ದಾರಿ ತಪ್ಪಿದ CM Bommai ಕಾರು : ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಮುಖ್ಯಮಂತ್ರಿ

Suvarna News   | Asianet News
Published : Dec 27, 2021, 01:36 PM IST
ದಾರಿ ತಪ್ಪಿದ CM  Bommai ಕಾರು :  ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಮುಖ್ಯಮಂತ್ರಿ

ಸಾರಾಂಶ

ಕೊಂಕಣ ಸುತ್ತಿ‌ ಮೈಲಾರಕ್ಕೆ ಬಂದ ಹಾಗೇ ಬಸವನಗುಡಿಯ ಕಾರ್ಯಕ್ರಮಕ್ಕೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನ ಕೋವಿಡ್ ಮೃತರಿಗೆ ಪರಿಹಾರ ಹಂಚಿಕೆ ಕಾರ್ಯಕ್ರಮ ಏರ್ಪಡಿಸಿದ್ದು ಕಾರ್ಯಕ್ರಮಕ್ಕೆ ಹೋಗುವಾಗ ತಪ್ಪಿದ ದಾರಿ

ಬೆಂಗಳೂರು (ಡಿ.27):  ಕೊಂಕಣ ಸುತ್ತಿ‌ ಮೈಲಾರಕ್ಕೆ ಬಂದ ಹಾಗೇ ಬಸವನ ಗುಡಿಯ ಕಾರ್ಯಕ್ರಮಕ್ಕೆ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಆಗಮಿಸಿದರು.  ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕೋವಿಡ್ ಮೃತರಿಗೆ ಪರಿಹಾರ ಹಂಚಿಕೆ ಕಾರ್ಯಕ್ರಮ ಏರ್ಪಡಿಸಿದ್ದು ಕಾರ್ಯಕ್ರಮಕ್ಕೆ ತೆರಳುವಾದ ಸಿಎಂ (CM) ಇದ್ದ ವಾಹನ (Vehicle) ದಾರಿ ತಪ್ಪಿದ ಪ್ರಸಂಗ ಜರುಗಿತು. 

ಕಾರ್ಪೊರೇಷನ್ ಸರ್ಕಲ್ ನಿಂದ ಬಸವನಗುಡಿಗೆ ಬರಬೇಕಿದ್ದ ಸಿಎಂ ಕಾರ್ಪೊರೇಷನ್ ಸರ್ಕಲ್ - ಮೈಸೂರು ಬ್ಯಾಂಕ್ ಸರ್ಕಲ್ - ಚಾಲುಕ್ಯ ವೃತ್ತ - ರೇಸ್ ಕೋರ್ಸ್ ಸರ್ಕಲ್ - ಮತ್ತೆ ವಾಪಸ್ ಚಾಲುಕ್ಯ ವೃತ್ತ - ಕೆ ಆರ್ ಸರ್ಕಲ್ - ಕಾರ್ಪೊರೇಷನ್ ಸರ್ಕಲ್ - ಲಾಲ್ ಬಾಗ್ ಸರ್ಕಲ್ ಮೂಲಕ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಸಿಎಂ‌ ಆಗಮಿಸಿದರು.   ಕಾರ್ಪೊರೇಷನ್ ನಿಂದ ಬಸವನಗುಡಿಗೆ (Basavanagudi)  ತೆರಳಬೇಕಿತ್ತು ಆದರೆ ಕಾರ್ಪೊರೇಷನ್ ಸರ್ಕಲ್ ನಿಂದ ರೇಸ್ ಕೋರ್ಸ್ ಗೆ ಬಂದು ಮತ್ತೆ ಅದೇ ದಾರಿಯಲ್ಲಿ ವಾಪಸ್ ಬಂದು ಬಸವನಗುಡಿಗೆ  ಆಗಮಿಸಿದರು. ಇದರಿಂದ  ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರ ವಿಳಂಭವಾದಂತಾಯಿತು. 

ಕಾನ್ವೇ ವಾಹನಕ್ಕೆ ಸಿಎಂ ರೂಟ್ ಮ್ಯಾಪ್  ( Route )    ಕುರಿತು ಗೊಂದಲ ಆಗಿ‌ದ್ದೇ ಎಡವಟ್ಟಿಗೆ ಕಾರಣವಾಗಿದ್ದು ಹೀಗಾಗಿ ಸಿಎಂ ಬಂದ ದಾರಿಯಲ್ಲೇ ಮತ್ತೆ ಮತ್ತೆಸುತ್ತುವಂತಾಯಿತು.   ಸಿಎಂ ಕಾನ್ವೇ ವಾಹನದ ಗೊಂದಲದಿಂದ ಸುತ್ತಿದಲ್ಲಿ ಮತ್ತೆ ಬಂದಿದ್ದು ನೋಡಿ ಟ್ರಾಫಿಕ್ ಪೊಲೀಸರು ಗೊಂದಲಕ್ಕೆ ಈಡಾದರು.

