ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಹೊರಡಿಸುವ ನಿರ್ವಹಣಾ ಸಮಿತಿ ನಮಗೆ ಬೇಡ. ಕಾವೇರಿ ನೀರು ಬಿಡಬೇಡಿ, ಬಿಟ್ಟರೆ ಜೈಲ್ ಭರೋ ಚಳುವಳಿ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಜು.13): ಕಾವೇರಿ ನಿರ್ವಹಣಾ ಸಮಿತಿ ಪ್ರತಿದಿನ 1 ಟಿಎಂಸಿ ನೀರಿನಂತೆ ಜು.31ರವರೆಗೂ ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ನೀಡಿದ್ದಾರೆ. ಯಾವಾಗಲೂ ತಮಿಳುನಾಡಿಗೆ ನೀರು ಬಿಡಿ ಎನ್ನುವ ನಿರ್ಹಹಣಾ ಸಮಿತಿ ನಮಗೆ ಬೇಡ. ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ, ಬಿಟ್ಟರೆ ಎಲ್ಲ ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ಜೈಲ್ ಭರೋ ಚಳುವಳಿ ಮಾಡ್ತೇವೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾವೇರಿ ನಿರ್ವಹಣಾ ಸಮಿತಿ ಪ್ರತಿದಿನ 1 ಟಿಎಂಸಿ, ಜು.31ರವರೆಗೂ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದ್ದಾರೆ. ಇದು ನಿಜವಾಗ್ಲೂ ಕರ್ನಾಟಕಕ್ಕೆ, ನಮ್ಮ ರೈತರಿಗೆ ಅನ್ಯಾಯವಾಗಿದೆ. ನಮ್ಮ ಕೆರೆಗಳಲ್ಲಿ ನೀರಿಲ್ಲ, ನಮ್ಮ ಬೆಳೆಗಳು ನಾಶವಾಗ್ತಿವೆ. ಎಲ್ಲಾ ಜಲಾಶಯಗಳು ಸದ್ಯ 60 ಟಿಎಂಸಿ ನೀರು ಇರಬಹುದು. ಈಗಿನ ಪರಿಸ್ಥಿತಿಯಲ್ಲಿ 90-95 ಟಿಎಂಸಿ ನೀರು ಇರಬೇಕಿತ್ತು. ಆದರೆ, ನೀರು ತುಂಬಾ ಕಡಿಮೆ ಇದ್ದರೂ ನಿರ್ವಹಣಾ ಪ್ರಾಧಿಕಾರ ಕಾವೇರಿ ಜಲಾಶಯದಿಂದ ನೀರು ಬಿಡುವಂತೆ ಆದೇಶ ಹೊರಡಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
undefined
ಹುಲಿಯಂತೆ ಬೇಟೆಗಾಗಿ ಕಾದು ಕುಳಿತ ಮದಗಜ; ಕಾಫಿ ತೋಟಕ್ಕೆ ಹೋದವನ ಮೇಲೆ ಒಂಟಿ ಸಲಗ ಡೆಡ್ಲಿ ಅಟ್ಯಾಕ್
ಕರ್ನಾಟಕದಲ್ಲಿ ಹಂತದಲ್ಲಿ ಪ್ರಾಧಿಕಾರ ಅವರು ಕರ್ನಾಟಕ ಪರ ಇಲ್ಲ. ಇಲ್ಲಿವರೆಗೂ ತಮಿಳುನಾಡಿಗೆ ನೀರು ಬಿಡಿ ಅಂತ ಹೇಳ್ತಿದ್ದಾರೆ. ಇಂತಹ ನಿರ್ವಹಣಾ ಸಮಿತಿ ನಮಗೆ ಬೇಡ. ಜಲಾಶಯ ನಮ್ದು, ಆದ್ರೆ ನಿರ್ವಹಣೆ ಮಾಡ್ತಿರುವವರು ದೆಹಲಿಯವರು. ಇಡೀ ರಾಜ್ಯದ ಜನರು ವಿರೋಧ ಮಾಡಬೇಕು. ರಾಜ್ಯದ ಎಲ್ಲ ಸಂಸದರು ರಾಜ್ಯದ ಪರವಾಗಿ ಏನು ಮಾಡ್ತಾರೆ? ಎಲ್ಲಾ ಸಂಸದರು ಕೂಡಲೇ ಪ್ರಧಾನಿ ಮಂತ್ರಿಗಳ ಬಳಿ ಹೋಗಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾದ ಬಗ್ಗೆ ಮಾತನಾಡಬೇಕು. ಇದು ಗಂಭೀರವಾದ ಪರಿಸ್ಥಿತಿ ಎಂದು ಕಿಡಿಕಾರಿದರು.
ಪ್ರೀತಿಸಿ ಮದುವೆಯಾದ ಕುಟುಂಬದಲ್ಲಿ ಗಂಡ ಸಾವು; ಮಗನನ್ನು ನೇಣು ಬಿಗಿದು, ತಾನೂ ಆತ್ಮಹತ್ಯೆಗೆ ಶರಣಾದ ತಾಯಿ!
ತಮಿಳುನಾಡಿನವರು ಭಾರತ ದೇಶದಲ್ಲಿ ಇದ್ದೀವಿ ಅಂತ ಅನ್ಕೊಂಡಿಲ್ಲ. ಕರ್ನಾಟಕ ಮೇಲೆ ತಮಿಳುನಾಡಿನ ಎಲ್ಲ ಮುಖ್ಯಮಂತ್ರಿಗಳು ವಿರೋಧ ಮಾಡಿಕೊಂಡೇ ಬರುತ್ತಿದ್ದಾರೆ. ಇವತ್ತು ಮೇಕೆದಾಟು ಬಗ್ಗೆ ಸರ್ಕಾರ ನಿಲುವು ಏನು? ಮೇಕೆದಾಟು ಪಾದಯಾತ್ರೆ ಮಾಡಿದ್ರಿ ಅಲ್ವಾ? ನಿಮ್ಮ ಮಾತಿನಂತೆ ನಡೆದುಕೊಳ್ಳಬೇಕು. ಮೇಕೆದಾಟು ಆಗಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಸಜ್ಜಾಗ್ತಿವೆ. ಎಲ್ಲಾ ಕನ್ನಡಪರ ಸಂಘಟನೆಗಳ ಜೊತೆ ಸಭೆ ಮಾಡ್ತಿವಿ. ಜೈಲು ಭರೋ ಚಳವಳಿ ಮಾಡ್ತಿವಿ. ತಮಿಳುನಾಡಿನ ವಿರುದ್ಧ ಮತ್ತಷ್ಟು ದ್ವೇಷ ಸೃಷ್ಟಿ ಆಗಬಹುದು ಎಂದು ವಾಟಾಳ್ ನಾಗರಾಜ್ ಹೇಳಿದರು.