ಮಹಮ್ಮದ್ ಬಿನ್ ತುಘಲಕ್ ಎಂಬ ಹುಚ್ಚು ದೊರೆ ರೀತಿ ಆಡ್ತಿದ್ದಾರೆ; ಸಿಎಂ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ

By Ravi Janekal  |  First Published Dec 23, 2023, 3:49 PM IST

ಮಹಮ್ಮದ್ ಬಿನ್ ತುಘಲಕ್ ಎಂಬ ಹುಚ್ಚು ದೊರೆ ರೀತಿಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಆಡಳಿತ ನಡೆಸ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.


ಶಿವಮೊಗ್ಗ (ಡಿ.23): ಮಹಮ್ಮದ್ ಬಿನ್ ತುಘಲಕ್ ಎಂಬ ಹುಚ್ಚು ದೊರೆ ರೀತಿಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಆಡಳಿತ ನಡೆಸ್ತಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಘೋಷಣೆ ಮಾಡಿದ ವಿಚಾರ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿದ ಈಶ್ವರಪ್ಪ ಅವರು, ಸಿಎಂ ಸಿದ್ದರಾಮಯ್ಯನವರು ಕೋರ್ಟ್ ಆದೇಶ, ವಿಧಾನಸಭಾ ನಿರ್ಣಯದ ಬಗ್ಗೆ ಸಂಬಂಧ ಇಲ್ಲದಂತೆ ನಡೆದುಕೊಳ್ತಿದ್ದಾರೆ. ಹಿಜಾಬ್ ಕುರಿತು ಕೋರ್ಟ್ ನಲ್ಲಿ ಚರ್ಚೆ ನಡೆಯುತ್ತಿದೆ. ಶಿಕ್ಷಣ ಸಚಿವ ಕೂಡ ನ್ಯಾಯಾಲಯದಲ್ಲಿ ಚರ್ಚೆ ನಡೆಯುತ್ತಿರುವ ಹಿನ್ನೆಲೆ ಬದಲಾವಣೆ ತರಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಿರುವಾಗ ಸಿದ್ದರಾಮಯ್ಯ ತುಘಲಕ್ ರೀತಿ ಎಲ್ಲವನ್ನು ಧಿಕ್ಕರಿಸಿ ಮುಸ್ಲಿಂ ತುಷ್ಟೀಕರಣ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

ಪ್ರಧಾನಿ ಮೋದಿ ₹5000 ಕೊಡ್ತಾರೆ ಅನ್ನೋ ವದಂತಿ; ಗ್ಯಾಸ್ ಅಂಗಡಿ ಮುಂದೆ ಮಹಿಳೆಯರು ನೂಕುನುಗ್ಗಲು!

ಕರ್ನಾಟಕದಲ್ಲಿ ಎಲ್ಲಾ ಮುಸಲ್ಮಾನರು ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಪೈಪೋಟಿ. ಅದಕ್ಕಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಮುಸಲ್ಮಾನರ ಮತಕ್ಕಾಗಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ,ಕಾನೂನು ಯಾವುದು ಬೇಡ ರಾಜ್ಯದಲ್ಲಿ ಹಿಂದೂ ಮತ್ತು ಮುಸ್ಲಿಮರು ಹೊಡೆದಾಡುತ್ತಾ ಇರಬೇಕು ಎಂದು ಆಸೆ. ಹಿಂದು ಮುಸ್ಲಿಂ ಹೊಡೆದಾಡಿದಷ್ಟು ಅವರಿಗೆ ಮತಬ್ಯಾಂಕ್ ಗಟ್ಟಿಯಾಗುತ್ತೆ ಹೀಗಾಗಿ ಇಂಥ ತುಘಲಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. 

ಸಿಎಂ ಕುತಂತ್ರದ ರಾಜಕಾರಣ:

ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಮುಸ್ಲಿಂ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ. ತೆಲಂಗಾಣದಲ್ಲಿ ಸಚಿವ ಜಮೀರ್ ಅಹಮದ್ ಸಹ ಮುಸ್ಲಿಮರನ್ನು ಎತ್ತಿ ಕಟ್ಟಿದ್ದರು. ಜಮೀರ್ ಹೇಳಿಕೆಯಿಂದ ಮುಸ್ಲಿಮರೆಲ್ಲ ಒಟ್ಟಾಗಿ ಕಾಂಗ್ರೆಸ್ಗೆ ಲಾಭ ಆಯ್ತು ಮುಸ್ಲಿಮರ ಎಲ್ಲ ಮತಗಳು ಕಾಂಗ್ರೆಸ್ ಬೀಳಬೇಕು ಎಂಬ ಕುತಂತ್ರದ ರಾಜಕಾರಣಕ್ಕಾಗಿ ರಾಜ್ಯದಲ್ಲಿ ಸಿದ್ದರಾಮಯ್ಯ ಅದೇ ರೀತಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆ ಎಲ್ಲಾ ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುವ ಭಯದಿಂದ ಮುಸ್ಲಿಮರ ಓಲೈಕೆ ಮಾಡುತ್ತಿದ್ದಾರೆ. ರಾಜಕೀಯದ ಕುತಂತ್ರ ಮಾಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ವಿದ್ಯಾರ್ಥಿಗಳಿಗೆ ಸಮವಸ್ತ್ರ ಬೇಕು, ಹಿಜಾಬ್ ಯಾಕೆ?