ಸಿಎಂ ರೌಂಡ್ ಹೊಡೆದ ರಸ್ತೆಗಳಲ್ಲಿ ಸಿಎಂ ವಾಹನಕ್ಕೆ ತರಾತುರಿಯಲ್ಲಿ ದಾರಿ ಮಾಡಿಕೊಡುವಲ್ಲಿ ಟ್ರಾಫಿಕ್ ಪೊಲೀಸರು (Traffic Police) ಪೊಲೀಸರು ಹೈರಾಣಾಗಿದ್ದು  ಇದರಿಂದ ನೃಪತುಂಗ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಂ ಉಂಟಾಗಲು ಕಾರಣವಾಯ್ತು. ಇದೇ ಟ್ರಾಫಿಕ್ ನಲ್ಲಿ ಒಂದು ಆಂಬುಲೆನ್ಸ್ ಸಹ ಸಿಕ್ಕಿಕೊಂಡು ಪರದಾಡುವಂತಾಯಿತು.  ಸಿಎಂ ರೌಂಡ್ಸ್ ನಿಂದ ಇಂದು ಹಲವು ವಾಹನ ಸವಾರರು ಸಮಸ್ಯೆ ಎದುರಿಸುವಂತೆ ಆಯಿತು. 
 
ಚೆಕ್ ವಿತರಣೆ : ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ  ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೋವಿಡ್ ನಿಂದ ಮೃತಪಟ್ಟರ ವಾರಸುದಾರ ಕುಟುಂಬದವರಿಗೆ ಇಂದು ಚೆಕ್ ವಿತರಣೆ ಮಾಡಿದರು.  ಸಾಂಕೇತಿಕವಾಗಿ ಪರಿಹಾರ ವಿತರಣೆಗೆ ಚಾಲನೆ ನೀಡಿದ್ದು ಕೊರೋನಾದಿಂದ ಮೃತಪಟ್ಟ ಎಲ್ಲ ವರ್ಗಗಳ ಕುಟುಂಬಗಳಿಗೆ ತಲಾ‌ 50 ಸಾವಿರ ರೂ ಕೇಂದ್ರದ ಪರಿಹಾರ. ಬಿಪಿಎಲ್ ಕುಟುಂಬಗಳಲ್ಲಿ ಕೋವಿಡ್ ಮೃತವರಿಗೆ ರಾಜ್ಯ ಸರ್ಕಾರದಿಂದ ತಲಾ 1 ಲಕ್ಷ ರೂ ಪರಿಹಾರ ವಿತರಣೆ ಮಾಡಲಾಯಿತು. 

ಬಿಪಿಎಲ್ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಒಟ್ಟು 1.50 ಲಕ್ಷ ರೂ ಪರಿಹಾರ ವಿತರಣೆ ಮಾಡಲಾಗುತ್ತಿದ್ದು ಹಿಂದಿನ ಸಿಎಂ ಯಡಿಯೂರಪ್ಪ ಬಿಪಿಎಲ್ ಕುಟುಂಬಗಳಿಗೆ ತಲಾ 1 ಲಕ್ಷ ಪರಿಹಾರ ಘೋಷಣೆ ‌ಮಾಡಿದ್ದರು. ಇದೀಗ ಘೋಷಣೆಯಾದ ಏಳು ತಿಂಗಳ ‌ಬಳಿಕ ಯೋಜನೆ ಜಾರಿಗೆ ತಂದ ರಾಜ್ಯ ಸರ್ಕಾರದಿಂದ ಇಂದು ಸಾಂಕೇತಿಕ ವಿತರಣೆ ನಡೆಯಿತು.  ಬಿಪಿಎಲ್ ಕುಟುಂಬಗಳೂ ಸೇರಿದಂತೆ ರಾಜ್ಯದ 23,733 ಸಾವಿರ ಕುಟುಂಬಗಳಿಗೆ ತಲಾ 50 ಸಾವಿರ ರೂ ಪರಿಹಾರ. ರಾಜ್ಯದ 12,276 ಬಿಪಿಎಲ್ ಕುಟುಂಬಗಳಿಗೆ ರಾಜ್ಯದಿಂದ ತಲಾ 1 ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ.

ಇನ್ನು ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ ಕೃಷಿ ಇಲಾಖೆಗೆ (Agriculture Department) ಇಲ್ಲಿರುವ ಅಧಿಕಾರಿಗಳು‌ ಕೆಲಸ ‌ಮಾಡುತ್ತಿದ್ದೀರ. ಆದರೆ ಕೃಷಿ ಜೊತೆಗೆ ಕೆಲಸ ಮಾಡಬೇಕು..? ಸ್ವತಂತ್ರವಾಗಿ ನಿಮ್ಮ ಯೋಜನೆಗಳನ್ನ ನೀವು ಅನುಷ್ಠಾನ ಮಾಡಬೇಕು. ಆಗ ಮಾತ್ರ ಸರ್ಕಾರ (Govt) ನಿಮ್ಮನ್ನು ಗುರುತಿಸುವ ಕೆಲಸ ‌ಮಾಡುತ್ತದೆ. ಸುಗ್ಗಿಯ ಕೆಲಸ ಮತ್ತು ಸುಗ್ಗಿಯ ನಂತರ ಕೆಲಸ ಇರುತ್ತದೆ.  ರೈತರ ಕೈಗೆ ಹಣ ಬರುವರೆಗೆ ಕೃಷಿಕನ ಮತ್ತು ಅಧಿಕಾರಿಗಳ ಕೆಲಸ ಇರುತ್ತದೆ. ಬೆಳೆದ ಬೆಳೆಗೆ ಬೆಲೆ ಸಿಗುವ ಹಾಗೆ ಕೃಷಿಕ ಸಮಾಜ ಮಾಡಬೇಕು. ಕರ್ನಾಟಕದಲ್ಲಿ ಹತ್ತು ಕೃಷಿ ವಲಯಗಳಿದ್ದಾವೆ. ಒಂದಿಲ್ಲ ಒಂದು ಕೃಷಿ ಹವಾಮಾನ ಆಧಾರವಾಗಿ ನಮ್ಮಲ್ಲಿ ಬರುತ್ತದೆ. ಯಾವುದೇ ರಾಜ್ಯದಲ್ಲಿ ಇಂತಹ ವಾತಾವರಣ ‌ಇಲ್ಲ. ಇದರ ಸದುಪಯೋಗ ನಮ್ಮ ರಾಜ್ಯದಲ್ಲಿ ಆಗಬೇಕು ಎಂದರು.

ರೈತರ (Farmers) ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಡೈರೆಕ್ಟರೇಟ್ ಮಾಡಿದ್ದೇವೆ. ಮುಂದಿನ ಬಜೆಟ್ ನಲ್ಲಿ ಹೆಚ್ಚಿನ ಹಣ ಮಿಸಲಿಡುತ್ತೇನೆ ಕೃಷಿ ಒಂದು ಪಟ್ಟು ಹೆಚ್ಚಾದರೆ, ಕೈಗಾರಿಕೆಯಲ್ಲಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಸೇವಾವಲಯ ಹತ್ತುಪಟ್ಟು ಹೆಚ್ಚಾಗಲಿದೆ. ಹೀಗಾಗಿ ಕೃಷಿಗೆ ಆದ್ಯತೆ ನೀಡೋಣ ಎಂದು ಸಿಎಂ ಬೊಮ್ಮಾಯಿ ಹೇಳಿದರು. 

ಕಾರ್ಯಕ್ರಮದಲ್ಲಿ  ಸಚಿವರಾದ ಆರ್ ಅಶೋಕ್ , ಎಸ್ ಟಿ ಸೋಮಶೇಖರ್ , ವಿ ಸೋಮಣ್ಣ , ಗೋಪಾಲಯ್ಯ , ಸಂಸದ ಪಿಸಿ ಮೋಹನ್ ,  ಶಾಸಕರಾದ ಸತೀಶ್ ರೆಡ್ಡಿ,  ರವಿ ಸುಬ್ರಮಣ್ಯ, ಹ್ಯಾರಿಸ್, ಜಮೀರ್ ಅಹಮದ್ ಖಾನ್ ,  ಎಂ ಎಲ್ ಸಿ ಗಳಾದ , ಯು ಬಿ ವೆಂಕಟೇಶ , ರಮೇಶ ಗೌಡ , ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್