ರಾಜ್ಯದಲ್ಲಿ ನಾಲ್ಕೈದು ದಿನ ಭಾರಿ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

By Govindaraj SFirst Published Jun 26, 2023, 9:17 AM IST
Highlights

ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆಯೂ ರಾಜ್ಯ ರಾಜಧಾನಿಯಲ್ಲಿ ಧಾರಕಾರ ಮಳೆ ಸುರಿದಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. 

ಬೆಂಗಳೂರು (ಜೂ.26): ರಾಜ್ಯದಲ್ಲಿ ಇನ್ನೂ ನಾಲ್ಕೈದು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆಯೂ ರಾಜ್ಯ ರಾಜಧಾನಿಯಲ್ಲಿ ಧಾರಕಾರ ಮಳೆ ಸುರಿದಿದ್ದು, ಇಂದು ಕೂಡ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ರಾಮನಗರ, ಮಂಡ್ಯ, ಹಾಸನ, ಯಾದಗಿರಿಯ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದ್ದು, ಗಂಟೆಗೆ 30-40ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ.

ಬೆಂಗಳೂರಿನಲ್ಲಿ ಇಂದಿನಿಂದ 29ರವರೆಗೆ ಮಳೆ?: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜೂನ್‌ 26ರಿಂದ 29ರವರೆಗೆ ಮಳೆಯಾಗುವ ಸಂಭವವಿದೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್‌ 26ರಂದು ಮೋಡ ಮುಸುಕಿದ ವಾತಾವರಣ ಇರಲಿದ್ದು ಗುಡುಗು, ಮಿಂಚು ಮತ್ತು ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೂನ್‌ 27ರಿಂದ 29ರವರೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕೆಲವೊಮ್ಮೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಈ ದಿನಗಳಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಿತ್ರನಟ ಮಾಸ್ಟರ್ ಆನಂದ್‌ಗೆ 18.50 ಲಕ್ಷ ವಂಚನೆ: ಲೀಪ್ ವೆಂಚರ್ಸ್ ಕಂಪನಿ ವಿರುದ್ಧ ದೂರು

ನಗರದಲ್ಲಿ ಸಾಧಾರಣ ಮಳೆ: ನಗರದಲ್ಲಿ ಭಾನುವಾರ ಸಂಜೆ ಸುರಿದ ಮಳೆಯ ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬೆಳಗ್ಗಿನಿಂದಲೇ ಹಲವೆಡೆ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ಕೆಲವು ಕಡೆಗಳಲ್ಲಿ ಮಳೆ ಸುರಿಯಿತು. ಬಾಗಲಗುಂಟೆ, ಪೀಣ್ಯ, ನಂದಿನಿ ಲೇಔಟ್‌, ಮಾರಪ್ಪಪಾಳ್ಯ, ವಿದ್ಯಾರಣ್ಯಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಧಾರಣ ಮಳೆಯಾದ ಪರಿಣಾಮ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯುಂಟಾಯಿತು. ಕೆಲವೆಡೆ ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡಿದ್ದರೂ ವಾಹನಗಳ ಸಂಚಾರಕ್ಕೆ ಹೆಚ್ಚು ಸಮಸ್ಯೆಯಾಗಲಿಲ್ಲ.

ನಾನು ಸನ್ಯಾಸಿ ಅಲ್ಲ, ಅಧ್ಯಕ್ಷ ಹುದ್ದೆ ಆಕಾಂಕ್ಷಿ: ಮಾಜಿ ಸಚಿವ ವಿ.ಸೋಮಣ್ಣ

ಪೀಣ್ಯ ಕೈಗಾರಿಕಾ ಪ್ರದೇಶ 29.50 ಮಿ.ಮೀ, ಬಾಗಲಗುಂಟೆ 28.50 ಮಿ.ಮೀ, ಶೆಟ್ಟಿಹಳ್ಳಿ 27.50 ಮಿ.ಮೀ, ದೊಡ್ಡಬಿದರೆಕಲ್ಲು 25.50 ಮಿ.ಮೀ, ನಂದಿನಿ ಲೇಔಟ್‌ (ಪಶ್ಚಿಮ ವಲಯ) ಮತ್ತು ನಾಗಪುರ 21 ಮಿ.ಮೀ, ಕೊಟ್ಟಿಗೆಪಾಳ್ಯ 20.50 ಮಿ.ಮೀ, ಹೆಗ್ಗನಹಳ್ಳಿ ಮತ್ತು ರಾಜಮಹಲ್‌ ಗುಟ್ಟಹಳ್ಳಿ ತಲಾ 18 ಮಿ.ಮೀ, ಹೊರಮಾವು 13.50 ಮಿ.ಮೀ, ಹೆರೋಹಳ್ಳಿ 13.50 ಮಿ.ಮೀ, ದಯಾನಂದನಗರ, ರಾಜಾಜಿನಗರ(ಪಶ್ಚಿಮ ವಲಯ) ತಲಾ 13 ಮಿ.ಮೀ, ಮಾರಪ್ಪಪಾಳ್ಯ, ವಿದ್ಯಾರಣ್ಯಪುರ ತಲಾ 11.50 ಮಿ.ಮೀ, ಜಕ್ಕೂರು, ಯಲಹಂಕ ತಲಾ 10.50 ಮಿ.ಮೀ ಹಾಗೂ ಕೊಡಿಗೇಹಳ್ಳಿ, ಬಾಣಸವಾಡಿ(ಪೂರ್ವ) ತಲಾ 10 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

click me!