IAS vs IPS: ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ: ಫೋಟೋ ಯಾರಿಗೆ ಕಳಿಸಿದ್ದೇನೆ ಬಹಿರಂಗಪಡಿಸಲಿ

By Sathish Kumar KH  |  First Published Feb 20, 2023, 3:19 PM IST

ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿದ ರೋಹಿಣಿ ಸಿಂಧೂರಿ ಅವರು, ಡಿ. ರೂಪಾ ಅವರ ವಿರುದ್ಧ 3 ಪುಟಗಳನ್ನು ಒಳಗೊಂಡ ದೂರನ್ನು ಕೊಟ್ಟಿದ್ದಾರೆ. 


ಬೆಂಗಳೂರು (ಫೆ.20): ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರನ್ನು ಭೇಟಿ ಮಾಡಿದ ರೋಹಿಣಿ ಸಿಂಧೂರಿ ಅವರು, ಡಿ. ರೂಪಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಹಾಗೂ ಆರೋಪಗಳ ಕುರಿತ ಮಾಹಿತಿಯನ್ನು ಒಳಗೊಂಡ 3 ಪುಟಗಳ ದೂರನ್ನು ಕೊಟ್ಟಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಾಮಾಜಿಕ ಜಾಲತಾಣದಲ್ಲಿ ನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ಆಲ್‌ ಇಂಡಿಯಾ ಸರ್ವಿಸ್‌ ಕಂಡಕ್ಟ್‌ ರೂಲ್ಸ್‌ ಉಲ್ಲಂಘನೆ ಮಾಡಲಾಗಿದೆ. ಅಧಿಕಾರಿಗಳ ವಿರುದ್ಧ ಆರೋಪಗಳಿದ್ದರೆ ಸರ್ಕಾರಕ್ಕೆ ದೂರು ನಿಡಬೇಕು. ಮಾಧ್ಯಮಗಳ ಮುಂದೆ ದೂರು ನೀಡುವುದು ಮಾನಹಾನಿ ಆಗುತ್ತದೆ. ನನ್ನ ವಿರುದ್ಧ 20 ಅಂಶಗಳ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ರೂಪಾ ಅವರು ಪೋಸ್ಟ್‌ ಮಾಡಿದ ಲಿಂಕ್‌ಗಳ ಸಮೇತವಾಗಿ ದೂರು ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿಸಿದರು.

Tap to resize

Latest Videos

IAS vs IPS Fight:ರೋಹಿಣಿ ಸಿಂಧೂರಿ ನಗ್ನ ಫೋಟೋಗಳ ಬಗ್ಗೆ ಮಾತಾಡ್ತಾರಾ.?: ಚಾಟಿಂಗ್‌ ಫೋಟೋ ಅಪ್ಲೋಡ್‌ ಮಾಡಿದ ಡಿ ರೂಪಾ

ವೈಯಕ್ತಿಕ ಕಾರಣಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇಲ್ಲ:  ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಹೋಗಬಾರದು ಎಂದು ನಿಯಮಗಳು ಇವೆ. ಈ ಕಾರಣದಿಂದ ನಾನು ಮಾತನಾಡಿಲಿಕ್ಕೆ ಆಗಲಿಲ್ಲ. ರೂಪಾ ಅವರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೇನೆ. ಅವರ ಕಾರ್ಯ ವ್ಯಾಪ್ತಿಯೇ ಬೇರೆ. ಅವರು ನಮ್ಮ ಕಾರ್ಯಗಳ ಬಗ್ಗೆಪದೇ ಪದೇ ಆರೋಪ ಮಾಡುತ್ತಿದ್ದಾರೆ. ನಾನು ಸಮಾಜಿಕ ಜಾಲತಾಣವಾದ ಟ್ವಿಟರ್‌, ಫೇಸ್‌ಬುಕ್‌ ಸೇರಿ ಯಾವುದರಲ್ಲಿಯೂ ಆಕ್ಟಿವ್‌ ಇಲ್ಲ ಎಂದು ಹೇಳಿದರು.

ಯಾರಿಗೆ ಫೋಟೋ ಕಳಿಸಿದ್ದೇನೆ ಬಹುರಂಗಪಡಿಸಲಿ: ರೂಪಾ ಅವರು ಐಪಿಎಸ್‌ ಅಧಿಕಾರಿ ಆಗಿದ್ದು, ಅವರಿಗೂ ನಮ್ಮ ಕಾರ್ಯುವ್ಯಾಪ್ತಿ ಇಲ್ಲ. ನಮ್ಮ ಪ್ರೊಫೆಷನಲ್‌ ಲೈಬ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ನನ್ನ ವೈಯಕ್ತಿಕ ಕಾರಣದಿಂದ ನಾನು ಅಲ್ಲಿ ಆಕ್ಟಿವ್‌ ಇಲ್ಲ. ಈ ಕಾಂಟಾಕ್ಟ್‌ನಲ್ಲಿ ಇದರ ಬಗ್ಗೆ ತಕ್ಷಣವೇ ಮಾಹಿತಿ ಸಿಗುವುದಿಲ್ಲ. ವೈಯಕ್ತಿಕ ಆರೋಪ ಮಾಡಿದ್ದಾರೆಯೋ ಅದರ ಬಗ್ಗೆ ನನ್ನ ಮತಿ ಮಾತನಾಡಿದ್ದಾರೆ. ನಾನು ಯಾರಿಗೆ ಫೋಟೋಗಳನ್ನು ಕಳಿಸಿದ್ದೇನೆಯೋ ಅವರ ಬಗ್ಗೆ ಮಾಹಿತಿಯನ್ನು ನೀಡಲಿ. ಮುಖ್ಯ ಕಾರ್ಯದರ್ಶಿಗಳು ಮಧ್ಯಸ್ಥಿಕೆವಹಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮುಖ್ಯ ಕಾರ್ಯದರ್ಶಿ ಅಂಗಳ ತಲುಪಿದ IAS vs IPS ಅಧಿಕಾರಿಗಳ ಜಗಳ: ಸಿಎಸ್‌ ಭೇಟಿಯಾದ ರೋಹಿಣಿ ಸಿಂಧೂರಿ

ರೋಹಿಣಿ ಸಿಂಧೂರಿ ವಿರುದ್ಧ ಸಚಿವ ಸಿಸಿ ಪಾಟೀಲ್‌ ಗರಂ: ಇನ್ನು ಮಾಧ್ಯಮಗಳ ಮುಂದೆ ರೋಹಿಣಿ ಸಿಂಧೂರಿ ಅವರು ಹೇಳಿಕೆ ನೀಡುತ್ತಿದ್ದಾಗ ಹೊರಗೆ ಬಂದ ಸಚಿವ ಸಿ.ಸಿ. ಪಾಟೀಲ್‌ ಅವರು ಇದೇನ್‌ ಹುಡುಗಾಟ ಮಾಡಿರೇನು.? ಎಲ್ಲರೂ ನಡೀರಿ ಇಲ್ಲಿಂದ ಎಂದು ಗರಂ ಆದರು. ತಕ್ಷಣವೇ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದ ರೋಹಿಣಿ ಸಿಂಧೂರಿ ಅವರು ಅಲ್ಲಿಂದ ಹೊರಟು ಹೋದರು.

click me!