ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರಿಗೂ 5 ಸಾವಿರ ರೂಪಾಯಿ ಹಣ ಕೊಡುತ್ತಾರೆ ಅನ್ನೋ ವದಂತಿ ಹಬ್ಬಿಸಿದ ಕಿಡಿಗೇಡಿಗಳು. ಗ್ಯಾಸ್ ಅಂಗಡಿ ಮುಂದೆ ನೂರಾರು ಜನ ಸೇರಿ ನೂಕುನುಗ್ಗಲು ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.
ಹುಬ್ಬಳ್ಳಿ (ಡಿ.23): ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರಿಗೂ 5 ಸಾವಿರ ರೂಪಾಯಿ ಹಣ ಕೊಡುತ್ತಾರೆ ಅನ್ನೋ ವದಂತಿ ಹಬ್ಬಿಸಿದ ಕಿಡಿಗೇಡಿಗಳು. ಗ್ಯಾಸ್ ಅಂಗಡಿ ಮುಂದೆ ನೂರಾರು ಜನ ಸೇರಿ ನೂಕುನುಗ್ಗಲು ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ.
ಗ್ಯಾಸ್ ಕನೆಕ್ಷನ್ ಹೊಂದಿದ ಪ್ರತಿ ಮಹಿಳೆಗೂ ಮೋದಿಯವರು ಐದು ಸಾವಿರ ನೀಡುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಕಲಘಟಗಿ ಲೋಕಪೂಜ್ಯ ಗ್ಯಾಸ್ ಕಚೇರಿ ಎದುರು ಜನವೋ ಜನ. ಬೆಳಗ್ಗೆಯಿಂದಲೇ ಬರ್ತಿರೋ ಜನರು. ಪ್ರತಿನಿತ್ಯ ಇ- ಕೆವೈಸಿ ಮಾಡಲು ಬರುತ್ತಿದ್ದಾರೆ ನೂರಾರು ಮಹಿಳೆಯರು. ವದಂತಿ ಹಬ್ಬಿದ ಕಾರಣ ಗ್ಯಾಸ್ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿರೋ ಮಹಿಳೆಯರು. ಕಚೇರಿ ಮುಂದೆ ಜನ ಜಾತ್ರೆ ಸೇರಿದ್ದು ಕಂಡು ಹೌಹಾರಿದ ಸಿಬ್ಬಂದಿ.
undefined
ಪಂಚಮಸಾಲಿ 2ಎ ಮೀಸಲಾತಿ: ಸರ್ಕಾರಕ್ಕೆ ಸಂಕ್ರಾಂತಿವರೆಗೆ ಗಡುವು ನೀಡಿದ ಜಯಮೃತ್ಯುಂಜಯಶ್ರೀ
ಮೋದಿಯವರು ಐದು ಸಾವಿರ ರೂಪಾಯಿ ಕೊಡುತ್ತಾರೆ ಎಂದು ಸುದ್ದಿ ಹಬ್ಬಿಸಿದ್ದ ಕಿಡಿಗೇಡಿಗಳು. ಈ ಬಗ್ಗೆ ತಹಶೀಲ್ದಾರ್, ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳ ಸ್ಪಷ್ಟನೆ ನೀಡಿದ ನಂತರ ಮರಳಿ ಮನೆಗೆ ತೆರಳಿದ ಮಹಿಳೆಯರು. ಯಾರಿಗೂ ಹಣ ಕೊಟ್ಟಿಲ್ಲ. ಇದೆಲ್ಲ ಕಿಡಿಗೇಡಿಗಳು ಹಬ್ಬಿಸಿರುವ ವದಂತಿ. ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು ಎಂದು ತಿಳಿಹೇಳಿದ ಅಧಿಕಾರಿಗಳು. ಬಳಿಕ ಮನೆ ದಾರಿ ತುಳಿದ ಮಹಿಳೆಯರು.
ಪಂಚಮಸಾಲಿಗಳಿಂದ ಮತ್ತೆ ಶುರುವಾಯ್ತು ಹೋರಾಟ : ಮೀಸಲಾತಿಗೆ ಪಟ್ಟು