ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಗ್ರೀನ್ ಸಿಗ್ನಲ್, ಕಾಂಗ್ರೆಸ್‌ ವಿರೋಧ ಮಾಡಿಲ್ಲ ಎಂದ ಮೇಯರ್

By Suvarna News  |  First Published Aug 29, 2022, 11:01 PM IST

ವಿವಾದಿತ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹಿಂದೂ ಸಂಘಟನೆಗಳ ಮನವಿಗೆ ಪಾಲಿಕೆ ಅಸ್ತು ಎಂದಿದೆ. ಇದರಿಂದ ಹಿಂದೂಪರ ಸಂಘಟನೆಗಳು ಸಂಭ್ರಮಿಸಿದ್ದಾರೆ.


ಹುಬ್ಬಳ್ಳಿ, (ಆಗಸ್ಟ್.29): ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅನುಮತಿ ನೀಡಿದೆ. ವಿವಾದಿತ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ  3 ದಿನ ಗಣೇಶ ಕೂರಿಸಲು ಅವಕಾಶ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನು ಈ ಬಗ್ಗೆ ಮೇಯರ್  ಈರೇಶ ಅಂಚಟಗೇರಿ ಪ್ರತಿಕ್ರಿಯಿಸಿದ್ದು, ಗಣೇಶ ಪ್ರತಿಷ್ಠಾಪನೆಗಾಗಿ ಒಟ್ಟು 6 ಹಿಂದುಪರ‌ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿ ಗಣೇಶ ಪ್ರತಿಷ್ಠಾಪನೆ ಅವಕಾಶ ಮಾಡಿಕೊಡುವಂತೆ ವರದಿ‌ ನೀಡಿತ್ತು. 6 ಸಂಘಟನೆಗಳಲ್ಲಿ ಒಂದು ಸಂಘಟನೆಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

 ಮೂರು‌ ದಿನಗಳ ಕಾಲ್ ಒಂದು‌ ಸಮಿತಿಗೆ  ಗಣೇಶ ಪ್ರತಿಷ್ಢಾಪಣೆಗೆ ಅವಕಾಶ ಮಾಡಿಕೊಡಲಾಗಿದೆ. ಸಮಿತಿ‌ ಸರ್ವೋಚ್ಚ ನ್ಯಾಯಾಲಯದ ಆಗು ಹೋಗುಗಳ ಚರ್ಚೆ ಮಾಡಿದ್ದಾರೆ. ಗಣಪತಿ ಪ್ರತಿಷ್ಠಾಪಣೆಗೆ 6 ಅರ್ಜಿಗಳು ಬಂದಿವೆ. ಅದರಲ್ಲಿ ಒಬ್ಬರಿಗೆ ಅನುಮತಿ ಕೊಡಲಾಗಿದೆ. ಉಳಿದ ಐವರು ಅವರಿಗೆ ಸಾಥ್ ಕೊಡಬೇಕು ಎಂದು ತಿರ್ಮಾನ ತೆಗೆದುಕ್ಕೊಳ್ಳಬೇಕು. ಸದನ ಸಮಿತಿಗೆ ಮಾತ್ರ ವಿರೋಧ ಎಂದು ಕಾಂಗ್ರೆಸ್ ನವರು ಹೇಳಿದ್ದಾರೆ. ಆದ್ರೆ, ಕಾಂಗ್ರೆಸ್‌ನವರು ಗಣಪತಿ ಪ್ರತಿಷ್ಠಾಪನೆಗೆ ವಿರೋಧ ಮಾಡಿಲ್ಲ ಎಂದು ತಿಳಿಸಿದರು. ಕಳೆದ ಮೂವತ್ತು ವರ್ಷದಿಂದ ಈದ್ಗಾದಲ್ಲಿ ಧ್ವಜಾರೋಹಣ ಮಾಡುತ್ತಿರಲಿಲ್ಲ. ಆದರೆ ಈ ಭಾರಿ‌ ನಾವು ಧ್ವಜಾರೋಹಣ ಮಾಡಿದ್ದೆವೆ ಎಂದರು.

Tap to resize

Latest Videos

ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ: ಇನ್ನು ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು,  ಮಹಾನಗರ ಪಾಲಿಕೆಯ ನಿರ್ಣಯವನ್ನ‌ ನಾನು‌ ಸ್ವಾಗತಿಸುತ್ತೆನೆ.  ಮೇಯರ್ ಈರೇಶ ಅಂಚಟಗೇರಿ ಅವರು ಒಳ್ಳೆಯ ನಿರ್ಣಯ ತೆಗೆದುಕ್ಕೊಂಡಿದ್ದಾರೆ. ಎಲ್ಲರನ್ನ‌ ಒಗ್ಗೂಡಿಸಿ ತಿರ್ಮಾನ ತೆಗೆದುಕ್ಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅನುಮತಿ ಕೊಡದಿದ್ದರೂ ಹುಬ್ಬಳ್ಳಿ ಈದ್ಗಾದಲ್ಲಿ ಗಣೇಶೋತ್ಸವ: ಪ್ರಮೋದ್‌ ಮುತಾಲಿಕ್‌

ನಾನು‌ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬಂದೋಬಸ್ತ್‌ ಬಗ್ಗೆ ವ್ಯವಸ್ಥೆ ಮಾಡಿ‌ ಅಂತ ಹೇಳಿದ್ದೇನೆ. ಕಾನುನು ಸುವ್ಯವಸ್ಥೆ ಕಾಪಾಡಬೇಕು ಅಂತ ಸೂಚನೆ ನೀಡಿದ್ದೇನೆ. ಮಹಾನಗರ ಪಾಲಿಕೆ ಸಂಭಂದಪಟ್ಟ ಜಾಗ ಅದು. ಪಾಲಿಕೆಯ ಮೇಯರ್‌ ಒಳ್ಳೆಯ ತಿರ್ಮಾನ ಮಾಡಿದ್ದಾರೆ. ಈದ್ಗಾ ಮೈದಾನ ಖಾಲಿ ಇರುತ್ತೆ. ಯಾರು ಎನೂ ಕಳೆದುಕೊಳ್ಳೋದು ಇಲ್ಲ. ಯಾರು ಗಲಾಟೆ ಮಾಡದೆ ಶಾಂತಿ‌ಭಕ್ತಿಯಿಂದ ನಾನು‌ ಜ‌ನರಿಗೆ ಕೇಳಿಕ್ಕೊಳ್ಳುತ್ತೆನೆ ಎಂದು ಹೇಳಿರು.

click me!