ರಾಹುಲ್ ಗಾಂಧಿ ವಿರುದ್ಧ ಗೌಡರ ಅಸಮಾಧಾನ..?

By Web DeskFirst Published Jan 18, 2019, 11:20 AM IST
Highlights

ಎಚ್.ಡಿ ದೇವೇಗೌಡ ಕಾಂಗ್ರೆಸ್ ಮುಖಂಡರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಬಿ ಟೀಂ ಎಂದವರೇ ನಂತರ ನಮ್ಮ ಬಳಿ ಬಂದರು ಎಂದು ಪರೋಕ್ಷವಾಗಿ ವಾಕ್ ಪ್ರಹಾರ ನಡೆಸಿದ್ದಾರೆ. 

ಬೆಂಗಳೂರು :  ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂಬ ಆರೋಪದ ಮಾಡಿದವರೇ ಫಲಿತಾಂಶದ ಬಳಿಕ ನಮ್ಮ ಬಳಿ ಬಂದರು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪರೋಕ್ಷವಾಗಿ ಮಿತ್ರ ಪಕ್ಷ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.

ಗುರುವಾರ ಜೆಡಿಎಸ್ ಪಕ್ಷದ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಅಲ್ಪಸಂಖ್ಯಾ ತರ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಸಂದರ್ಭ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಆರೋಪಗಳನ್ನು ಮಾಡಲಾಯಿತು. ಈ ಮೂಲಕ ಪಕ್ಷದ ಬಗ್ಗೆ ಅಪಪ್ರಚಾರ ನಡೆಸಿ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಷಡ್ಯಂತ್ರ ಮಾಡಲಾಗಿತ್ತು. 

ಶೀಘ್ರ ಕೈನಲ್ಲಿ ರಾಜೀನಾಮೆ ಪರ್ವ : ಬಿಜೆಪಿಗೆ ಹೋಗೋರು ಯಾರು..?

ಜೆಡಿಎಸ್ ಯಾವುದೇ ಎ ಟೀಂ, ಬಿ ಟೀಂ ಅಲ್ಲ. ಬದಲಿಗೆ ರಾಜ್ಯದ ಜನತೆಯ ಟೀಮು ಎಂದು ಚಾಟಿ ಬೀಸಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹೋರಾಡಿದವರೆ ನಮ್ಮ ಬಳಿ ಬಂದರು. ನಿಮ್ಮ ಮಗನೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದರು. ಈ ಹಿಂದೆ ಕುಮಾರಸ್ವಾಮಿ ಬಿಜೆಪಿ ಜತೆ ಸರ್ಕಾರ ಮಾಡಲು ಯಾರು ಕಾರಣ ಎಂಬುದನ್ನು ಹೇಳಬೇಕು. 

ಈ ಕಾಂಗ್ರೆಸ್ ನಾಯಕರಿಗೆ ಸಿಗುತ್ತಾ ಪಕ್ಷದಿಂದ ಗೇಟ್ ಪಾಸ್ ..?

ಬಿಜೆಪಿಯ ಬಿ ಟೀಂ ಎಂಬ ಆರೋಪದ ಪರಿಣಾಮ ಮುಸ್ಲಿಂ ಸಮುದಾಯವು ನಮ್ಮಿಂದ ದೂರವಾಗುವಂತಾಯಿತು. ಚುನಾವಣಾ ಫಲಿ ತಾಂಶದ ಮೇಲೂ ಜೆಡಿಎಸ್‌ಗೆ ವ್ಯತಿರಿಕ್ತ ಪರಿಣಾಮ ಬೀರುವಂತಾಯಿತು. ಜೆಡಿಎಸ್ ಎಂದಿಗೂ ಅಲ್ಪಸಂ ಖ್ಯಾತರ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು. ದೇಶವನ್ನು ಆಳಲು ಮುಂದಾದರೆ ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಾಣಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೆಂಬ ಅಸ್ತ್ರವನ್ನು ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎಂಬ ಪ್ರಜ್ಞೆ ದೇಶವನ್ನು ಆಳುವವರಿಗೆ ಇರಬೇಕು. ಕೇವಲ ಒಂದು ಕೋಮಿನವರಿಗೆ ಆದ್ಯತೆ ನೀಡಿ ಅವರ ರಕ್ಷಣೆಗೆ ಮಾತ್ರ ನಿಲ್ಲಬಾರದು. 

ಎಲ್ಲ ಸಮುದಾಯದವರ ಅಭಿಪ್ರಾ ಯಗಳಿಗೆ ಮನ್ನಣೆ ನೀಡಬೇಕು. ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ದೇಶದಲ್ಲಿ ಸಾಮರಸ್ಯ ಭಾವನೆ ಮೂಡಿಸುವಂತಹ ಕೆಲಸ ಮಾಡಬೇಕು. ಅಂತಹ ದೊಡ್ಡ ಜವಾಬ್ದಾರಿ ಅವರ ಮೇಲಿರುತ್ತದೆ ಎಂದು ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಕಾಂಗ್ರೆಸ್ ಅಲ್ಲ- ದತ್ತ: ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಕಾಂಗ್ರೆಸ್ ಅಲ್ಲ. ದೇವೇಗೌಡರಿಂದ ಈ ನಿಗಮ ಆರಂಭವಾಯಿತು ಎಂದು ಹೇಳಿದರು. ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂದು ಹೇಳಿದ ಪರಿಣಾಮ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬೆಂಬಲ ಸಿಗಲಿಲ್ಲ ಎಂದು ಹೇಳಿದರು. ಸಮಾರಂಭದಲ್ಲಿ ಜೆಡಿಎಸ್ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಪಕ್ಷದ ಸಚಿವರು, ಶಾಸಕರು, ಮಾಜಿ ಶಾಸಕರು ಭಾಗವಹಿಸಿದ್ದರು.

click me!