
ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ ಆರು ಮಂದಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರನ್ನು (ಎಎಸ್ಪಿ) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ವಿ.ಜೆ.ಸಜೀತ್- ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಬೆಂಗಳೂರು ಗ್ರಾ.ಜಿಲ್ಲೆ), ಮಲ್ಲಿಕಾರ್ಜುನ ಬಾಲದಂಡಿ - ಸಿಐಡಿ ಅಧೀಕ್ಷಕರು, ಪ್ರಭಾಕರ್ ಭೀ ಬಾರ್ಕಿ- ಚಿತ್ರದುರ್ಗ, ರಾಮಲಕ್ಷ್ಮಣ್ ಅರೆಸಿದ್ಧಿ- ಬೆಳಗಾವಿ, ಶ್ರುತಿ- ಚಿಕ್ಕಮಗಳೂರು, ಬಿ. ಎಸ್.ನೇಮಗೌಡ- ವಿಜಯಪುರ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಲಾಗಿದೆ.
ಈ ಮೇಲೆ ವರ್ಗಾವಣೆ ಮಾಡಲಾಗಿರುವ ಕೆಲ ಅಧಿಕಾರಿಗಳನ್ನು ಡಿವೈಎಸ್ಪಿ ಹುದ್ದೆಯಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗೆ ಕೆಲ ತಿಂಗಳ ಹಿಂದೆ ಬಡ್ತಿ ನೀಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