Hijab Case: ಹಿಜಾಬ್‌ ವಿದ್ಯಾರ್ಥಿನಿಯರಿಗೆ ಟೆರರ್‌ ಲಿಂಕ್‌ ಇದೆ: ಈಶ್ವರಪ್ಪ

By Santosh Naik  |  First Published Oct 13, 2022, 2:33 PM IST

ಹಿಜಾಬ್‌ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್‌ ವಿಚಾರದೊಂದಿಗೆ ಹಲವು ವಿಚಾರಗಳು ತಳುಕು ಹಾಕಿಕೊಂಡಿವೆ. ಆದೇಶವನ್ನು ನೀಡಿ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.


ವಿಜಯನಗರ (ಅ.13): ಹಿಜಾಬ್ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರಾದ ಸುಧಾಂಶು ಧುಲಿಯಾ ಹಾಗೂ ಹೇಮಂತ್‌ ಗುಪ್ತಾ ಭಿನ್ನ ತೀರ್ಪು ನೀಡಿದಕ್ಕೆ ಪ್ರಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಇದು ನ್ಯಾಯಾಂಗ ವಿಚಾರವಾಗಿರೋದ್ರಿಂದ ಈಗಲೇ ಸ್ಪಷ್ಟವಾಗಿ ಏನು ಹೇಳಲು ಆಗೋದಿಲ್ಲ. ಅದಲ್ಲದೆ, ಅವರ ತೀರ್ಪಿನ ಪ್ರತಿಯನ್ನು ನಾನಿನ್ನೂ ಓದಿಲ್ಲ. ಅದನ್ನು ನೋಡಿ ಪ್ರತಿಕ್ರಿಯೆ ನೀಡುತ್ತೇನೆ. ಇದು ಕೇವಲ ರಾಜ್ಯಕ್ಕೆ ಸಿಮೀತವಾದ ವಿಚಾರವಲ್ಲ ದೇಶದ ವಿಚಾರವಾಗಿದೆ. ವಿದ್ಯಾರ್ಥಿಗಳ ಬೇಡಿಕೆ, ನಮ್ಮ ವಿಚಾರಗಳು ಸೇರಿದಂತೆ ಹತ್ತು ಹಲವು ವಿಚಾರಗಳಿವೆ. ಲಿಖಿತವಾಗಿ ನ್ಯಾಯಾಧೀಶರು ಕೊಟ್ಟಿದ್ದನ್ನು ನೋಡಿ ರಿಯಾಕ್ಷನ್ ಮಾಡುತ್ತೇನೆ. ಇಬ್ಬರು ಜಡ್ಜ್ ಗಳ  ಕಾಪಿ ನನ್ನ ಕೈಗೆ ಬಂದಿಲ್ಲ ಎಂದು ಹೇಳಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಮಾತ್ರ ಖಡಕ್‌ ಆಗಿ ಹರಿಹಾಯ್ದಿದ್ದು, ಹಿಜಾಬ್‌ ವಿದ್ಯಾರ್ಥಿನಿಯರಿಗೆ ಟೆರರ್‌ ಲಿಂಕ್‌ ಇದೆ ಎಂದು ಹೇಳಿದ್ದಾರೆ. ನ್ಯಾಯಾಲಯದ ಇಡೀ ವಿಚಾರವನ್ನು ಇಡೀ ದೇಶವೇ ಆಲಿಸಿದೆ. ಹಿಜಾಬ್ ವಿಚಾರದಲ್ಲಿ ರಾಜ್ಯ ಸರ್ಕಾರ ನೀಡಿದ ತೀರ್ಪಿನ ಬಗ್ಗೆ ಭಿನ್ನಾಭಿಪ್ರಾಯ ಬಂದಿದೆ. ಈಗ ಅದು ವಿಸ್ತ್ರತ ಪೀಠಕ್ಕೆ ಹೋಗಿದ್ದು ಅಲ್ಲಿಯ ವಿಚಾರಣೆಯ ಮೇಲೂ ಗಮನ ನೀಡಲಿದ್ದೇವೆ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಒಬ್ಬ ನ್ಯಾಯಮೂರ್ತಿ ರಾಜ್ಯ ಸರ್ಕಾರದ ನಿರ್ಧಾರ ಸರಿ ಎಂದಿದ್ದರೆ, ಇನ್ನೊಬ್ಬರು ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುರಾನ್‌ನಲ್ಲಿ ಎಲ್ಲೂ ಹಿಜಾಬ್‌ ಹಾಕಲೇಬೇಕು ಎಂದು ಹೇಳಿಲ್ಲ. ಹಿಜಾಬ್‌ ವಿಚಾರವನ್ನು ಹಿಡಿದುಕೊಂಡು ಪಿಎಫ್‌ಐನವರು (PFI) ಷಡ್ಯಂತ್ರ ಮಾಡಿದ್ದರು. ಆದರೆ, ಇವರು ವಿದ್ಯಾರ್ಥಿನಿಯರಿಗೆ ತಿಳಿ ಹೇಳುವ ಪ್ರಯತ್ನ ಮಾಡಲಿಲ್ಲ. ಮುಂದಿನ ತೀರ್ಪಿನಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನೇ ನಾವು ನಿರೀಕ್ಷೆ ಮಾಡ್ತಿದ್ದೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಹಿಬಾಜ್ ವಿದ್ಯಾರ್ಥಿನಿಯರ ಹಿಂದೆ ದೇಶದ್ರೋಹಿ ಸಂಘಟನೆಗಳಿವೆ. ಒಟ್ಟಾರೆ ಅವರ ಪ್ರತಿಭಟನೆಗಳ ಹಿಂದೆ ಟೆರರಿಸ್ಟ್ ಲಿಂಕ್ (Terrorist Link)ಇದೆ ಎನ್ನುವುದು ಸ್ಪಷ್ಟ. ಹಿಜಾಬ್ ವಿದ್ಯಾರ್ಥಿನಿಯರ ಹಿಂದೆ ಟೆರರ್ ಲಿಂಕ್ ಇದ್ದೆ ಇದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಈಶ್ವರಪ್ಪ ಹೇಳಿದ್ದಾರೆ.

