Hijab Verdict ಭಟ್ಕಳದಲ್ಲಿ ಮುಸ್ಲಿಂ ಅಂಗಡಿಗಳು ಬಂದ್, ನಾಲ್ವರು PFI ಕಾರ್ಯಕರ್ತರ ಬಂಧನ!

By Suvarna News  |  First Published Mar 16, 2022, 4:17 PM IST

ಭಟ್ಕಳದಲ್ಲಿ ಹಿಜಾಬ್ ತೀರ್ಪಿನ ಕುರಿತಾಗಿ ಮುಸ್ಲಿಂ ಅಂಗಡಿಗಳು ಬಂದ್

ಬಂದ್ ಗೆ ಕ್ಯಾರೇ ಎನ್ನದ ಭಟ್ಳಳದ ಹಿಂದು ಸಮುದಾಯ

ಬಲವಂತವಾಗಿ ಅಂಗಡಿ ಮುಚ್ಚಲು ಯತ್ನಿಸಿದ ಪಿಎಫ್ ಐ ಕಾರ್ಯಕರ್ತರು



ಭಟ್ಕಳ, ಉತ್ತರ ಕನ್ನಡ (ಮಾ. 16): ಕೋಮು ಸೂಕ್ಷ್ಮ ಪ್ರದೇಶ ಭಟ್ಕಳದಲ್ಲಿ(Bhatkal) ಹಿಜಾಬ್ ತೀರ್ಪಿನ (Hijab Verdict) ವಿರುದ್ಧವಾಗಿ ಬುಧವಾರ ನಗರದ ಮುಸ್ಲಿಂ ಅಂಗಡಿಗಳ ಮಾಲೀಕರು ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಿದ್ದರು. ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ (Karnataka High Court) ನೀಡಿದ ತೀರ್ಪಿನ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿರುವ ಇಲ್ಲಿನ ವ್ಯಾಪಾರಿಗಳು ಅಂಗಂಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಿರ್ಧರಿಸಿದ್ದರು. ಆದರೆ, ಇವರ ಬಂದ್ ಗೆ ಹಿಂದು ವ್ಯಾಪಾರಿಗಳು ಕ್ಯಾರೇ ಎನ್ನದ ಕಾರಣ, ಭಟ್ಕಳದ ಪ್ರಮುಖ ಕೆಳಪೇಟೆ ಹೊರತಾಗಿ ಉಳಿದೆಡೆ ದಿನನಿತ್ಯದ ಚಟುವಟಿಕೆಗಳು ಎಂದಿನಂತೆ ನಡೆದವು. 

ಭಟ್ಕಳದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಬಾಂಬೆ ಬಜಾರ್, ಚೌಕ್ ಬಜಾರ್, ನವಾಯತ್ ಕಾಲೋನಿ, ಮದೀನಾ ಕಾಲೋನಿ,  ಮೌಲಾನಾ ಆಜಾದ್ ರೋಡ್, ಮಾರಿಕಟ್ಟೆ, ಕಾರ್‌ಸ್ಟ್ರೀಟ್ ಮುಂತಾದೆಡೆ ಬಂದ್ ಗೆ ಭಾಗಶಃ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಉಳಿದೆಡೆ ಸಂಪೂರ್ಣ ನೀರಸವಾಗಿತ್ತು. ಕೇವಲ ಮುಸ್ಲಿಂ ವರ್ತಕರು  ಹೋಟೆಲ್, ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಬಂದ್ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಲು ಅಲ್ಲಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಇನ್ನು ಈ ಬಂದ್ ನಿಂದ ಭಟ್ಕಳದ ಮುಸ್ಲಿಂ ಸಮುದಾಯದ ಕೇರ್ ಟೇಕರ್ ಎಂದೇ ಹೇಳಲಾಗುವ ತಂಜೀಂ (Tanzim ) ದೂರ ಉಳಿದಿದ್ದು, ತಾವು ಬಂದ್ ಗೆ ಕರೆ ನೀಡಿಲ್ಲ ಎಂದು ಹೇಳಿದೆ.  ಜನರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದಾರೆ. ತಂಜೀಂ ಯಾವುದೇ ಬಂದ್ ಗೆ ಕರೆ ನೀಡಿಲ್ಲ ಎಂದು ಹೇಳಿದೆ. ಸರಕಾರ ಹಾಗೂ ಹೈಕೋರ್ಟ್ ಮುಸ್ಲಿಮರ ಧಾರ್ಮಿಕ ನಂಬಿಕೆಗೆ ಆದ್ಯತೆ ನೀಡಬೇಕಿತ್ತು. ಕೋರ್ಟ್ ಆದೇಶ ಬೇಸರ ಮೂಡಿಸಿದ್ದು, ಇದರ ವಿರುದ್ಧ ಮತ್ತೆ ಸುಪ್ರೀಂ ಕೋರ್ಟ್‌ಗೆ ತೆರಳುತ್ತೇವೆ ಎಂದು ತಂಜೀಂ ಹೇಳಿದೆ.

