ಬೆಂಗಳೂರು (ಡಿ.27) : ನಮ್ಮ ಸರ್ಕಾರ (Congress Govt) ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ವಿಧೇಯಕ ಹಿಂಪಡೆಯುತ್ತೇವೆ. ಮತಾಂತರ ನಿಷೇಧ ಕಾಯ್ದೆ (anti conversion Bill) ಕಿತ್ತೆಸೆಯುತ್ತೇವೆ ಎಂದು ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು. ಬೆಂಗಳೂರಿನಲ್ಲಿಂದು (Bengaluru ) ಮಾತನಾಡಿದ ಮಾಜಿ ಸಿಎಂ ಮೊದಲ ಅಧಿವೇಶನದಲ್ಲೇ ಕಾಯ್ದೆ ಹಿಂಪಡೆದು ಎಸೆಯುತ್ತೇವೆ. ವಿಧೇಯಕದ ಡ್ರಾಫ್ಟ್ ಗೆ ನಾನು ಸಹಿ ಮಾಡಿದ್ದನ್ನೇ ಬಿಜೆಪಿ (BJP) ಅಜೇಂಡಾ ಮಾಡಿಕೊಂಡಿದೆ. ಇದು ಹುಟ್ಟಿದ್ದು 2009 ರಲ್ಲಿ ಯಡಿಯೂರಪ್ಪ (Yediyurappa) ಅವರು ಅಧಿಕಾರದಲ್ಲಿದ್ದಾಗ. ಜಯಚಂದ್ರ ಸಹಿ ಹಾಕಿ, ನಾನು ಕ್ಯಾಬಿನೆಟ್ (cabinet) ಮುಂದೆ ತನ್ನಿ ಅಂದಿದ್ದು ನಿಜ. ಆದರೆ, ಬಳಿಕ ನಾನು ಆಗಿನ ಸಮಾಜ ಕಲ್ಯಾಣ ಸಚಿವ ಆಂಜನೇಯಗೆ (Anjaneya) ಹೇಳಿ ಅದನ್ನ ಸ್ಟಾಪ್ ಮಾಡುವಂತೆ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.
ನಾನು ಹೇಳಿದ ತಕ್ಷಣ ಆಂಜನೇಯ ಇದು ಅಗತ್ಯವಿಲ್ಲ ಎಂದು ಫೈಲ್ ನಲ್ಲಿ ಬರೆದು ಕ್ಯಾಬಿನೆಟ್ ಗೆ ತಂದಿಲ್ಲ. ಅದು ಅಲ್ಲಿಗೆ ಸತ್ತು ಹೋಗಿತ್ತು. ಬಿಜೆಪಿಯವರು (BJP) ವಾಸ್ತವ ಏನೆಂದು ಹೇಳುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
undefined
ಪಾದಯಾತ್ರೆಗೆ ಯಾವುದೇ ಸಮಸ್ಯೆಯಾಗಲ್ಲ : ಇನ್ನು ಹೊಸ ವರ್ಷಾಚರಣೆ (New Year) ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ( night curfew) ಜಾರಿ ಮಾಡಿದ್ದರಿಂದ ಕಾಂಗ್ರೆಸ್ (Congress) ಪಾದಯಾತ್ರೆಗೆ ಯಾವುದೇ ಸಮಸ್ಯೆಯಾಗಲ್ಲ. ಮೇಕೆದಾಟು (Mekedatu) ಯೋಜನೆಗೆ ಆಗ್ರಹಿಸಿ ನಾವು ಮಾಡುವ ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ. ಒಮೆಕ್ರಾನ್ (Omicron) ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗೃತ ಕ್ರಮಗಳನ್ನ ಕೈಗೊಂಡೆ ನಾವು ಪಾದಯಾತ್ರೆ ನಡೆಸುತ್ತೇವೆ. ಕೊರೊನಾ ಇದ್ದಾಗಲೇ ಬಿಜೆಪಿಯವರು (BJP) ಜನಾಶೀರ್ವಾದ ಯಾತ್ರೆ ಮಾಡಲಿಲ್ಲವೇ ಎಂದರು.
ನಿನ್ನೆ ಅಮಿತ್ ಶಾ (Amith Shah) ರ‍್ಯಾಲಿ ಮಾಡಿದ್ದಾರೆ. ಅಲ್ಲಿ ಏಲ್ಲರೂ ಮಾಸ್ಕ್ (Mask) ಹಾಕಿಕೊಂಡಿದ್ದರಾ..? ಇವರು ರಾಜಕೀಯ (Politics) ಕಾರ್ಯಕ್ರಮ ಮಾಡಬಹುದು, ನಾವು ಮಾಡಬಾರದಾ..? ಅವರಿಗೊಂದು ಕಾನೂನು, ವಿಪಕ್ಷಗಳಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ (Siddaramaiah) ಹೇಳಿದರು.
ಸಿಎಂ ಬದಲಾವಣೆ ವಿಚಾರ : ಇನ್ನು ಕಳೆದ ಬಾರಿ ಸಿಎಂ ಸ್ಥಾನದಿಂದ ಯಡಿಯೂರಪ್ಪ (BS Yediyurappa) ಬದಲಾವಣೆ ಬಗ್ಗೆಯೂ ಮೊದಲೇ ಮುನ್ಸೂಚನೆ ನೀಡಿದ್ದ ಸಿದ್ದರಾಮಯ್ಯ (Siddaramaiah) ಇದೀಗ ಬೊಮ್ಮಾಯಿ ಅವರ ಬದಲಾವಣೆ ನನಗೆ ಗೊತ್ತಿಲ್ಲ ಎಂದರು. ಆದರೆ, ರಾಜ್ಯದಲ್ಲಿ (Karnataka) ಸರ್ಕಾರವೇ ಇಲ್ಲ. ಸರ್ಕಾರ ಇದ್ದರೆ ತಾನೇ ಅಧಿಕಾರಿಗಳು ಮಾತು ಕೇಳುವುದು? ಅಧಿಕಾರಿಗಳಿಗೆ ಈ ಸರ್ಕಾರ ತೊಲಗಿದರೆ ಸಾಕಾಗಿದೆ. ಅಧಿಕಾರಿಗಳಿಗೆ ದುಡ್ಡು ಕೊಟ್ಟು ಕೊಟ್ಟು ಸಕಾಗಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ, ಲಂಚ ತಾಂಡವಾಡುತ್ತಿದೆ ಎಂದರು.
ಒಂದು ಹುಡುಗ ಹುಡುಗಿ ಮದುವೆ ಆಗುವುದು ಮತಾಂತರನಾ..? ಲವ್ (Love) ಮಾಡಿ ಮದುವೆ ಆಗುವುದು ಅವರ ಹಕ್ಕು. ಇವರು ತಂದಿರೋದು ಸಂವಿಧಾನ ಬಾಹಿರ ಕಾನೂನು. ಇವರ ಉದ್ದೇಶ ವೋಟ್ ಪಡೆಯೋದು ಅಷ್ಟೆ. ಭಾವನಾತ್ಮಾಕ ವಿಷಯಗಳನ್ನ ಇಟ್ಟುಕೊಂಡು ಜನರ ದಾರಿ ತಪ್ಪಿಸುತ್ತಾರೆ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡುವುದು ಬಿಜೆಪಿ. ನಿರುದ್ಯೋಗ, ನೆರೆ, ಪರಿಹಾರ, ಮಹಿಳೆಯರ ಸಮಸ್ಯೆ ಇವೆಲ್ಲಾ ಬಿಟ್ಟು ಡೈವರ್ಟ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.