ರಾಘವ ಚೈತನ್ಯ ಶಿವಲಿಂಗ ಆಕ್ರಮಣ ನಡೆದಿದ್ದರೂ ಪೊಲೀಸರು ಸಹ ಯಾವುದೇ ಕ್ರಮ ಜರುಗಿಸದೇ ಲ್ಯಾಂಡ್ ಜಿಹಾದ್‌ಗೆ ಸಪೋರ್ಟ್ ಮಾಡ್ತಿರುವಂತೆ ಕಾಣುತ್ತಿದೆ. ಇದಕ್ಕೆ ಇಂಬು ಕೊಡುವಂತೆ ರಾಘವ ಚೈತನ್ಯ ಶಿವಲಿಂಗ ಇರುವ ಸ್ಥಳದಲ್ಲಿ ಸಿಕ್ಕ ಸಿಕ್ಕಲ್ಲಿ ಬ್ಯಾರಿಕೇಡಗಳನ್ನು ಹಾಕಿ ಪೊಲೀಸರು ಪೂಜೆಗೆ ಅಡ್ಡಿಪಡಿಸುವ ಯತ್ನ ಮಾಡಿದ್ದಾರೆ ಎಂದು ಆಂದೋಲಾ ಸ್ವಾಮೀಜಿ ಆರೋಪಿಸಿದ್ದಾರೆ.
ಕಲಬುರಗಿ (ಮಾ.8): ನ್ಯಾಯಾಲಯದ ಅನುಮತಿ ಪಡೆದುಕೊಂಡು ರಾಘವ ಚೈತನ್ಯ ಶಿವಲಿಂಗಕ್ಕೆ ಯಶಸ್ವಿಯಾಗಿ ಪೂಜೆ ನಡೆಸಿದ್ದೇವೆ. ಗಂಗಾಪೂಜೆ, ವಿಘ್ನೇಶ್ವರ ಪೂಜೆ ರುದ್ರ ಪೂಜೆ ನೆರವೇರಿಸಿದ್ದೇವೆ ಎಂದು ಆಂದೋಲಾ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಇಂದು ಕಲಬುರಗಿಯ ಆಳಂದ ಲಾಡ್ಲೆ ಮಶಾಕ್ ದರ್ಗಾ(Ladle Mashak Dargah:) ದಲ್ಲಿರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ, ಶಿವಲಿಂಗ ಇರುವ ಸ್ಥಳವನ್ನು ಗೋರಿಯಾಗಿಕ ಪರಿವರ್ತಿಸುವ ಯತ್ನಗಳು ನಡೆಯುತ್ತಿವೆ. ರಾಘವ ಚೈತನ್ಯ ಶಿವಲಿಂಗ ಆಕ್ರಮಣಗಳು ನಡೆದಿರುವುದು ಕಂಡುಬಂದಿದೆ. ಶಿವಲಿಂಗದ ಮೇಲೆ ಚಾದರ್ ಹಾಕಿ ಜಿಹಾದಿಗಳು ಗೋರಿ ಮಾಡಲು ಯತ್ನಿಸಿದ್ದಾರೆ ಎಂದು ಕಿಡಿಕಾರಿದರು.
undefined
ಆಳಂದ ದರ್ಗಾದಲ್ಲಿ ಒಂದೇ ದಿನ ಶಿವರಾತ್ರಿ, ಉರುಸ್‌ಗೆ ಅನುಮತಿ!
ರಾಘವ ಚೈತನ್ಯ ಶಿವಲಿಂಗ ಆಕ್ರಮಣ ನಡೆದಿದ್ದರೂ ಪೊಲೀಸರು ಸಹ ಯಾವುದೇ ಕ್ರಮ ಜರುಗಿಸದೇ ಲ್ಯಾಂಡ್ ಜಿಹಾದ್‌ಗೆ ಸಪೋರ್ಟ್ ಮಾಡ್ತಿರುವಂತೆ ಕಾಣುತ್ತಿದೆ. ಇದಕ್ಕೆ ಇಂಬು ಕೊಡುವಂತೆ ರಾಘವ ಚೈತನ್ಯ ಶಿವಲಿಂಗ ಇರುವ ಸ್ಥಳದಲ್ಲಿ ಸಿಕ್ಕ ಸಿಕ್ಕಲ್ಲಿ ಬ್ಯಾರಿಕೇಡಗಳನ್ನು ಹಾಕಿ ಪೊಲೀಸರು ಪೂಜೆಗೆ ಅಡ್ಡಿಪಡಿಸುವ ಯತ್ನ ಮಾಡಿದ್ದಾರೆ. ನ್ಯಾಯಾಲಯವೇ ಅನುಮತಿ ನೀಡಿದ ಕಾರಣ ನಮಗೆ ಶಾಂತಿಯುತವಾಗಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕಿತ್ತು. ಆದರೆ ಪೊಲೀಸರು ಸಹ ರಾಜಕಾರಣಿಗಳಂತೆ ಮುಸ್ಲಿಮರ ತುಷ್ಟೀಕರಣಕ್ಕಾಗಿ ನಮಗೆ ಪೂಜೆ ಸಲ್ಲಿಸಲು ಇಕ್ಕಟ್ಟು ಸೃಷ್ಟಿಸಿದ್ದಾರೆ.
Kalaburgi: ಪೊಲೀಸ್ ಸರ್ಪಗಾವಲಲ್ಲಿ ಲಾಡ್ಲೇ ಮಶಾಕ್ ದರ್ಗಾದಲ್ಲಿ ನೆರವೇರಿದ ಉರುಸ್-ಶಿವಲಿಂಗ ಪೂಜೆ
ಇದೆಲ್ಲ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ. ನ್ಯಾಯಾಂಗ ಹೋರಾಟದ ಮೂಲಕವೇ ಮಂದಿರ ನಿರ್ಮಾಣ ಮಾಡುತ್ತೇವೆ, ಮಾಡಿಯೇ ತೀರುತ್ತೇವೆ ಎಂದರು.