ಹುಬ್ಬಳ್ಳಿ: ಯುವಕರ ಪಾಲಿಗೆ ಮೃತ್ಯಪಾಶವಾಯ್ತು ಕೇಬಲ್ ವೈರ್: ಇಬ್ಬರು ಬೈಕ್ ಸವಾರರು ಸಾವು

Published : Mar 24, 2026, 10:02 AM IST
hubli accident

ಸಾರಾಂಶ

Hubballi bike accident news: ಕಡಿದು ಬಿದ್ದ ಕೇಬಲ್ ವೈರ್‌ಗೆ ಸಿಲುಕಿ ಬೈಕ್ ಸವಾರರಿಬ್ಬರು ಸಾವಿಗೀಡಾದಂತಹ ದುರಂತ ಘಟನೆ ಇಂದು ಮುಂಜಾನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರೋ ಅರ್ಬನ್ ಓಯಾಸಿಸ್ ಮಾಲ್ ಬಳಿ ಈ ದುರಂತ ನಡೆದಿದೆ.

ಕಡಿದು ಬಿದ್ದ ಕೇಬಲ್ ವೈರ್‌ಗೆ ಸಿಲುಕಿ ಬೈಕ್ ಸವಾರರಿಬ್ಬರು ಸಾವು

ಹುಬ್ಬಳ್ಳಿ: ಕಡಿದು ಬಿದ್ದ ಕೇಬಲ್ ವೈರ್‌ಗೆ ಸಿಲುಕಿ ಬೈಕ್ ಸವಾರರಿಬ್ಬರು ಸಾವಿಗೀಡಾದಂತಹ ದುರಂತ ಘಟನೆ ಇಂದು ಮುಂಜಾನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರೋ ಅರ್ಬನ್ ಓಯಾಸಿಸ್ ಮಾಲ್ ಬಳಿ ಈ ದುರಂತ ನಡೆದಿದೆ. 

ಮೃತ ಬೈಕ್ ಸವಾರರಿಬ್ಬರು ತಮ್ಮ 20ರ ಹರೆಯದಲ್ಲಿದ್ದು, ಮೃತರನ್ನು 25 ವರ್ಷದ ಫಯಾಜ್ ಹಾಗೂ 27 ವರ್ಷದ ಮುಜಾಮಿಲ್ ಎಂದು ಗುರುತಿಸಲಾಗಿದೆ. ಮೃತರು ಹುಬ್ಬಳ್ಳಿಯ ತಾಜ್ ನಗರದ ನಿವಾಸಿಗಳಾಗಿದ್ದಾರೆ. ರಸ್ತೆ ಮೇಲೆ ಕೇಬಲ್ ವೈರ್ ಕಡಿದು ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ. 

ಇದನ್ನೂ ಓದಿ:  ಪ್ರಧಾನಿ ಜೊತೆಗೆ ಸೆಲ್ಫಿ ತಗೊಂಡು ವೋಟ್ ಹಾಕಲ್ಲ ಎಂದ ಯುವಕನಿಗೆ ಮೆಲೋನಿ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ!

ಕೇಬಲ್ ವೈರ್‌ಗೆ ಸಿಲುಕಿ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಉರುಳಿದ್ದರಿಂದ ಇಬ್ಬರು ರಸ್ತೆಗೆ ಬಿದ್ದು, ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಅಪ್ಪನಿಗೆ ಅನಾರೋಗ್ಯ ಮನೆಯಲ್ಲಿ ಬಡತನ SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ಬಾಲಕಿ: ಆಮೇಲಾಗಿದ್ದೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ಶಾಲಾ ಶಿಕ್ಷಕರೇ ಮೊಟ್ಟೆ ಖರೀದಿಸಿ, ಬೇಯಿಸಿ, ಸುಲಿದು ಮಕ್ಕಳಿಗೆ ಕೊಡಬೇಕು
ವಾಣಿಜ್ಯ ಸಿಲಿಂಡರ್‌ಗೆ ನೋಂದಣಿ ಕಡ್ಡಾಯ! ಕಾಳ ಸಂತೆಯಲ್ಲಿ ಮಾರಾಟ ತಡೆಗೆ ಕ್ರಮ