Tap to resize

Latest Videos

Hijab Case: ವಿಸ್ತ್ರತ ಪೀಠದ ನಿರ್ಧಾರಕ್ಕೆ ಕಾಯುತ್ತೇವೆ ಎಂದ ಅರಗ ಜ್ಞಾನೇಂದ್ರ, ಸಿಟಿ ರವಿ!

ಇನ್ನು  ಪರಿಷತ್ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ನ್ಯಾಯಾಲಯ ಹೇಳಿದಂತೆ ನಡೆಯಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ.  ಕೇಂದ್ರವಾಗಲಿ ರಾಜ್ಯ ಸರ್ಕಾರವಾಗಲಿ ಅದನ್ನು ಒಪ್ಪಬೇಕು. ಸುಪ್ರೀಂಕೋರ್ಟ್ ನ ಇಬ್ಬರು ನ್ಯಾಯಮೂರ್ತಿಗಳು ವಿಭಿನ್ನ (Hijab) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೀರ್ಪಿನ ಜವಾಬ್ದಾರಿಯನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಒಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.

Hijab Case: ಹಿಜಾಬ್‌ ಕುರಿತು ಬಾರದ ತೀರ್ಪು, ವಿಸ್ತ್ರತ ಪೀಠಕ್ಕೆ ಪ್ರಕರಣ

ಹೀಗಾಗಿ ಕೇಸ್ ಪೆಂಡಿಂಗ್ ಇದ್ದಂತೆ. ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಸಿಜೆಐ ನೇತೃತ್ವದಲ್ಲಿ ಅಂತಿಮ ತೀರ್ಪು ಹೊರ ಬೀಳಬೇಕಿದೆ. ಹೀಗಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳೋಕೆ ಬರಲ್ಲ. ಕರ್ನಾಟಕ ಹೈಕೋರ್ಟ್ (Karnataka High Court Hijab Verdict) ಕೊಟ್ಟ ತೀರ್ಪನ್ನು ಎತ್ತಿ ಹಿಡಿಯಲಾಗಿದೆ. ಅದರ ಜೊತೆ ಮುಖ್ಯ ನ್ಯಾಯಮೂರ್ತಿಗೆ ಪ್ರಕರಣ ವರ್ಗಾಯಿಸಲಾಗಿದೆ. ಹೀಗಾಗಿ ತೀರ್ಪಿನ ಬಗ್ಗೆ ಏನನ್ನೂ ಮಾತನಾಡಲು ಆಗಲ್ಲ ಎಂದು ಬಸವರಾಜ ಹೊರಟ್ಟಿ (basavaraj horatti) ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ (BJP State President Nalin Kumar kateel) ಕೂಡ, ಪ್ರಕರಣ ಈಗಲೂ ನ್ಯಾಯಾಲಯದ ಮುಂದೆ ಇದ್ದು, ಅದರ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದಿದ್ದಾರೆ.
 

click me!