ಶಿವಲಿಂಗ ಪೂಜೆಗೆ ನಮಗೂ ಅನುಮತಿ ಕೊಡಿ: ಡಿಸಿಗೆ ಮಾಜಿ ಶಾಸಕ ಬಿ.ಆರ್.ಪಾಟೀಲ್ ಅಭಿಮಾನಿ ಬಳಗದಿಂದ ಕೋರಿಕೆ

By Kannadaprabha News  |  First Published Feb 17, 2023, 11:59 PM IST

ಆಳಂದದ ರಾಘವ ಚಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನವಾದ ಫೆ. 28 ರ ಶನಿವಾರ ಪೂಜೆಗೆ ತಮಗೂ ಅನುಮತಿಸಬೇಕು ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಅಭಿಮಾನಿಗಳ ಬಳಗದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆಯಾಗಿದೆ. 


ಕಲಬುರಗಿ (ಫೆ.17): ಆಳಂದದ ರಾಘವ ಚಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ದಿನವಾದ ಫೆ. 28 ರ ಶನಿವಾರ ಪೂಜೆಗೆ ತಮಗೂ ಅನುಮತಿಸಬೇಕು ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಅಭಿಮಾನಿಗಳ ಬಳಗದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆಯಾಗಿದೆ. ಫೆ.16ರಂದೇ ಮನವಿ ಸಲ್ಲಿಕೆಯಾಗಿದ್ದು ಈ ಮನಿ ಮೇನೆ ಜಿಲ್ಲಾಧಿಕಾರಿಗಳು ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮಾಜಿ ಶಾಸಕ ಬಿ.ಆರ್.ಪಾಟೀಲರ ಅಭಿಮಾನಿಗಳ ಪರವಾಗಿ ಆಳಂದದ ಗಣೇಶ ಪಾಟೀಲ್ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.  

ಈ ಪತ್ರದಲ್ಲಿ ಅವರು ಬಿ.ಆರ್.ಪಾಟೀಲ್ ಸಹೋದರ ಪುತ್ರ, ಪ್ರಸ್ತುತ ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಆರ್‍ಕೆ ಪಾಟೀಲ್ ನೇತೃತ್ವದಲ್ಲಿ 15 ಜನ ಪೂಜೆ ಸಲ್ಲಿಸಲು ನಿರ್ಧರಿಸಿದ್ದಾರೆ. ತಂಡದಲ್ಲಿ ಆರ್.ಕೆ.ಪಾಟೀಲ್, ಶಂಕರರಾವ ದೇಶಮುಖ, ಮಲ್ಲಪ್ಪ ಹತ್ತರಕಿ, ಚಂದ್ರಕಾಂತ ಹತ್ತರಕಿ, ಲಿಂಗರಾಜ ಪಾಟೀಲ್, ಶರಣಬಸಪ್ಪ ವಾಗೆ, ಗಣೇಶ್ ಪಾಟೀಲ್, ಆಳಂದ ತಾಲೂಕಾ ಅಭಾ ವೀರಶೈವ ಸಮಾಜದ ಶರಣಬಸಪ್ಪ ಪಾಟೀಲ್, ಲಕ್ಷ್ಮಣ ತಳಕೇರಿ, ಸುಭಾಷ ಫೌಜಿ ಸೇರಿದಂತೆ 15 ಜನ ಶಿವಲಿಂಗ ಪೂಜೆ ಸಲ್ಲಿಸುವ ಒಲವು ಹೊಂದಿದ್ದು ತಾವು ಅನುಮತಿಸಬೇಕು ಎಂದು ಕೋರಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Latest Videos

undefined

ಮದ್ದೂರು ಗೆಲ್ಲಲು ಕಾಂಗ್ರೆಸ್‌ ಭರ್ಜರಿ ಪ್ಲಾನ್‌: ಡಿಕೆಶಿ ನೇತೃತ್ವದಲ್ಲಿ ಮಹತ್ವದ ಚರ್ಚೆ

ಕಳೆದ ವರ್ಷದ ಶಿವರಾತ್ರಿಯಂದು ಶಿವಲಿಂಗ ಪೂಜೆಗೆ ನಮ್ಮ ತಂಡಕ್ಕೆ ಅನುಮತಿ ತಾವು ನೀಡಿದ್ದೀರಿ. ಈ ಬಾರಿಯೂ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಗಣೇಶ ಪಾಟೀಲ್ ಅವರು ಇವರೆಲ್ಲರ ಪರವಾಗಿ ಮನವಿ ಮಾಡಿದ್ದಾರೆ. ಇದುವರೆಗಿನ ಬೆಳವಣಿಗೆಯಲ್ಲಿ ಕೋರ್ಟ್ ಸೂಚನೆಯಂತೆ ಆಂಓಲಾ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಬಿಜೆಪಿ ಶಾಸಕ ಸುಭಾಸ ಗುತ್ತೇದಾರ್, ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಕಲಬುರಗಿಯ ಎಲ್ಲಾ ಬಿಜೆಪಿ ಶಾಸಕರು ಸೇರಿದಂತೆ ಗುತ್ತೇದಾರ್ ಗುಂಪಿನ ಹಾಗೂ ರಾಮ ಸೇನೆ ಸೇರಿದಂತೆ 15 ಜನರ ಪಟ್ಟಿ ಸಿದ್ಧಮಾಡಿ ಇವರು ಪೂಜೆಯಲ್ಲಿರುತ್ತಾರೆದು ಹೇಳಲಾಗಿದೆ. ಇದೀಗ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಬಿ.ಆರ್.ಪಾಟೀಲ್ ಅಭಿಮಾನಿಗಳ ಪರವಾಗಿ ಶಿವಲಿಂಗ ಪೂಜೆಗೆ ಕೋರಿಕೆ ಸಲ್ಲಿಕೆಯಾಗಿರೋದರಿಂದ ಈ ಬೆಳವಣಿಗೆ ಬಗ್ಗೆ ಜಿಲ್ಲಾಡಳಿತ ಅದ್ಯಾವ ನಿರ್ಣಯ ಕೈಗೊಳ್ಳುವುದೋ ಕಾದು ನೋಡಬೇಕಿದೆ.

click me!