ಗೂಂಡಾಗಿರಿ ಹತ್ತಿಕ್ಕುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಯಾಕೆ ಮೌನ?

By Ravi Janekal  |  First Published Jan 13, 2024, 1:49 PM IST

ರಾಜ್ಯದಲ್ಲಿ ಗೂಂಡಾಗಿರಿ, ನೈತಿಕ ಪೊಲೀಸಗಿರಿ ಹತ್ತಿಕ್ಕುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಮುಸ್ಲಿಂ ಮಹಿಳೆಯ ಮೇಲೆ ಆಗಿರುವ ಸಾಮೂಹಿಕ ಅತ್ಯಾಚಾರದ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದರು.


ಹಾವೇರಿ (ಜ.13): ರಾಜ್ಯದಲ್ಲಿ ಗೂಂಡಾಗಿರಿ, ನೈತಿಕ ಪೊಲೀಸಗಿರಿ ಹತ್ತಿಕ್ಕುವುದಾಗಿ ಹೇಳುವ ಸಿಎಂ ಸಿದ್ದರಾಮಯ್ಯ ಮುಸ್ಲಿಂ ಮಹಿಳೆಯ ಮೇಲೆ ಆಗಿರುವ ಸಾಮೂಹಿಕ ಅತ್ಯಾಚಾರದ ಬಗ್ಗೆ ಯಾಕೆ ಮೌನವಾಗಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನಿಸಿದರು.

ಇಂದು ಹಾನಗಲ್ ರೇಪ್ ಪ್ರಕರಣ ಸಂಬಂಧ ಹಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾಲ್ಕರ ಕ್ರಾಸ್ ಬಳಿ ಸುಮಾರು 7 ಜನ ಲಾಡ್ಜ್ ಗೆ ನುಗ್ಗಿ ಮಹಿಳೆಯನ್ನ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಸಂತ್ರಸ್ತರು ಆರೋಪಿಸಿದ್ದಾರೆ. ಆದರೆ ಇಲ್ಲಿವರೆಗೆ ಯಾವುದೇ ಮಾತು ಆಡದ ಸಿಎಂ ಮುಸ್ಲಿಂ ಮಹಿಳೆ ಮೇಲೆ ಅತ್ಯಾಚಾರ ನಡೆದರೂ ಮುಚ್ಚಿ ಹಾಕುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Tap to resize

Latest Videos

ಹಾವೇರಿಯಲ್ಲಿ ನಡೆದಿದ್ದು ನೈತಿಕ ಪೊಲೀಸ್‌ಗಿರಿಯಲ್ಲ, ಸಾಮೂಹಿಕ ಅತ್ಯಾಚಾರ; ಇಲ್ಲಿದ್ದಾರೆ ನೋಡಿ ಗ್ಯಾಂಗ್ ರೇಪಿಸ್ಟ್‌?

ರಾಜ್ಯದಲ್ಲಿ ನಡೆಯುವ ಇಂಥ ದುಷ್ಕೃತ್ಯಗಳಿಗೆ ಕಾಂಗ್ರೆಸ್ ಪಕ್ಷ ಸಪೋರ್ಟ್ ಮಾಡ್ತಿದೆ. ಸಾಮೂಹಿಕ ಅತ್ಯಾಚಾರ ನಡೆದರೂ ಯಾವುದೇ ಕ್ರಮ ಜರುಗಿಸದೇ, ಆರೋಪಿಗಳನ್ನು ಅರೆಸ್ಟ್ ಮಾಡದೇ ಒಲೈಕೆ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡು. ಅತ್ಯಾಚಾರಿ ಆರೋಪಿಗಳಿಗಿಂತ ಅದರ ಬಗ್ಗೆ ಮಾತನಾಡದ ಇವರು ತುಂಬಾ ಅಪಾಯಕಾರಿ ಎಂದು ಕಿಡಿಕಾರಿದರು.

ಪ್ರಕರಣ ಸಂಬಂಧ ಇನ್ನೂ ಮೂವರು ಆರೋಪಿಗಳನ್ನ ಇದುವರೆಗೂ ಬಂಧಿಸಿಲ್ಲ. ಮಲ್ಲಿಗಾರ್ ಅಂತ ಒಂದು ಪ್ರಕರಣದಲ್ಲಿ ದೀಪಾ ನಿಂಗಪ್ಪ ಲಮಾಣಿ ಅನ್ನುವ ಹುಡುಗಿ  ಕಿಡ್ನಾಪ್ ಕೇಸ್ ಆಗಿದೆ. ಹಾನಗಲ್ ಬಳಿ ಮಕರವಳ್ಳಿ ಹುಡುಗಿ ಬಟ್ಟೆ ಖರೀದಿ ಮಾಡಲು ಹೋದಾಗ ಟ್ರಯಲ್ ನೋಡಲು ರೂಮಿಗೆ ಹೋಗಿದ್ದಾಗ ಬಟ್ಟೆ ಬದಲಾಯಿಸುವ ವಿಡಿಯೋ ರೆಕಾರ್ಡ್ ಮಾಡಿದ ಕೇಸ್ ಆಗಿತ್ತು. ಪುಷ್ಪಾ ಅನ್ನುವ ಹುಡುಗಿಗೆ ಬ್ಲಾಕ್ ಮೇಲ್ ಮಾಡುವ ಪ್ರಯತ್ನ ಮಾಡಿದ್ದಾರೆ. ಒಟ್ಟು ನಾಲ್ಕು ಪ್ರಕರಣಗಳು ಹಾನಗಲ್‌ನಲ್ಲೇ ನಡೆದಿವೆ. 

ಉದ್ಯಮಿ ಮನೆ ದರೋಡೆಗೆ ಬಂದೋರು ಕಳ್ಳತನದ ಜತೆಗೆ ಮನೆಯೊಡತಿಯ ಸಾಮೂಹಿಕ ಅತ್ಯಾಚಾರ ಮಾಡಿದ್ರು!

ಆದರೆ ಏನೂ ಆಗಿಯೇ ಇಲ್ಲವೆಂಬಂತೆ ಕುಳಿತಿರುವ ಪೊಲೀಸ್ ಅಧಿಕಾರಿಗಳು. ತಕ್ಷಣ ಸಿಪಿಐ ಹಾಗೂ ಪಿಎಸ್‌ಐ ಸಸ್ಪೆಂಡ್ ಆಗಬೇಕು. ಬೋವಿ ಜನಾಂಗದ ಮಹಿಳೆ ಮೇಲೆ ದೌರ್ಜನ್ಯ ಆಗಿದೆ. ಆದರೆ ಮಾಧ್ಯಮದ ಮುಂದೆ ಗೂಂಡಾಗಿರಿ, ನೈತಿಕ ಪೊಲೀಸಗಿರಿ ಹುಟ್ಟಡಗಿಸುವ ಬಗ್ಗೆ ಹೇಳಿಕೆ ನೀಡುವ ಸಿಎಂ ಸಿದ್ದರಾಮಯ್ಯ ಮೌನವಾಗಿದ್ದಾರೆ. ಅತ್ಯಾಚಾರ ನಡೆಸಿದವರು ಯಾರು ಎಂಬುದನ್ನು ನೋಡಿ ಕ್ರಮದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರದ ಒಲೈಕೆ ರಾಜಕಾರದ ಪರಮಾವಧಿ ಇದು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರು ಹೊರಗಡೆ ಸುರಕ್ಷಿತವಾಗಿ ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. 

click me!