ವಿದ್ಯಾರ್ಥಿಗಳಲ್ಲಿ ಸಮವಸ್ತ್ರ ಬೇಕು ಎಂದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಉಡುಪಿಯಲ್ಲಿ ಪಿ ಎಫ್ ಸಂಘಟನೆಯ ಚಿತಾವಣೆಯಿಂದ ವಿದ್ಯಾರ್ಥಿನಿಯರು ಹಿಜಾಬ್ ಬೇಕು ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ. ಹಿಜಾಬ್ ಬೇಕು ಎಂದು ಕೇವಲ ಆರು ವಿದ್ಯಾರ್ಥಿನಿಯರನ್ನು ಇಟ್ಕೊಂಡು ಪಿ ಎಫ್ಐ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿಸಿದ್ದರು. ಅದನ್ನು ಕಾಂಗ್ರೆಸ್ ಬೆಂಬಲಿಸುವ ಮೂಲಕ ಪಿಎಫ್ಐ  ಚಿತಾವಣೆಗೆ ಸಿದ್ದರಾಮಯ್ಯ ತುಪ್ಪ ಸವರುವ ಕೆಲಸ ಮಾಡಿದ್ದಾರೆ  ಸಿಎಂ ಸಿದ್ದರಾಮಯ್ಯನವರಿಗೆ ಕೋರ್ಟ್ ಆದೇಶ, ಅಂಬೇಡ್ಕರ್ ಬಗ್ಗೆ ಆಗಲಿ ಗೌರವ ಇಲ್ಲ. ಹಿಜಾಬ್ ವಿಚಾರವಾಗಿ ರಾಜ್ಯದಲ್ಲಿ ಕೋಮುಗಲಭೆ ದಂಗೆ ನಡೆದರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ. ಮಹಮ್ಮದ್ ಬಿನ್ ತುಘಲಕ್ ಆಡಳಿತವನ್ನು ಕರ್ನಾಟಕದಲ್ಲಿ ಮಾಡಲು ಸಿದ್ದರಾಮಯ್ಯ ಹೊರಟಿದ್ದಾರೆ. ಮುಸ್ಲಿಮರಿಗೆ ಹತ್ತು ಸಾವಿರ ಕೋಟಿ ಕೊಡುತ್ತೇನೆ ಎಂದಿದ್ದಾರೆ. ಬರ ಪರಿಹಾರಕ್ಕೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. 

ಹಿಜಾಬ್ ನಿಷೇಧ ವಾಪಸ್; ಮುಸ್ಲಿಂ ತುಷ್ಟೀಕರಣದ ಪರಾಕಾಷ್ಠೆ -ಪ್ರಲ್ಹಾದ್ ಜೋಶಿ ಕಿಡಿ

ಹಿಜಾಬ್ ವಿಚಾರ; ಬಿಜೆಪಿ ಹೋರಾಟ:

ಕಾನೂನನ್ನು ಮೀರಿದ್ದೀರಾ ಸಿದ್ದರಾಮಯ್ಯನವರೇ. ರಾಜ್ಯದ ಕಾನೂನು ಮಂತ್ರಿಗಳಿಗೆ ನ್ಯಾಯಾಲಯದ ಬಗ್ಗೆ ಗೌರವವಿದ್ದರೆ ಈ ಆದೇಶ ಜಾರಿಗೆ ತರಲು ಅವಕಾಶ ನೀಡಬಾರದು. ಅದಾಗದಿದ್ರೆ ಕಾನೂನು ಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಬಿಜೆಪಿ ಈ ವಿಷಯದ ಕುರಿತು ಹೋರಾಟದ ರೂಪರೇಷೆಯನ್ನು ರಾಜ್ಯಾಧ್ಯಕ್ಷರು ತೀರ್ಮಾನ ಕೈಗೊಳ್ಳುತ್ತಾರೆ. ಹಿಜಾಬ್ ನಿಷೇಧ ವಾಪಸ್ ಪಡೆಯುತ್ತೇವೆ ಎಂಬುದು ನ್ಯಾಯಾಂಗ ನಿಂದನೆ ಆಗುತ್ತದೆ. ಕಾಂಗ್ರೆಸ್ ನವರು ಎಷ್ಟೇ ಸರ್ಕಸ್ ಮಾಡಿದರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 28 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದರು.

click me!