ಜನವರಿ 16ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 2018ರಿಂದ ಬಡತನ ರೇಖೆಗಿಂತ ಕೆಳಗಿರುವ ನಾಗರಿಕರಿಗಾಗಿ (ಆದ್ಯತಾ ವಲಯ) ಜಾರಿಯಲ್ಲಿರುವ ಅಂಗಾಂಗ ಕಸಿ ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿ ಸೇರಿಸಲು ನಿರ್ಧಾರ ಮಾಡಲಾಗಿತ್ತು.
ಬೆಂಗಳೂರು(ಜ.30): ಜೀವ ಸಾರ್ಥಕತೆ ಅಂಗಾಂಗ ಕಸಿ ಯೋಜನೆಯಡಿ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿಯನ್ನೂ ಸೇರಿಸಿ ಅಂಗಾಂಗ ಕಸಿ ಯೋಜನೆಯನ್ನು ವಿಸ್ತರಿಸಲು ಆರೋಗ್ಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ಜನವರಿ 16ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 2018ರಿಂದ ಬಡತನ ರೇಖೆಗಿಂತ ಕೆಳಗಿರುವ ನಾಗರಿಕರಿಗಾಗಿ (ಆದ್ಯತಾ ವಲಯ) ಜಾರಿಯಲ್ಲಿರುವ ಅಂಗಾಂಗ ಕಸಿ ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿ ಸೇರಿಸಲು ನಿರ್ಧಾರ ಮಾಡಲಾಗಿತ್ತು.
ಆಯುಷ್ಮಾನ್ ಭಾರತ್ ಯೋಜನೆ: ಉಚಿತ ಚಿಕಿತ್ಸೆ ಪಡೆಯುವುದು ಹೇಗೆ? ಹೇಗೆ ಅಪ್ಲೈ ಮಾಡೋದು?
ಇದರಡಿಯಲ್ಲಿಯೇ ಯೋಜನೆಯನ್ನು ವಿಸ್ತರಣೆ ಮಾಡಿ ಅಂಗಾಂಗ ಕಸಿ, ಇಮ್ಯುನೋಸಪ್ರೆಶನ್ ಔಷಧಿಗಳ ಖರೀದಿಯನ್ನು ಅತಿ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸಾ ವಿಧಾನಗಳ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಷರತ್ತುಗಳ ಅನ್ವಯ ಅನುಷ್ಠಾನಗೊಳಿಸಲು ಬುಧವಾರ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
70 ವರ್ಷ ಮೇಲ್ಪಟ್ಟವರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ!
ನವದೆಹಲಿ: ಕೇಂದ್ರ ಸರ್ಕಾರ ಅತ್ಯಂತ ಮಹತ್ವದ ನಿರ್ಧಾರ ಮಾಡಿದ್ದು 70 ಹಾಗೂ ಅದಕ್ಕಿಂತ ಹೆಚ್ಚಿನ ವರ್ಷದ ಎಲ್ಲಾ ಹಿರಿಯ ನಾಗರೀಕರನ್ನು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಹೆಲ್ತ್ ಇನ್ಯುರೆನ್ಸ್ ವಿಸ್ತರಣೆ ಮಾಡುವ ನಿರ್ಧಾರ ಮಾಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ಕುರಿತಾಗಿ ಮಾಹಿತಿ ನೀಡಿದ್ದರು.
ಈ ಯೋಜನೆಯ ಅಡಿಯಲ್ಲಿ 70 ವರ್ಷ ವಯಸ್ಸಿನ ಎಲ್ಲಾ ಹಿರಿಯ ನಾಗರೀಕರು 5 ಲಕ್ಷ ರೂಪಾಯಿಯ ಆರೋಗ್ಯ ವಿಮೆ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಇದಕ್ಕಾಗಿ 3,437 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಸರ್ಕಾರ ತಿಳಿಸಿದೆ. ಪಿ ಎಂ ಗ್ರಾಮೀಣ ಸಡಕ್ ಯೋಜನೆಗೂ ಅನುಮೋದನೆ ಸಿಕ್ಕಿದ್ದು, 70,125 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ದಿ ಮಾಡುವ ನಿರ್ಧಾರ ಮಾಡಲಾಗಿದೆ.
ಆರೋಗ್ಯ ರಕ್ಷಣೆ, ನವೀಕರಿಸಬಹುದಾದ ಇಂಧನ ಮತ್ತು ಮಾಲಿನ್ಯವನ್ನು ಮತ್ತಷ್ಟು ಸಮರ್ಪಕವಾಗಿ ಎದುರಿಸಲು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಹಲವಾರು ಮಹತ್ವದ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ತನ್ನ ಅನುಮೋದನೆ ನೀಡಿದೆ.
ಆಯುಷ್ಮಾನ್ ವಿಮೆ ನಿರಾಕರಿಸಿದ ಆಸ್ಪತ್ರೆ, ಬೆಂಗಳೂರಿನ 70 ವರ್ಷದ ರೋಗಿಯ ದುರಂತ ಅಂತ್ಯ
ಮೋದಿ ನೇತೃತ್ವದ ಕ್ಯಾಬಿನೆಟ್ ಜನಸಂಖ್ಯೆಯ ಹೆಚ್ಚಳ ಸೇರಿದಂತೆ ವಿವಿಧ ಕಾರಣಗಳಿಂದ ಸಂಪರ್ಕವಿಲ್ಲದ ಆವಾಸಸ್ಥಾನಗಳಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ವ್ಯಾಪ್ತಿಗೆ ಅನುಮೋದನೆ ನೀಡಿದೆ.
ಹಿರಿಯ ನಾಗರೀಕರಿಗೆ ಆಯುಷ್ಮಾನ್ ಭಾರತ್:
ಆಯುಷ್ಮಾನ್ ಭಾರತ್ PM-JAY ಯೋಜನೆಯು 3,437 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ಅನುಮೋದಿಸಲ್ಪಟ್ಟಿದೆ, 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಒಟ್ಟು 4.5 ಕೋಟಿ ಕುಟುಂಬಗಳು ಮತ್ತು 6 ಕೋಟಿ ಹಿರಿಯ ನಾಗರಿಕರಿಗೆ ಪ್ರಯೋಜನವನ್ನು ನೀಡಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಯೋಜನೆಯ ಪ್ರಕಾರ, ಈಗಾಗಲೇ ಯೋಜನೆಯ ಅಡಿಯಲ್ಲಿ ಒಳಗೊಳ್ಳುವ ಕುಟುಂಬಗಳಿಗೆ, ವರ್ಷಕ್ಕೆ ರೂ 5 ಲಕ್ಷದವರೆಗೆ ಹೆಚ್ಚುವರಿ ಟಾಪ್-ಅಪ್ ಲಭ್ಯವಿರುತ್ತದೆ. ಈ ಹಿಂದೆ ಒಳಗೊಂಡಿರದವರಿಗೆ ಹಂಚಿಕೆಯ ಕವರೇಜ್‌ನಲ್ಲಿ ವರ್ಷಕ್ಕೆ 5 ಲಕ್ಷ ರೂ ಲಭ್ಯವಿರಲಿದೆ.