ಇ-ಚಲನ್ ಬಳಕೆಯಲ್ಲಿ ರಾಜ್ಯವೇ ನಂ.1, ದೇಶದಲ್ಲಿ ಶೇ.50 ಕರ್ನಾಟಕದ ಪಾಲು!

By Gowthami K  |  First Published Aug 11, 2023, 2:28 PM IST

ಟ್ರಾಫಿಕ್‌ ಉಲ್ಲಂಘನೆ ಇ-ಚಲನ್‌ನಲ್ಲಿ ರಾಜ್ಯ ನಂ.1 ಸ್ಥಾನದಲ್ಲಿದೆ. ದೇಶದ ಇ-ಚಲನ್‌ನಲ್ಲಿ ಕರ್ನಾಟಕದ ಪಾಲು ಶೇ.50 ರಷ್ಟಿದೆ. ಸಂಚಾರ ಸುರಕ್ಷತಾ ಆಯುಕ್ತ ಅಲೋಕ್‌ ಮಾಹಿತಿ ನೀಡಿದ್ದಾರೆ.


ಬೆಂಗಳೂರು (ಆ.11): ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಾಹನ ಸವಾರರಿಗೆ ಇ-ಚಲನ್‌ನಲ್ಲಿ ದಂಡ ವಿಧಿಸುವಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಗಮನಾರ್ಹ ಸಂಗತಿ ಎಂದರೆ, ಇಡೀ ದೇಶದಲ್ಲಿ ಇ-ಚಲನ್‌ನಲ್ಲಿ ದಂಡ ವಿಧಿಸುವ ಪ್ರಕರಣಗಳ ಪೈಕಿ ಕರ್ನಾಟಕವೊಂದರಲ್ಲೇ ಶೇ.50ರಷ್ಟುಪ್ರಕರಣಗಳು ದಾಖಲಾಗಿವೆ.

ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದೇಶದ ವಿವಿಧ ರಾಜ್ಯಗಳಲ್ಲಿ ಇ-ಚಲನ್‌ನಲ್ಲಿ ವಿಧಿಸುತ್ತಿರುವ ಒಟ್ಟು ಪ್ರಕರಣಗಳಲ್ಲಿ ಕರ್ನಾಟಕದಲ್ಲೇ ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

Tap to resize

Latest Videos

ಬೆಂಗಳೂರು-ಮೈಸೂರು ಹೈವೇನಲ್ಲಿ ಬಸ್‌ಗಳ ಒನ್‌ವೇ ಸಂಚಾರಕ್ಕೆ ಲಗಾಮು..!

ರಾಜ್ಯದಲ್ಲಿ ಇ-ಚಲನ್‌ ವ್ಯವಸ್ಥೆ ಜಾರಿ ನಡುವೆಯೂ ಕೆಲ ಜಿಲ್ಲೆಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಪೊಲೀಸರು ಕೈಬರಹದ ರಶೀದಿ ನೀಡಿ ದಂಡ ಸಂಗ್ರಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಕಡೆಯೂ ಇ-ಚಲನ್‌ ಸೇವೆಯ ಮುಖಾಂತರ ದಂಡ ಸಂಗ್ರಹಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕಳೆದ 9 ದಿನಗಳ ಅಂಕಿ-ಅಂಶಗಳನ್ನು ನೋಡಿದಾಗ, ದೇಶದಲ್ಲಿ ಇ-ಚಲನ್‌ ಮುಖಾಂತರ ಒಟ್ಟು 42,071 ಸಂಚಾರ ಉಲ್ಲಂಘನೆ ಪ್ರಕರಣ ದಾಖಲಾಗಿವೆ. ಇದರಿಂದ ಒಟ್ಟು 2.10 ಕೋಟಿ ರು. ದಂಡ ವಿಧಿಸಲಾಗಿದೆ. ಇದರಲ್ಲಿ 325 ಪ್ರಕರಣಗಳಲ್ಲಿ 1.62 ಲಕ್ಷ ರು. ದಂಡ ವಸೂಲಿ ವಸೂಲಿ ಮಾಡಲಾಗಿದೆ. ಅದೇ ಕರ್ನಾಟಕದಲ್ಲಿ 24,582 ಪ್ರಕರಣಗಳನ್ನು ದಾಖಲಿಸಿ, 1.22 ಕೋಟಿ ರು. ದಂಡ ವಿಧಿಸಲಾಗಿದೆ. ಈ ಪೈಕಿ 111 ಪ್ರಕರಣಗಳಲ್ಲಿ 55,500 ರು. ದಂಡ ವಸೂಲಿ ಮಾಡಲಾಗಿದೆ. ದೇಶದ ಇತರೆ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಇ-ಚಲನ್‌ ಮೂಲಕ ಪ್ರಕರಣ ದಾಖಲು ಹಾಗೂ ದಂಡ ವಸೂಲಿಯಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತಗಳ ಸಂಖ್ಯೆ ಇಳಿಮುಖ..!

ಏನಿದು ಇ-ಚಲನ್‌?: ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದರೆ, ಅತ್ಯಾಧುನಿಕ ತಂತ್ರಜ್ಞಾನದ ಸ್ವಯಂ ಚಾಲಿತ ಕ್ಯಾಮರಾಗಳು ಆ ವಾಹನದ ನೊಂದಣಿ ಸಂಖ್ಯೆ ಸಹಿತ ಸಂಚಾರ ನಿಯಮ ಉಲ್ಲಂಘನೆಯ ಫೋಟೋ ಸೆರೆ ಹಿಡಿದು, ವಾಹನ ಸವಾರನ ಮೊಬೈಲ್‌ಗೆ ಸಂಚಾರ ನಿಯಮ ಉಲ್ಲಂಘನೆ ಮಾಹಿತಿ ಒಳಗೊಂಡ ಇ-ಚಲನ್‌ ಸಂದೇಶ ರವಾನಿಸುತ್ತದೆ. ಈ ವೇಳೆ ವಾಹನ ಸವಾರ ಆನ್‌ಲೈನ್‌ ಅಥವಾ ಸಮೀಪದ ಸಂಚಾರ ಪೊಲೀಸ್‌ ಠಾಣೆಗೆ ತೆರಳಿ ದಂಡ ಪಾವತಿಸಬಹುದು. ಬಹುತೇಕರು ಸವಾರರು ಆನ್‌ಲೈನ್‌ನಲ್ಲೇ ದಂಡ ಪಾವತಿಸುತ್ತಿದ್ದಾರೆ.

click me!