್ಕಿ ಕೊಡುವ ಯೋಜನೆ ಯಾಕಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.
ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಮಲೆನಾಡು ಜನಾಕ್ರೋಶ ಸಮಾವೇಶದಲ್ಲಿ ಅವರು ಮಾತನಾಡಿ, ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಆಗಿದ್ದಾಗ ಫುಡ್ ಸೆಕ್ಸನ್ ಕಾಯ್ದೆ ತಂದಿತ್ತು. ನಾನು ಮುಖ್ಯಮಂತ್ರಿ ಆಗಿದ್ದಾಗ ಶ್ರೀಮಂತರು ಮಾತ್ರ ಊಟ ಮಾಡಬಾರದು, ಬಡವರು ಮೂರೊತ್ತು ಊಟ ಮಾಡಬೇಕು ಎಂಬ ಉದ್ದೇಶದಿಂದ ಬಡವರಿಗೆ ತಲಾ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೊಡುವ ಕಾರ್ಯಕ್ರಮ ರೂಪಿಸಿದ್ದೆವು. ಆದರೆ, ಈಗ ಬಿಜೆಪಿಯವರು ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರ ಕೊಡುಗೆ ಎನ್ನುತ್ತಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ 7 ಕೆ.ಜಿ. ಬದಲಿಗೆ 5 ಕೆ.ಜಿ.ಗೆ ಇಳಿಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆ.ಜಿ.ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿದರು.
Karnataka Politics: ಅಧಿಕಾರ ದೊರೆತರೆ ಮತ್ತೆ ಜನಪರ ಆಡಳಿತ: ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರ ಊಳುವವನೇ ಭೂಮಿ ಒಡೆಯ ಎಂದರೆ ಬಿಜೆಪಿ ಸರ್ಕಾರ ಉಳ್ಳವನೇ ಭೂಮಿಯ ಒಡೆಯ ಎನ್ನುತ್ತಿದ್ದಾರೆ. 2013ರಲ್ಲಿ ನಾವು ಅಧಿಕಾರಕ್ಕೆ ಬರುವ ಮುನ್ನ 165 ಭರವಸೆಗಳನ್ನು ಕೊಟ್ಟಿದ್ದೇವು. ಅಧಿಕಾರಕ್ಕೆ ಬಂದ ನಂತರ 157 ಭರವಸೆಗಳನ್ನು ಈಡೇರಿಸಿದ್ದೇವೆ. ಅಲ್ಲದೆ ಪ್ರಣಾಳಿಕೆಯಲ್ಲಿ ಇಲ್ಲದ 30 ಕಾರ್ಯಕ್ರಮಗಳನ್ನು ನೀಡಿದ್ದೇವೆ. ಆದರೆ, ಬಿಜೆಪಿ ಸರ್ಕಾರ 600 ಭರವಸೆಗಳನ್ನು ಕೊಟ್ಟು 25 ಮಾತ್ರ ಈಡೇರಿಸಿದೆ. 30 ಭರವಸೆಗಳು ಅರ್ಧಂಬರ್ಧವಾಗಿವೆ. ಕಾಂಗ್ರೆಸ್ ನುಡಿದಂತೆ ನಡೆಸ ಸರ್ಕಾರವಾದರೆ, ಬಿಜೆಪಿ ಸರ್ಕಾರ ಬರೀ ಸುಳ್ಳಿನ ಸರ್ಕಾರವಾಗಿದೆ ಎಂದು ಲೇವಡಿ ಮಾಡಿದರು.
