
ಬೆಂಗಳೂರು (ಫೆ.20): ಇಂದು ಐಪಿಎಸ್ ರೂಪ ಅವರು ಕೆಲವು ಪ್ರಶ್ನೆಗಳನ್ನ ಎತ್ತಿದ್ದಾರೆ. ಈ ಪ್ರಶ್ನೆಗಳು ನೈತಿಕವಾಗಿಯೂ ಕಾನೂನಿತ್ಮಕವಾಗಿಯೂ ಇದೆ. ಅವರು ಇಟ್ಟಿರುವ ಪ್ರಶ್ನೆಗೆ ವಾಸ್ತವ ಏನು ನಡೆದಿದೆ ಎಂಬುದರ ಬಗ್ಗೆ ಒಂದು ಸತ್ಯಶೋಧನೆ ಮಾಡಬೇಕಿರುವ ಜವಾಬ್ದಾರಿ ಪತ್ರಕರ್ತರದ್ದು ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಅವರು ಡಿ.ರೂಪಾ ಪರವಾಗಿ ನಿಂತಿದ್ದಾರೆ.
ಸರ್ಕಾರಕ್ಕೆ ಈ ಬಗ್ಗೆ ಒಂದು ಕಮಿಟಿ ಮಾಡಿ ಸತ್ಯ ಸತ್ಯತೆ ಹೊರ ಬರುವಂತೆ ಪತ್ರಕರ್ತರು ಹೇಳಬೇಕಾಗುತ್ತದೆ. ಚಾಮರಾಜ ನಗರದಲ್ಲಿ ಆಕ್ಸಿಜನ್ ದುರಂತದಲ್ಲಿ ಒಂದೇ ದಿನ 24 ಮಂದಿ ಸತ್ತಿದ್ದರು. ಅಂದು ಮೈಸೂರಿನ ಮೇಲೆ ಆರೋಪ ಬಂತು. ಬಳಿಕ ಆಕ್ಸಿಜನ್ ನೀಡುವ ಜವಾಬ್ದಾರಿಯನ್ನು ನಾನು ಹಾಗೂ ಉಸ್ತುವಾರಿ ಸಚಿವರು ತೆಗೆದುಕೊಂಡೆವು. ಕೋವಿಡ್ ನಲ್ಲಿ ಜಿಲ್ಲೆಯಲ್ಲಿ ಅನೇಕ ಜನರು ಸಾವನ್ನಪ್ಪಿದರು. ಆ ವೇಳೆ ಸುಮ್ಮನೆ ವಿಡಿಯೋ ಕಾನ್ಫಿರೆನ್ಸ್ ಮಾಡಿ ಕಾಲಹರಣ ಮಾಡುವ ಬದಲು ತಪಾಷಣೆ ಮಾಡಬೇಕು ಎಂದು ಹೇಳಿದಾಗ ನಮ್ಮ ಮೇಲೆಯೇ ಏನೇನೋ ಆರೋಪ ಬಂದಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
IAS vs IPS:ರೋಹಿಣಿ ಸಿಂಧೂರಿ ದೂರಿಗೆ ಡಿ. ರೂಪಾ ಪ್ರತಿದೂರು: ದೂರಿನ ಅಂಗಳವಾದ ವಿಧಾನಸೌಧ ಸಿಎಸ್ ಕಚೇರಿ
ಈಗ ಇದೇ ಪ್ರಶ್ನೆಯನ್ನು ಐಜಿಪಿ ಡಿ. ರೂಪಾ ಅವರು ಎತ್ತಿದ್ದಾರೆ. ರೂಪ ಎತ್ತಿರುವ ನೈತಿಕ ಹಾಗೂ ಕಾನೂನಿನಾತ್ಮಕ ಪ್ರಶ್ನೆಗೆ ಉತ್ತರ ಕೊಡುವ ಕೆಲಸಗಳನ್ನು ನೀವು ಮಾಡಿ. ಹಾಸನದಲ್ಲಿ ಅವರಿದ್ದಾಗ ಏನೇನು ನಡೆದಿತ್ತು ಎಂಬುದರ ತಿಳಿದು ಉಳಿದವರನ್ನ ಪ್ರಶ್ನೆ ಕೇಳಿ ಎಂದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸರ್ಕಾರ ಅಧಿಕಾರದಲ್ಲಿದೆಯೇ ಎಂಬ ಅನುಮಾನ ಬರ್ತಿದೆ: ಬೆಂಗಳೂರು (ಫೆ.20): ಅಧಿಕಾರಿಗಳ ಜಗಳದ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಈ ವಾತಾವರಣ ನೋಡಿದ್ರೆ ನನಗೆ ಸರ್ಕಾರ ಇದ್ಯಾ ಅನ್ನೋ ಅನುಮಾನ ಬರ್ತಿದೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಒಂದಷ್ಟು ಗೈಡ್ ಲೈನ್ಸ್ ಇದೆ. ಅವರು ಮಾಧ್ಯಮಗಳಲ್ಲಿ ಮಾತನಾಡುವಂತಿಲ್ಲ. ಒಂದು ವೇಳೆ ಮಾಧ್ಯಮಗಳ ಮುಂದೆ ಮಾತನಾಡುವುದಾರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಾಗಲೂ ಅನುಮತಿ ಪಡೆಯಬೇಕು ಎಂದು ಹೇಳಿದರು.
