Bengaluru: ಕೆಲಸದ ವೇಳೆಯೇ ರಾಜ್ಯಪಾಲರ ಕಾರು ಚಾಲಕ ಸಾವು

Published : Dec 11, 2022, 03:40 PM ISTUpdated : Dec 11, 2022, 05:22 PM IST
Bengaluru: ಕೆಲಸದ ವೇಳೆಯೇ ರಾಜ್ಯಪಾಲರ ಕಾರು ಚಾಲಕ ಸಾವು

ಸಾರಾಂಶ

ನಮ್ಮ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಕಾರು ಚಾಲಕ ಕೆಲಸದ ಮೇಲಿರುವಾಗದೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಂಗಳೂರು (ಡಿ.11) : ನಮ್ಮ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಕಾರು ಚಾಲಕ ಕೆಲಸದ ಮೇಲಿರುವಾಗದೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಆದರೆ, ಅದೃಷ್ಟವಶಾತ್‌ ರಾಜ್ಯಪಾಲರು ಕಾರು ಹತ್ತುವ ಮುಂಚೆಯೇ ಘಟನೆ ನಡೆದಿದ್ದರಿಂದ ಕೆಲವೇ ಹೊತ್ತಿನಲ್ಲಿ ಉಂಟಾಗುವ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ರವಿ ಕುಮಾರ್ ಎಸ್ ಕಾಳೆ (46) ಹೃದಯಾಘಾತದಿಂದ ಸಾವನ್ನಪ್ಪಿದವರು. ನಮ್ಮ ರಾಜ್ಯದ ಮೊಟ್ಟ ಮೊದಲ ಪ್ರಜೆ ಎಂದರೆ ರಾಜ್ಯಪಾಲರು ಎಂದು ಹೇಳುತ್ತೇವೆ. ಆದರೆ, ಈಗ ರಾಜ್ಯಪಾಲರ ಕಾರು ಚಾಲಕನೇ ಹೃದಯಾಘಾತದಿಂದ ಸಾವನ್ನಪ್ಪಿದ ಸುದ್ದಿ ರಾಜ್ಯದಲ್ಲಿ ಆತಂಕ ಉಂಟಾಗುವಂತೆ ಮಾಡಿದೆ. ನಿನ್ನೆ ಹುಬ್ಬಳ್ಳಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರಾದ ಥಾವರ ಚಂದ್‌ ಗೆಹ್ಲೋಟ್‌ ಆಗಮಿಸಿದ್ದರು. ಇವರನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ತೆರಳಿದ್ದ ರವಿ ಕುಮಾರ್ ಎಸ್. ಕಾಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ದೇವನಹಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಾಲಕ ರವಿ ಅವರು ಬದುಕಲಿಲ್ಲ ಎಂದು ತಿಳಿದುಬಂದಿದೆ.

Koppal: ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಭೇಟಿ: ವಿಶೇಷ ಪೂಜೆ

ರಾಜ್ಯಪಾಲರಿಗೆ ನೆಚ್ಚಿನ ಚಾಲಕ: ರವಿ ಕುಮಾರ್ ಮೂಲತಃ ಧಾರವಾಡ ಮೂಲದವರಾಗಿದದಾರೆ.  ಸುಮಾರು 16 ವರ್ಷಗಳಿಂದ ಚಾಲಕನ ವೃತ್ತಿಯನ್ನು ಮಾಡಿಕೊಂಡು ಬಂದಿದ್ದರು. ಇತ್ತೀಚೆಗೆ ಥಾವರ್ ಚಂದ್ ಗೆಹ್ಲೋಟ್ ರಾಜ್ಯಕ್ಕೆ ರಾಜ್ಯಪಾಲರಾಗಿ ಬಂದಾಗಿನಿಂದ ಇದೇ ರವಿಕುಮಾರ್ ಅವರ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜಧಾನಿಯಲ್ಲಿ ಎಲ್ಲಿಯೇ ಕಾರ್ಯಕ್ರಮ ಇದ್ದರೂ ರಾಜ್ಯಪಾಲರನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿದ್ದರು. ಆದರೆ, ನಿನ್ನೆ ರಾತ್ರಿ ವೇಳೆ ರಾಜ್ಯಪಾಲರನ್ನು ಕರೆತರಲು ಹೋದಾಗಲೇ ದುರ್ಘಟನೆ ಸಂಭವಿಸಿದೆ. ಇನ್ನು ನಿಗದಿತ ವೇಳೆಗಿಂತ ಮುಂಚಿತವಾಗಿ ರಾಜ್ಯಪಾಲರು ಆಗಮಿಸಿ ಕಾರನ್ನು ಹತ್ತಿದ್ದರೆ ದಾರಿಯಲ್ಲಿ ಬರುವಾಗ ಹೃದಯಾಘಾತ ಆಗಿದ್ದರೆ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆಯಿತ್ತು. 