ಸೆಮಿಸ್ಟರ್ ಮುಗಿಯುವ ಹಂತದಲ್ಲಿರುವಾಗ ಹಿಜಾಬ್ ಗೆ ಹೊಸ ನಿಯಮವನ್ನು ತರಲಾಯಿತು. ಒಟ್ಟಾರೆ ಇದು ಮುಂದಿನ ವರ್ಷ ಇರುವ ವಿಧಾನಸಭೆ ಚುನಾವಣೆಗೆ ರಾಜ್ಯ ಸರ್ಕಾರವೇ ನಡೆಸಿರುವ ಅಜೆಂಡಾ ಎಂದು ಸರ್ಕಾರದ ವಿರುದ್ಧ ತಂಜೀಂ ವಕ್ತಾರ ಡಾ. ಹನೀಫ್ ಶಬಾ ಹಾಗೂ ಕಾರ್ಯಕಾರಿಣಿ ಸದಸ್ಯ ನ್ಯಾಯವಾದಿ ಇಮ್ರಾನ್ ಲಂಕಾ ಹೇಳಿದ್ದಾರೆ.

The Kashmir Files ಚಿತ್ರ ಪ್ರದರ್ಶನ ಮಾಡಿ, ಭಟ್ಕಳದಲ್ಲಿ ಚಿತ್ರಮಂದಿರದ ಮುಂದೆ ಪ್ರತಿಭಟನೆ
ನಾಲ್ವರು ಪಿಎಫ್ ಐ ಕಾರ್ಯಕರ್ತರ ಬಂಧನ

ಮಂಗಳವಾರ ಕರ್ನಾಟಕ ಹೈಕೋರ್ಟ್ ಆದೇಶ ಹೊರಬಿದ್ದ ಬಳಿಕ ಇಡೀ ಭಟ್ಕಳದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಕೆಲವು ವರ್ತಕರು ಇದರ ಬೆನ್ನಲ್ಲೇ ತಮ್ಮ ಅಂಗಡಿಗಳನ್ನು ಮುಚಚ್ಚಲು ಆರಂಭಿಸಿದ್ದರು. ಈ ವೇಳೆ ಭಟ್ಕಳದ ಪ್ರಮುಖ ವಾಣಿಜ್ಯ ಪ್ರದೇಶ ಮಾರಿಕಟ್ಟೆಯ ಬಳಿ, ಕೆಲವು ಮುಸ್ಲಿ ಪಿಎಫ್ಐ ಕಾರ್ಯಕರ್ತರಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಡುವಂತೆ ಒತ್ತಾಯ ಮಾಡಿದರು. ಮಧ್ಯಾಹ್ನ ಏಕಾಏಕಿ ಬಂದ ಯುವಕರು ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಒತ್ತಾಯ ಮಾಡಿದರು. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸಮ್ಮತಿಸಿ ಬಂದ್ ಮಾಡಿದರು.

Ahmedabad Bomb Attack: 21 ಬಾಂಬ್.. 38 ಜನರಿಗೆ ಗಲ್ಲು..  ಯಾಸೀನ್ ಭಟ್ಕಳ ಜನ್ಮ ಜಾತಕ!
ಈ ವಿಷಯ ತಿಳಿದು ತಕ್ಷಣವೇ ಪ್ರದೇಶಕ್ಕೆ ಪೊಲೀಸರು ಧಾವಿಸಿದರು. ಅಂಗಡಿ ಮುಚ್ಚುವಂತೆ ಒತ್ತಾಯ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಡಿವೈಎಸ್‌ಪಿ ಬೆಳ್ಳಿಯಪ್ಪ ( DySP Belliappa) ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ನಗರದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಕೂಡ ಆಗಿದೆ. ಅಂಗಡಿ ಬಂದ್ ಮಾಡಲು ಒತ್ತಾಯ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿವೈಎಸ್‌ಪಿ ಎಚ್ಚರಿಕೆ ನೀಡಿದ್ದಾರೆ. ಜನರನ್ನು ಚದುರಿಸಿಲು ಪೊಲೀಸರು ಪ್ರಯತ್ನಿಸಿದಾಗ ಪೊಲೀಸರು ಮತ್ತು  ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದ ಸೂಕ್ಷ್ಮತೆ ಅರಿತ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಪ್ರತಿಭಟನಾನಿರತ ಜನರು ಕಾಲ್ಕಿತ್ತಿದ್ದಾರೆ. ಇದೇ ವೇಳೆ ಮಾತನಾಡಿದ ಡಿವೈಎಸ್ ಪಿ ಬೆಳ್ಳಿಯಪ್ಪ, ಸ್ವಯಂಪ್ರೇರಿತ ಬಂದ್ ಮಾಡಿದರೆ ಯಾವ ತೊಂದರೆಗಳೂ ಇಲ್ಲ. ಹಾಗೇನಾದರೂ ಒತ್ತಾಯ ಮಾಡಿ ಬಂದ್ ಮಾಡಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಖಡಕ್ ಆಗಿ ಸೂಚನೆ ನೀಡಿದ್ದರು.

ಈ ವಿಚಾರವಾಗಿ ಪಿಎಫ್ ಐ ಕಾರ್ಯಕರ್ತರಾದ ಅಜೀಮ್ ಅಹ್ಮದ್  ಮೊಹಿದ್ದೀನ್ ಆಬೀರ್ ಹಾಗೂ ಶಾರೀಕ್, ವಕೀಲ ತೈಮೂರ್ ಹುಸೇನ್ ಗವಾಯಿ ವಿರುದ್ಧ ಐಪಿಸಿ ಸೆಕ್ಷನ್ 143, 147, 290 ಅಡಿ ಪ್ರಕರಣ ದಾಖಲು ಮಾಡಲಾಗಿದೆ.

Tap to resize

Latest Videos

click me!