ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಭಟನೆಯೊಂದರಲ್ಲಿ ಮಾತನಾಡುತ್ತ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತಾಗಿ ಆಡಿದ ಮಾತುಗಳು ಇದೀಗ ಹೊಸ ವಿವಾದವನ್ನೇ ಎಬ್ಬಿಸುವ ಲಕ್ಷಣ ತೋರಿಸುತ್ತಿವೆ. ಇದರ ಬೆನ್ನಲ್ಲೇ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿ, ತಮ್ಮ ಮಾತಿನ ಭರದಲ್ಲಿ ಬಾಯಿತಪ್ಪಿ ಆಡಿದ ಮಾತು ಇದಾಗಿದೆ. ಖರ್ಗೆ ಅವರ ಕುರಿತು ತಮಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ (ಆ.3) : ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರತಿಭಟನೆಯೊಂದರಲ್ಲಿ ಮಾತನಾಡುತ್ತ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತಾಗಿ ಆಡಿದ ಮಾತುಗಳು ಇದೀಗ ಹೊಸ ವಿವಾದವನ್ನೇ ಎಬ್ಬಿಸುವ ಲಕ್ಷಣ ತೋರಿಸುತ್ತಿವೆ. ಇದರ ಬೆನ್ನಲ್ಲೇ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿ, ತಮ್ಮ ಮಾತಿನ ಭರದಲ್ಲಿ ಬಾಯಿತಪ್ಪಿ ಆಡಿದ ಮಾತು ಇದಾಗಿದೆ. ಖರ್ಗೆ ಅವರ ಕುರಿತು ತಮಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.
ಮಂಗಳವಾರ ತೀರ್ಥಹಳ್ಳಿಯಲ್ಲಿ ಬಿಜೆಪಿ ವತಿಯಿಂದ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು, ಮಲೆನಾಡಿನ ಜನರ ಬದುಕಿನ ಕಷ್ಟಇವರಿಗೆ ಗೊತ್ತಿಲ್ಲ. ನಮ್ಮ ಅಧಿಕಾರಿಗಳು ಕೋರ್ಟಿಗೆ ಹೆದರಿ ಸಾಯ್ತಾರೆ. ಇದರಿಂದ ಜನರು ಬದುಕುವುದು ಕಷ್ಟವಾಗುತ್ತಿದೆ. ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಾಗುತ್ತದೆ. ನಮ್ಮ ದುರದೃಷ್ಟವೆಂದರೆ ಅರಣ್ಯ ಇಲಾಖೆ ಉತ್ತರ ಕರ್ನಾಟಕದವರಿಗೇ ಸಿಗುತ್ತದೆ. ಇವರಿಗೆ ಅರಣ್ಯದ ಬಗ್ಗೆ ಸರಿಯಾದ ಜ್ಞಾನವೇ ಇರುವುದಿಲ್ಲ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮರ, ಗಿಡ ಎನ್ನುವುದರ ಬಗ್ಗೆ ಏನೂ ಗೊತ್ತಿಲ್ಲ. ಮರದ ನೆರಳಿನ ಮಹತ್ವವೂ ಗೊತ್ತಿಲ್ಲ. ಸುಟ್ಟು ಕರಕಲಾದಂತೆ ಇರುತ್ತಾರೆ ಎಂದು ವ್ಯಂಗ್ಯವಾಡಿದ್ದರು.
ಮಾತನಾಡುವ ಭರದಲ್ಲಿ ನಾಲಿಗೆ ಹರಿಬಿಟ್ಟ ಮಾಜಿ ಸಚಿವ: ಉತ್ತರ ಕರ್ನಾಟಕ ನಾಯಕರ ಬಗ್ಗೆ ಹೀಗೆ ಹೇಳೋದಾ ?
ಬಳಿಕ ಮುಂದುವರಿಸಿದ ಅವರು, ನಮ್ಮ ಖರ್ಗೆ ಅವರನ್ನು ನೋಡಿದರೆ ಗೊತ್ತಾಗುತ್ತೆ ಪಾಪ ಎಂದರಲ್ಲದೆ, ಖಂಡ್ರೆ ಅವರು ತಲೆ ಕೂದಲು ಮುಚ್ಚಿಕೊಂಡಿದ್ದಕ್ಕೆ ಸ್ವಲ್ಪ ಉಳಿದುಕೊಂಡಿದ್ದಾರೆ. ಇವರಿಗೆ ಮಲೆನಾಡು ಮತ್ತು ಪಶ್ಚಿಮಘಟ್ಟದ ಬದುಕು ಗೊತ್ತಿಲ್ಲ ಎಂದರು.
ಮೇಲ್ನೋಟಕ್ಕೆ ಖಂಡ್ರೆ ಎನ್ನುವ ಬದಲು ಬಾಯಿ ತಪ್ಪಿ ಖರ್ಗೆ ಎಂದು ಉಚ್ಚರಿಸಿರುವುದು ಕಂಡುಬರುತ್ತದೆ. ಆದರೆ ಈ ಮಾತು ಇದೀಗ ಆರಗ ಅವರಿಗೆ ‘ಭಾರ’ವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಶಾಸಕ ಜ್ಞಾನೇಂದ್ರ ಸ್ಪಷ್ಟನೆ
ಈ ವಿಷಯಕ್ಕೆ ಸಂಬಂಧಿಸಿದಂತೆ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದು, ಮಲೆನಾಡಿಗರಿಗೆ ಶಾಪವಾಗಿರುವ ಕಸ್ತೂರಿ ರಂಗನ್ ವಿಚಾರದ ಮಾತಿನ ಬರದಲ್ಲಿ ಬಾಯಿ ತಪ್ಪಿನಿಂದ ಈ ರೀತಿ ಆಗಿಯೇ ಹೊರತು, ಖಂಡ್ರೆ ಅವರಿಗಾಗಲಿ, ಖರ್ಗೆ ಅವರಿಗಾಗಲಿ ಅವರ ಗೌರವಕ್ಕೆ ಧಕ್ಕೆ ಆಗುವಂತಹ ಮಾತುಗಳನ್ನು ಆಡಿಲ್ಲ ಎಂದಿದ್ದಾರೆ.
ಗ್ಯಾರಂಟಿಗಳ ಈಡೇರಿಸದಿದ್ದರೆ ಸರ್ಕಾರದ ವಿರುದ್ಧ ಹೋರಾಟ: ಶಾಸಕ ಆರಗ ಜ್ಞಾನೇಂದ್ರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹಿರಿತನಕ್ಕೆ, ಅವರ ಮೇಲೆ ಅಪಾರವಾದ ಗೌರವವಿದೆ. ಇದನ್ನು ದೊಡ್ಡದು ಮಾಡಬೇಕಿಲ್ಲ. ಕೆಲವರು ಅನಗತ್ಯವಾಗಿ ಈ ಕುರಿತು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.