ದರ್ಶನ್ ನನ್ನ ಶಿಷ್ಯ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗ್ತಿದೆ: ಅಡ್ಡಂಡ ಸಿ ಕಾರ್ಯಪ್ಪ ಟೀಕೆ

By Govindaraj S  |  First Published Jun 15, 2024, 12:32 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಹಚರರು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸರ ವಶದಲ್ಲಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈತನ್ಮಧ್ಯೆ ನಟ ದರ್ಶನ್ ಕುರಿತಂತೆ ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ.


ಮೈಸೂರು (ಜೂ.15): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಸಹಚರರು ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸರ ವಶದಲ್ಲಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈತನ್ಮಧ್ಯೆ ನಟ ದರ್ಶನ್ ಕುರಿತಂತೆ ರಂಗಾಯಣದ ಮಾಜಿ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿರುವ ಅಡ್ಡಂಡ ಕಾರ್ಯಪ್ಪ, ದರ್ಶನ್ ನನ್ನ ಶಿಷ್ಯ ಅಂತ ಹೇಳಿಕೊಳ್ಳೋಕೆ ನಾಚಿಕೆ ಆಗ್ತಿದೆ ಎಂದು ಹೇಳಿದ್ದಾರೆ.

ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ನಟ‌ ದರ್ಶನ್ ಬಗ್ಗೆ ಅಡ್ಡಂಡ ಸಿ ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದ್ದು, ಅಡ್ಡಂಡ ಕಾರ್ಯಪ್ಪ ದರ್ಶನ್‌ಗೆ ನಟನೆ ಕಲಿಸಿ ಕೊಟ್ಟ ಗುರು. 1987ರಲ್ಲಿ ನೀನಾಸಂ ನಲ್ಲಿ ದರ್ಶನ್‌ಗೆ ಕಲೆಯನ್ನು ಕಾರ್ಯಪ್ಪ ಹೇಳಿಕೊಟ್ಟ ಮೊದಲ ಗುರುವಾಗಿದ್ದರು. . ದರ್ಶನ್ 7ನೇ ತರಗತಿಯಲ್ಲೇ 10ನೇ ತರಗತಿ ಹುಡುಗನಂತೆ ಕಾಣುತ್ತಿದ್ದ. ಆತನ ದೇಹ ರೂಪ ಬಂದಿರೋದು ತಾಯಿ ಮೀನಾನಾಯ್ಡುವಿನಿಂದ ತಾಯಿ ದರ್ಶನ ಮೇಲೆ ಬಹಳ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದರು. ಆತನ ಕೆರಿಯರ್‌ ಗಾಗಿ ತುಂಬಾ ಜನರನ್ನು ಬೇಡಿಕೊಂಡಿದ್ದಾರೆ. ಗಂಡನಿಗಾಗಿ ಒಂದು ಕಿಡ್ನಿ ಕೊಟ್ಟ ಮಹಾತಾಯಿ ಆಕೆ. ಮೊದಲಿಗೆ ದರ್ಶನ್‌ಗೆ ಮೇಕಪ್ ಮಾಡುವಾಗ ಯಾವ ಕೈಯಿಂದ ಮೇಕಪ್ ಮಾಡುತ್ತಿದ್ದಿರ ಅಂತ ಕೇಳಿದ್ರು ಎಂದರು.

Tap to resize

Latest Videos

undefined

ಅಂದರೆ ಉತ್ತಮ ಘಳಿಗೆಯಲ್ಲಿ ಮೇಕಪ್ ಮಾಡಲಿ ಅಂತ ಅವರ ಆಸೆ ಇತ್ತು. ಇಲ್ಲಿ ವರೆಗೆ ದರ್ಶನ್ ನನ್ನ ಶಿಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆ. ರಂಗಾಯಣಕ್ಕೆ ಕರೆಸಿ ಎಲ್ಲರಿಗೂ ಹೇಳಿಕೊಳ್ಳಬೇಕು ಅಂತಿದ್ದೆ. ಆದರೆ ಈಗ ದರ್ಶನ್ ಸಂಪೂರ್ಣ ಬದಲಾಗಿದ್ದಾನೆ‌. ದರ್ಶನ್ ಎಲ್ಲರು ತಪ್ಪು ಮಾಡುತ್ತಾರೆ. ನಿನ್ನ ಬಗ್ಗೆ ಮಾತನಾಡಿದರ ಬಗ್ಗೆ ಎಲ್ಲ ಅಭಿಮಾನಿಗಳು ಕೂಗಾಡೋದಲ್ಲ. ಜೈಲಿನಲ್ಲಿ ಎಷ್ಟು ದಿನ ಇರ್ತಿಯಾ ಅನ್ನೋದು ಮುಖ್ಯ ಅಲ್ಲ. ಅಲ್ಲಿ ಶಾಂತವಾಗಿರು, ಪುಸ್ತಗಳನ್ನು ಓದು. ರಾಜ್‌ಕುಮಾರ್, ಹಿರಿಯ ಕಲಾವಿದರ ಪುಸ್ತಕಗಳನ್ನು ಪೊಲೀಸರಿಂದ ತರಿಸಿಕೊಂಡು ಓದು. ಒಳ್ಳೆಯವನಾಗಿ ಬಾ ಎಂದ ಗುರು ಅಡ್ಡಂಡ ಸಿ ಕಾರ್ಯಪ್ಪ ದರ್ಶನ್‌ಗೆ ಕಿವಿ ಮಾತು ಹೇಳಿದ್ದಾರೆ.

ವಿಶೇಷ ಸೌಲಭ್ಯ ಆರೋಪ ಹಿನ್ನೆಲೆ: ನಟ ದರ್ಶನ್‌ ಇರುವ ಠಾಣೆ ಸಿಸಿಟೀವಿ ದೃಶ್ಯ ಕೋರಿ ಆರ್‌ಟಿಐ ಅರ್ಜಿ!

ದರ್ಶನ್‌ಗೆ ಒಳ್ಳೆ ಹೆಂಡತಿ, ಸುಂದರವಾದ ಮಗ ಇದ್ದ. ಶನಿಯಂತೆ ಪವಿತ್ರಾಗೌಡ ಬಂದಳು. ಈಗ ದರ್ಶನ್ ಬದುಕು ಕೈ ಚೆಲ್ಲಿದ್ದಾನೆ. ಕಲೆಯಲ್ಲಿ ಉತ್ತುಂಗಕ್ಕೆ ಏರಿ ಆತ ನನ್ನ ಶಿಷ್ಯವಾಗಿ ಹೆಮ್ಮೆ ಇತ್ತು. 302 ಹಾಕಿಸಿಕೊಂಡಿರುವ ದರ್ಶನ್ ನನ್ನ ಶಿಷ್ಯ ಅಲ್ಲ. ಆತನ ಗುರು ಅಂತ ಹೆಮ್ಮೆ ಪಟ್ಟುಕೊಳ್ಳುತ್ತಿದ್ದ ಮಂಡ್ಯ ರಮೇಶ್ ಈಗ ಏನು ಹೇಳುತ್ತಾರೆ ಒಮ್ಮೆ ಕೇಳಬೇಕು ಎಂದು ಹೇಳಿದರು.

click me!