ಈಶ್ವರಪ್ಪನಂತ ಕಡು ಭ್ರಷ್ಟ ಇನ್ನೊಬ್ಬ ಇಲ್ಲ: ಈಶ್ವರಪ್ಪ ಅವರಂತ ಕಡು ಭ್ರಷ್ಟಯಾರೂ ಇಲ್ಲ. ಗುತ್ತಿಗೆದಾರ ಸಂತೋಷ್ 40 ಪರ್ಸೆಂಟ್ ಕೊಡಲಿಲ್ಲ ಅಂತಾ ಬಿಲ್ ಕೊಡಲಿಲ್ಲ. ಅದಕ್ಕೆ ಆತ್ಮಹತ್ಯೆ ಮಾಡಿಕೊಂಡರು. ನನ್ನ ಸಾವಿಗೆ ಈಶ್ವರಪ್ಪ ಜಾರಣ ಎಂದು ಸಂತೋಷ್ ಬರೆದಿಟ್ಟಿದ್ದ, ಆತನ ಮನೆಯವರೂ ಅದನ್ನೆ ಹೇಳಿದ್ದರು. ಆದರೆ, ಬಿಜೆಪಿ ಸರ್ಕಾರ ಪೊಲೀಸರಿಂದ ಬಿ ರಿಪೋರ್ಟ್ ಹಾಕಿಸಿ ಈಶ್ವರಪ್ಪರನ್ನು ರಕ್ಷಿಸುವಂತ ಕೆಲಸ ಮಾಡಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಪರೇಶ್ ಮೇಸ್ತಾ ಸ್ವಾಭಾವಿಕ ಸಾವನ್ನು ಕೊಲೆ ಎಂದು ಬಿಂಬಿಸಿ ಚಳುವಳಿ, ಹೋರಾಟ ಮಾಡಿ ಜನರನ್ನು ರೊಚ್ಚಿಗೆಬ್ಬಿಸಿದರು. ಈಗ ಸಿಬಿಐ ಬಿ.ರಿಪೋರ್ಟ್ ಕೊಟ್ಟಿತ್ತು.
ಅದನ್ನು ಸಿದ್ದರಾಮಯ್ಯ ಕೊಡಿಸಿದ್ದು ಎಂದು ಅಪಪ್ರಚಾರ ಮಾಡಿದ್ದರು. ಇವತ್ತು ಸಂತೋಷ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ನೀಡಿದ ಬಿ ರಿಪೋರ್ಟ್ ಒಪ್ಪಿಕೊಳ್ಳುತ್ತಾರೆ. ಆದರೆ, ಬಿಜೆಪಿ ಸರ್ಕಾರದ ಅಧೀನದಲ್ಲಿರುವ ಸಿಬಿಐ ಬಿ ರಿಪೋರ್ಟ್‌ನ್ನು ಒಪ್ಪಲ್ಲ. ಪರೇಶ್ ಮೆಸ್ತಾ ಹೆಣವನ್ನು ಇಟ್ಟುಕೊಂಡು ರಾಜಕಾರಣ ಮಾಡಿದ ಬಿಜೆಪಿ ಸರ್ಕಾರ ಆತನ ಕುಟುಂಬಕ್ಕೆ ಈತನಕ ಪರಿಹಾರ ಕೊಡಲಿಲ್ಲ ಎಂದು ಕುಟುಕಿದರು. ಸಮಾರಂಭದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ , ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ, ಪ್ರಮುಖರಾದ ಬೇಳೂರು ಗೋಪಾಲಕೃಷ್ಣ, ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಪ್ರಮುಖರಾದ ಆರ್.ಎಂ. ಮಂಜುನಾಥ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್ ಮತ್ತಿತರರು ಇದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂತ್ರಸ್ತರ ಸಮಸ್ಯೆ ಪರಿಹಾರ: ಶರಾವತಿ ಸಂತ್ರಸ್ತರ ಸಮಸ್ಯೆ ನನ್ನ ಗಮನಕ್ಕೆ ತಂದರು. ಆಗ ಕಾಗೋಡು ತಿಮ್ಮಪ್ಪ ಮಂತ್ರಿಯಾಗಿದ್ದರು. ಅವತ್ತು ಅರಣ್ಯ ಇಲಾಖೆಯ ಪ್ರಿನ್ಸಿಪಾಲ್ ಸೆಕ್ರಟರಿ ಮದನ್ ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದೆ. ಅವರು ಹಲವು ಸಭೆಗಳನ್ನು ಮಾಡಿದ್ದರು. ನಂತರ 9,945 ಎಕರೆ ಜಮೀನನ್ನು ಅರಣ್ಯ ಜಮೀನು ಕೊಡಲಾಗಿತ್ತು. ಅಲ್ಲಿ ಶಾಲೆ, ವ್ಯವಸಾಯ, ದೇವಸ್ಥಾನ ಕಟ್ಟಿಕೊಟ್ಟು ಬದುಕುತ್ತಿದ್ದರು. ಹಕ್ಕುಪತ್ರ ಇರಲಿಲ್ಲ. ನಾವು ಹಕ್ಕುಪತ್ರ ಕೊಟ್ಟೆವು. ಕೇಂದ್ರ ಸರ್ಕಾರ ಅನುಮತಿ ಬೇಕಿಲ್ಲ ಅಂತಾ ಮದನ್ ಗೋಪಾಲ್ ಸಮಿತಿ ಶಿಫಾರಸು ಮಾಡಿತ್ತು. ಆದರೆ, ಈಗ ಗಿರೀಶ್ ಅಚಾರ್ ಅವರು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು. ಹೈಕೋರ್ಟ್ ಕೇಂದ್ರದ ಅನುಮತಿ ಪಡೆದಿಲ್ಲ ಎಂದು ಅವರ ಹಕ್ಕುಪತ್ರ ರದ್ದಾಯಿತು. ನೋಟಿಫಿಕೇಷನ್ ವಜಾ ಮಾಡಿದರು. ಅಪೀಲ್ ಕೂಡ ವಜಾ ಆಯ್ತು.
ಸಿದ್ರಾಮಣ್ಣರವರೇ 5 ವರ್ಷ ಸಿಎಂ ಆಗಿದ್ರಿ, ಏನು ಮಾಡಿದ್ರೀ?: ಸಿಎಂ ಬೊಮ್ಮಾಯಿ
ಸಂತ್ರಸ್ತರಾರೂ ಇದರಲ್ಲಿ ಪ್ರತಿವಾದಿ ಅಗಿರಲಿಲ್ಲ. ಬೊಮ್ಮಾಯಿ ಅವರು ಸಂತ್ರಸ್ಥರಿಗೆ ನ್ಯಾಯ ಕೊಡಿಸುವುದಾಗಿ ಹೇಳಿದ್ದರು. ಆದರೆ, ನ್ಯಾಯ ಕೊಡಲಿಲ್ಲ. ಪ್ರಮಾಣಿಕ ಪ್ರಯತ್ನ ಆಗಲಿಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹಾರ ಮಾಡುವ ಬದಲು ಹೈಕೋರ್ಟ್ ತೀರ್ಪು ಎಂದು ಕೈತೊಳೆದುಕೊಂಡಿದ್ದಾರೆ ಎಂದು ಸಿದ್ದರಾಯಮಯ್ಯ ಆರೋಪಿಸಿದರು. ಯಡಿಯೂರಪ್ಪ ಅವರು ರೈತ ಪರ ಹೋರಾಟಗಾರ. ಈಗ ಅವರು ರೈತರಿಗೆ ಸುಳ್ಳು ಭರವಸೆ ಕೊಡುತ್ತಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯಿಂದ ಇದು ಸಾಧ್ಯವಿಲ್ಲ. ಯಾಕೆ ಹೀಗೆ ಸುಳ್ಳು ಹೇಳುತ್ತಿದ್ದಾರೊ ಗೊತ್ತಿಲ್ಲ. ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ನೂರಕ್ಕೆ ಇನ್ನೂರು ಪರ್ಸೆಂಟ್ ಅಧಿಕಾರಕ್ಕೆ ಬರುತ್ತದೆ. ಆಗ ಮುಳುಗಡೆ ಸಂತ್ರಸ್ತರಿಗೆ ನೂರು ಪರ್ಸೆಂಟ್ ಪರಿಹಾರ ಕೊಟ್ಟೆಕೊಡುತ್ತೇವೆ ಎಂದು ಭರವಸೆ ನೀಡಿದರು.