ಕಂಬನಿ ಮೀಡಿದ ರಾಜ್ಯಪಾಲರು: ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ ರವಿ ಕುಮಾರ್ ಅವರ ಪಾರ್ಥಿವ ಶರೀರವ ರಾಜಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜಭವನದಲ್ಲಿ ರವಿಕುಮಾರ್ ಅವರ ಪಾರ್ಥಿವ ಶರೀರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪುಷ್ಪ ನಮನ ಸಲ್ಲಿಸಿ ಅಂತಿಮ ದರ್ಶನ ಪಡೆದರು. ರವಿಕುಮಾರ್ ನಿಧನಕ್ಕೆ ಕಂಬನಿ ವ್ಯಕ್ತಪಡಿಸಿದ ರಾಜ್ಯಪಾಲರು ರವಿಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ರಾಜಭವನದ ಅಧಿಕಾರಿಗಳು, ಸಿಬ್ಬಂದಿಗಳು ರವಿಕುಮಾರ್ ಗೆ ಅಂತಿಮ ನಮನ ಸಲ್ಲಿಸಿದರು. ರವಿಕುಮಾರ್ ಅವರ ಅಂತ್ಯಸಂಸ್ಕಾರ ಧಾರವಾಡದ ಸ್ವಾಗ್ರಮದಲ್ಲಿ ನಡೆಯಲಿದೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ 10 ನೇ ಘಟಿಕೋತ್ಸವ, ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ

ನಿರಂತರ ಆರೋಗ್ಯ ತಪಾಸಣೆ ಅಗತ್ಯ: ಇನ್ನು ರಾಜ್ಯದಲ್ಲಿ ರಾಜ್ಯಪಾಲರನ್ನು ಒಳಗೊಂಡಂತೆ ಮುಖ್ಯಮಂತ್ರಿ, ಸಚಿವರು ಹಾಗೂ ಪ್ರಮುಖ ಅಧಿಕಾರಿಗಳ ವಾಹನ ಚಾಲಕರು ತುಂಬಾ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುತ್ತಾರೆ. ಆದರೆ, ಅವರಿಗೆ ಸೂಕ್ತವಾಇ ರಜೆ ಸೌಲಭ್ಯಗಳು ಕೂಡ ಇರುವುದಿಲ್ಲ. ಹೀಗೆ, ಒತ್ತಡದಲ್ಲಿ ಕೆಲಸ ಮಾಡುವ ವಾಹನ ಚಾಲಕರಿಗೆ ನಿಂತರವಾಗಿ ಆರೋಗ್ಯ ತಪಾಸಣೆ ಮಾಡಿಸುವ ಕಾರ್ಯವನ್ನು ಹಮ್ಮಿಕೊಳ್ಳಬೇಕು. ಆಗ ದೊಡ್ಡ ಅಪಘಾತಗಳು ಸಂಭವಿಸುವುದನ್ನು ತಡೆಗಟ್ಟಬಹುದು ಎಂದು ಸರ್ಕಾರಿ ವಾಹನಗಳ ಚಾಲಕರ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!