
ಉಡುಪಿ (ಫೆ.10): ಸದಾ ಕೊಲ್ಲುವ, ಮುಗಿಸುವ ಮಾತುಗಳನ್ನಾಡುವ ಈಶ್ವರಪ್ಪ ಬಿಜೆಪಿ ಪಕ್ಷದ ನಾಯಕನೇ? ಹೊಡಿ ಬಡಿ ಕಡಿ ಮಾತಾಡುವುದು ಬಿಜೆಪಿಯ ಪ್ರಮುಖ ನಾಯಕನಿಗೆ ಇದು ಶೋಭೆಯೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಗುಂಡಿಟ್ಟು ಕೊಲ್ಲಿ ಎಂಬ ಈಶ್ವರಪ್ಪರ ಪ್ರಚೋದನಕಾರಿ ಹೇಳಿಕೆ ಸಂಬಂಧ ಇಂದು ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಈಶ್ವರಪ್ಪ ಹೇಳಿಕೆಗಳು ಸಮಾಜದ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಸದಾ ಕೊಲ್ಲುವ, ಕೊಚ್ಚುವ ಮುಗಿಸುವ ಮಾತುಗಳನ್ನಾಡುತ್ತಿದ್ದಾರೆ. ಸಮಾಜವನ್ನು ಸದಾ ಆತಂಕದಲ್ಲಿ ಇಡುವುದು ಈಶ್ವರಪ್ಪನ ಕೆಲಸವಾಗಿದೆ. ಅವರಿಗೆ ಅದೇ ಲಾಭವಾಗಿದೆ. ಕೋಮು ಪ್ರಚೋದನೆ ಮಾಡಿ ಮತ ಗಳಿಸುವುದೇ ಇವರ ಕಾಯಕವಾಗಿದೆ. ಈಗಾಗಲೇ ಜಾತಿ ಧರ್ಮ ಭಾಷೆ ಆಧಾರದಲ್ಲಿ ಸಮಾಜವನ್ನು ಕೆಡಿಸಿಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಇಂದು ಅನೇಕ ಜನರು ಜೈಶ್ರೀರಾಮ ಹೇಳ್ತಿದ್ದಾರೆ. ಆದರೆ ಶ್ರೀರಾಮನ ಆದರ್ಶವನ್ನು ಎಷ್ಟರಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಜೈಶ್ರೀರಾಮ ಹೇಳೋದು ಸುಲಭ ಎಷ್ಟರ ಮಟ್ಟಿಗೆ ನೈತಿಕ ಜೀವನ ನಡೆಸುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
'ನಿಮ್ಮ ಮುಂದೆ ನಾನೇ ಬರುತ್ತೇನೆ ಗುಂಡಿಕ್ಕಿ ಕೊಲ್ಲಿ': ಈಶ್ವರಪ್ಪ ಹೇಳಿಕೆಗೆ ಡಿಕೆ ಸುರೇಶ್ ತೀಕ್ಷ್ಣ ಪ್ರತಿಕ್ರಿಯೆ
ಇನ್ನು ಮಲ್ಲಿಕಾರ್ಜುನ ಖರ್ಗೆ ಹೊಟ್ಟೆಯಲ್ಲಿ ಹುಳು ಹುಟ್ಟಿದೆ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಈ ತರ ಹೇಳಿಕೆ ನೀಡುವ ಅನೇಕ ನಾಯಕರು ಬಿಜೆಪಿಯಲ್ಲಿದ್ದಾರೆ. ಸಿಟಿ ರವಿ, ಶೋಭಾ, ಸುನಿಲ್, ಸಿಂಹ, ಅನಂತಕುಮಾರ್ ಹೆಗ್ಡೆ.. ಹೀಗೆ ದೊಡ್ಡ ಪಟ್ಟಿಯೇ ಇದೆ. ಪ್ರಚೋದನಕಾರಿ ವೈಷಮ್ಯ ಸೃಷ್ಟಿ ಮಾಡುವುದೇ ಇವರ ಕೆಲಸ. ಜನರು, ಧರ್ಮ, ಭಾಷೆ ನಡುವೆ ಜಗಳ ತಂದು ಘರ್ಷಣೆ ಸೃಷ್ಟಿಸುವುದು ಅದರಿಂದ ರಾಜಕೀಯ ಲಾಭ ಪಡೆಯುವುದೇ ಇವರ ಉದ್ದೇಶವಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