ಕೊರೋನಾ ಸಾವು, ರೈತರ ಆತ್ಮಹತ್ಯೆಯಲ್ಲೂ ನಂ.1: ಇದೀಗ ಮದ್ರಾಸ್ ಐನಲ್ಲೂ ನಂ.1 ಜಿಲ್ಲೆ ಹಾವೇರಿ!

By Govindaraj S  |  First Published Aug 11, 2023, 4:38 PM IST

ಕೊರೋನಾ ಡೆತ್ ರೇಟ್‌ನಲ್ಲಿ ಇಡೀ ರಾಜ್ಯದಲ್ಲಿಯೇ ನಂಬರ್ 1 ಇದ್ದ ಹಾವೇರಿ ಜಿಲ್ಲೆ ಮತ್ತೊಂದು ಸಾಂಕ್ರಾಮಿಕ ರೋಗದಲ್ಲೂ ನಂಬರ್ 1 ಆಗಿ ಅಪಖ್ಯಾತಿ ಗಳಿಸಿದೆ. ಕೊರೋನಾ ಎರಡನೇ ಅಲೆ  ಉಲ್ಬಣಗೊಂಡ ಸಂದರ್ಭದಲ್ಲಿ ಕೊರೋನಾ ಡೆತ್ ರೇಟ್‌ನಲ್ಲಿ ಹಾವೇರಿ ನಂಬರ್ 1 ಸ್ಥಾನ ಪಡೆದಿತ್ತು. 


ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ (ಆ.11): ಕೊರೋನಾ ಡೆತ್ ರೇಟ್‌ನಲ್ಲಿ ಇಡೀ ರಾಜ್ಯದಲ್ಲಿಯೇ ನಂಬರ್ 1 ಇದ್ದ ಹಾವೇರಿ ಜಿಲ್ಲೆ ಮತ್ತೊಂದು ಸಾಂಕ್ರಾಮಿಕ ರೋಗದಲ್ಲೂ ನಂಬರ್ 1 ಆಗಿ ಅಪಖ್ಯಾತಿ ಗಳಿಸಿದೆ. ಕೊರೋನಾ ಎರಡನೇ ಅಲೆ  ಉಲ್ಬಣಗೊಂಡ ಸಂದರ್ಭದಲ್ಲಿ ಕೊರೋನಾ ಡೆತ್ ರೇಟ್‌ನಲ್ಲಿ ಹಾವೇರಿ ನಂಬರ್ 1 ಸ್ಥಾನ ಪಡೆದಿತ್ತು. ಬಳಿಕ ಚರ್ಮಗಂಟು ರೋಗದಿಂದ ಬಳಲಿ ಸಾವಿರಾರು ದನಕರುಗಳು ಸಾವನ್ನಪ್ಪಿದ್ದವು. ದನ ಕರುಗಳ ಸಾವಿನ ಪ್ರಮಾಣದಲ್ಲೂ ಟಾಪ್ 1 ಇದ್ದ ಹಾವೇರಿ ಜಿಲ್ಲೆ  ಇತ್ತೀಚೆಗಷ್ಟೇ ರೈತರ ಆತ್ಮಹತ್ಯೆ ವಿಚಾರದಲ್ಲಿಯೂ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

Tap to resize

Latest Videos

undefined

ಹಾವೇರಿ ಜಿಲ್ಲೆಯಲ್ಲಿ ಕಳೆದೆರಡು ತಿಂಗಳಲ್ಲಿಯೇ 18 ಕ್ಕೂ ಹೆಚ್ಚು ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಬಜೆಟ್ ಅಧಿವೇಶನದಲ್ಲಿ ವಿಪಕ್ಷಗಳಿಗೆ ದೊಡ್ಡ ಆಹಾರವಾಗಿತ್ತು.ಇದೀಗ ಮದ್ರಾಸ್ ಐ ಹರಡುವಿಕೆಯಲ್ಲೂ ಹಾವೇರಿ ಜಿಲ್ಲೆ ನಂ 1 ಸ್ಥಾನ ಪಡೆದುಕೊಂಡಿದೆ. ಹಾವೇರಿ ಜಿಲ್ಲೆಯಲ್ಲಿ ಮದ್ರಾಸ್ ಐ ಹಾವಳಿ ಜೋರಾಗಿದೆ. ಮದ್ರಾಸ್ ಐನಿಂದ ಕಂಗೆಟ್ಟ ಹಾವೇರಿ ಜನತೆ ಚಿಂತೆಗೀಡಾಗಿದ್ದಾರೆ. ಹಾವೇರಿ ಜಿಲ್ಲೆಯೊಂದರಲ್ಲೇ 9901 ಮದ್ರಾಸ್ ಐ ಕೇಸ್‌ಗಳು ಪತ್ತೆಯಾಗಿವೆ.

Haveri: ಸೈಕಲ್ ಟಯರ್‌ಗೆ 5 ರೂಪಾಯಿ ಲಗೇಜ್ ಶುಲ್ಕ ವಸೂಲಿ ಮಾಡಿದ ಕಂಡಕ್ಟರ್!

ಇಡೀ ರಾಜ್ಯದಲ್ಲಿ 64506 ಕೇಸ್‌ಗಳು ಪತ್ತೆಯಾದರೆ ಇತ್ತ ಹಾವೇರಿ ಜಿಲ್ಲೆಯಲ್ಲಿ ಅತ್ಯಧಿಕ ಮದ್ರಾಸ್ ಐ ಕೇಸ್ ಪತ್ತೆಯಾಗಿವೆ. ಬೀದರ್  ಜಿಲ್ಲೆ ಮದ್ರಾಸ್ ಐ ನಲ್ಲಿ 2 ನೇ ಸ್ಥಾನ ಪಡೆದರೆ ಶಿವಮೊಗ್ಗ ಜಿಲ್ಲೆ 3ನೇ ಸ್ಥಾನದಲ್ಲಿದೆ. ಜಿಲ್ಲೆಯ ಜನತೆಗೆ ಮದ್ರಾಸ್ ಐ ಜಾಗೃತಿ ಇಲ್ಲ. ಮದ್ರಾಸ್  ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸರಿಯಾದ ಜಾಗೃತಿ ಕೈಗೊಂಡಿಲ್ಲ.ಆರೋಗ್ಯ ಇಲಾಖೆ ದಿವ್ಯ ನಿರ್ಲಕ್ಷ್ಯಕ್ಕೆ ಜನ ಪರದಾಡ್ತಿದ್ದಾರೆ. ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಸಾವಿರಾರು ರೋಗಿಗಳು ಕ್ಯೂನಲ್ಲಿ ನಿಂತು ಚಿಕಿತ್ಸೆ ಪಡೆಯುತ್ತಿದ್ದಾರೆ.

click me!