ನಾದಿನಿಯೊಂದಿಗೆ ಬಿಸಿ ಬಿಸಿ ಚುಂಬನ : ವೈರಲ್ ಆಯ್ತು ಕಾಂಗ್ರೆಸ್ ಮುಖಂಡನ ಫೋಟೊ

Published : Nov 10, 2018, 09:12 AM ISTUpdated : Nov 10, 2018, 01:23 PM IST
ನಾದಿನಿಯೊಂದಿಗೆ ಬಿಸಿ ಬಿಸಿ ಚುಂಬನ : ವೈರಲ್ ಆಯ್ತು ಕಾಂಗ್ರೆಸ್ ಮುಖಂಡನ ಫೋಟೊ

ಸಾರಾಂಶ

ರಾಜಕೀಯ ಮುಖಂಡನೋರ್ವ ತನ್ನ ನಾದಿನಿಗೆ ಕಿಸ್ ಮಾಡಿದ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೂವಿನಹಡಗಲಿ: ಹೂವಿನಹಡಗಲಿ ಪುರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಪುರಸಭೆ ಸದಸ್ಯನೊಬ್ಬ ತನ್ನ ಪತ್ನಿಯ ತಂಗಿ (ನಾದಿನಿ)ಗೆ ಚುಂಬಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಇದೀಗ ಆ ಕಾಂಗ್ರೆಸ್ ಶಾಸಕರೋರ್ವರ ಆಪ್ತನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  

ಪಟ್ಟಣದ 15ನೇ ವಾರ್ಡ್‌ನ ಸದಸ್ಯ ಕೆ.ಎಸ್‌. ರೆಹಮಾನ್‌ ಫಜೀತಿಗೆ ಸಿಲುಕಿಕೊಂಡಿರುವ ಜನಪ್ರತಿನಿಧಿ. ಹೆಂಡತಿಯ ತಂಗಿಯೊಂದಿಗೆ ಈ ರೀತಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸ್ವತಃ ರೆಹಮಾನ್‌ನೇ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ.

ಅಲ್ಲದೆ ಆತನ ನಾದಿನಿಗೆ ವಿವಾಹವಾಗಿದೆ ಎಂದು ತಿಳಿದುಬಂದಿದೆ. ಇನ್ನು ಫೋಟೋ ವೈರಲ್‌ ಆಗುತ್ತಿದ್ದಂತೆ ಎರಡು ಕುಟುಂಬಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!