ಹೆಣ್ಣುಮಗಳು ಕ್ಷಮಿಸಿಬಿಡು ಎಂದು ಹೇಳಿದ್ದೆ: ಮಾಜಿ ಸಚಿವ ಸಾ.ರ. ಮಹೇಶ್ ಸಂಧಾನ ವಿಚಾರ ನನಗೆ ಗೊತ್ತಿದೆ. ಆ ಹೆಣ್ಣುಮಗಳು ಮೊದಲಿನಿಂದ ಕಾಟ್ರಾವರ್ಷಿಯಲ್. ಸಾರ ಮಹೇಶ್ ಸದನದಲ್ಲಿ ಇದನ್ನು ರೈಸ್ ಮಾಡಿ ಹಕ್ಕುಚುತ್ತಿ ತಂದಿದ್ದರು. ಆದರೆ ಈ ವಿಚಾರ ಬಿಡುವಂತೆ ಸಾರ ಮಹೇಶ್ ಮೇಲೆ ಎಷ್ಟು ಒತ್ತಡ ಬಂದಿದೆ. ಯಾರಾರು ಒತ್ತಡ ತಂದಿದ್ದರು ಅಂತ ನನ್ನ ಹತ್ರ ಸಹ ಸಾರ ಮಹೇಶ್ ತಿಳಿಸಿದ್ದರು. ಏನೋ ಹೆಣ್ಣು ಮಗಳು ಒಮ್ಮೆ ಕ್ಷಮಿಸುಬಿಡು ಅಂತ ನಾನೇ ಹೇಳಿದ್ದೆ ಎಂದು ಮಾಜಿ ಮುಖ್ಯಮಂತ್ರು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
IAS vs IPS Fight:ರೋಹಿಣಿ ಸಿಂಧೂರಿ ನಗ್ನ ಫೋಟೋಗಳ ಬಗ್ಗೆ ಮಾತಾಡ್ತಾರಾ.?: ಚಾಟಿಂಗ್ ಫೋಟೋ ಅಪ್ಲೋಡ್ ಮಾಡಿದ ಡಿ ರೂಪಾ
ಆಡಳಿತ ಯಂತ್ರ ಹಿಡಿತದಲ್ಲಿಡಲು ಸಾಧ್ಯವಾಗ್ತಿಲ್ಲ: ಐಎಎಸ್-ಐಪಿಎಸ್ ಅಧಿಕಾರಿಗಳ ಜಟಾಪಟಿ ಕುರಿತು ಚನ್ನಪಟ್ಟಣದಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ಆಡಳಿತ ಯಂತ್ರವನ್ನ ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಸರ್ಕಾರಕ್ಕೆ ಸಾಧ್ಯವಾಗ್ತಿಲ್ಲ. ಸರ್ಕಾರ ಅಧಿಕಾರಿಗಳನ್ನೇ ಬಿಟ್ಟು ಲಂಚ ವಸೂಲಿ ಮಾಡ್ತಿದೆ. ಶೇ. 40% ಕಮಿಷನ್ ಜೊತೆ ಹಲವು ಹಗರಣಗಳು ನಡೆತಿರೋದೆ ಆಡಳಿತ ವ್ಯವಸ್ಥೆ ಬೆಂಬಲದಿಂದಲೇ. ಅದಕ್ಕಾಗಿ ಆಡಳಿತ ವ್ಯವಸ್ಥೆ ಹಿಡಿತಕ್ಕೆ ಸಿಗ್ತಿಲ್ಲ. ಅವರ ವಿರುದ್ಧ ಕ್ರಮಕ್ಕೆ ಹೋದರೇ ಇವರ ವಿರುದ್ಧವೇ ತಿರುಗಿ ಬಿಳ್ತಾರೆ. ಅದಕ್ಕೆ ಸರ್ಕಾರದವರು ಹೇಗೋ ನಡೆದುಕೊಂಡು ಹೋಗಲಿ ಅಂತ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