ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಪ್ರತಿಕೂಲ ವಾತಾವರಣ ಇರುವ ಹಿನ್ನೆಲೆ ಕಾಫಿನಾಡ ಸುಪ್ರಸಿದ್ದ ಪ್ರವಾಸಿತಾಣವಾಗಿರುವ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಚಿಕ್ಕಮಗಳೂರು (ಆ.3): ಜಿಲ್ಲೆಯಲ್ಲಿ ಭಾರೀ ಮಳೆ ಮತ್ತು ಪ್ರತಿಕೂಲ ವಾತಾವರಣ ಇರುವ ಹಿನ್ನೆಲೆ ಕಾಫಿನಾಡ ಸುಪ್ರಸಿದ್ದ ಪ್ರವಾಸಿತಾಣವಾಗಿರುವ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಮೂಡಿಗೆರೆ ತಾಲೂಕಿನಲ್ಲಿರುವ ಎತ್ತಿನಭುಜ ಪ್ರವಾಸಿ ತಾಣ. ಇಲ್ಲಿ ಜಿಲ್ಲೆ, ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅದರಲ್ಲೂ ಚಾರಣಕ್ಕೆ ಹೋಗುವ ಪ್ರವಾಸಿಗರ ಹಾಟ್‌ಸ್ಪಾಟ್ ತಾಣವಾಗಿರುವ ಎತ್ತಿನಭುಜ. ಆದರೆ ಕಳೆದ 15 ದಿನಗಳಿಂದ ಎತ್ತಿನಭುಜ ಭಾಗದಲ್ಲಿ ಭಾರೀ ಮಳೆ ಸುರಿದಿದೆ. ಭಾರೀ ಮಳೆಯಿಂದ ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುತ್ತಿದೆ. ವಿದ್ಯುತ್ ಕಂಬ ಹಾಗೂ ಮರಗಳು ಮುರಿದು ಬಿದ್ದು ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಪ್ರವಾಸಿಗರು ಫೋಟೊ ತೆಗೆಯುವ ಸಮದರ್ಭದಲ್ಲಿ ಅಪಾಯವಾಗುವ ಸಾಧ್ಯತೆಯಿದೆ. ಇಂಥ ಅನಾಹುತ ಸಂಭವಿಸಿದರೆ ತುರ್ತಾಗಿ ಘಟನಾ ಸ್ಥಳಕ್ಕೆ ಹೋಗುವುದು ಕಷ್ಟ-ಸಾಧ್ಯ. ಹೀಗಾಗಿ ಪ್ರಾಣಹಾನಿ, ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
undefined
ಕಾಫಿನಾಡಿನಲ್ಲಿ ಹೈ ಅಲರ್ಟ್ , ರೆಸಾರ್ಟ್ ಟ್ರಕ್ಕಿಂಗ್ ಸ್ಥಳಗಳಿಗೆ ಪ್ರವಾಸಿಗರಿಗೆ ನಿಷೇಧ
ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು-ಮಸ್ತಿಗೆ ತಡೆ
ಬೆಳ್ತಂಗಡಿ: ಚಾರ್ಮಾಡಿ ಘಾಟಿ ರಸ್ತೆ ಮಧ್ಯ ವಾಹನಗಳನ್ನು ನಿಲ್ಲಿಸಿ ಮೋಜು-ಮಸ್ತಿ ಮಾಡುವ ಪ್ರವಾಸಿಗರಿಗೆ ತಡೆ ಹಾಕಲು ಘಾಟಿ ಪ್ರದೇಶದ ಅಗತ್ಯ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಘಾಟಿಯ ಸೌಂದರ್ಯ ವೀಕ್ಷಣೆ ನೆಪದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡ್ಡಿ ನೀಡುವುದು, ಜಾರುವ ಬಂಡೆಗಳ ಮೇಲೆ ಹತ್ತುವುದು, ಅಪಾಯಕಾರಿ ತೊರೆ, ಹಳ್ಳಗಳಿಗೆ ಇಳಿಯುವುದು, ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿಗೆ ಮುಗಿ ಬೀಳುವುದು, ರಸ್ತೆಮಧ್ಯೆ ಕುಣಿದು ಕುಪ್ಪಳಿಸುವುದು, ಮದ್ಯಪಾನ ಮೊದಲಾದ ಅನಗತ್ಯ ಚಟುವಟಿಕೆಗಳಿಂದ ಸಂಚಾರಕ್ಕೆ ಸಾಕಷ್ಟುಸಮಸ್ಯೆ ಉಂಟುಮಾಡುತ್ತಿದ್ದರು. ಕಳೆದ ಸುಮಾರು ಒಂದು ತಿಂಗಳಿನಿಂದ ಇದು ನಿರಂತರವಾಗಿ ನಡೆಯುತ್ತಿದ್ದು, ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು
Chikkamagaluru: ದತ್ತಮಾಲಾ ಅಭಿಯಾನ: ಜಿಲ್ಲಾಡಳಿತದಿಂದ ಪ್ರವಾಸಿಗರಿಗೆ ನಿಷೇಧ
ಪೋಲಿಸ್ ನಿಯೋಜನೆ: ದ.ಕ. ಹಾಗೂ ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಈಗ ಪ್ರವಾಸಿಗರ ಅನಗತ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರನ್ನು ನಿಯೋಜಿಸಲಾಗಿದೆ. ಇವರು ಇಲ್ಲಿನ ಅಗತ್ಯ ಪ್ರದೇಶಗಳಲ್ಲಿ ದಿನವಿಡೀ ಕಾರ್ಯ ನಿರ್ವಹಿಸಲಿದ್ದಾರೆ. ಪ್ರವಾಸಿಗರ ಮೋಜಿನಿಂದ ವಾಹನ ಸಂಚಾರಕ್ಕೆ ಉಂಟಾಗುತ್ತಿದ್ದ ಅಡ್ಡಿಗೆ ಇದರಿಂದ ಬ್ರೇಕ್ ಬೀಳಲಿದೆ. ಘಾಟಿ ಪರಿಸರದಲ್ಲಿ ವಾಹನಗಳನ್ನು ನಿಲ್ಲಿಸದಂತೆ ಅಲ್ಲಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರು. ಈ ಬಗ್ಗೆ ಗಮನಹರಿಸದ ಪ್ರವಾಸಿಗರ ಹುಚ್ಚಾಟ ಇದರಿಂದ ಕಡಿಮೆಯಾಗುವ ನಿರೀಕ್ಷೆ ಇದೆ.