ಜೀವನದ ಕೊನೆಯವರೆಗೂ ಸೈದ್ಧಾಂತಿಕ ಬದ್ಧತೆ ಹೊಂದಿದ್ದ ಫರ್ನಾಂಡೀಸ್‌: ಸಿದ್ದರಾಮಯ್ಯ

By Kannadaprabha NewsFirst Published Sep 26, 2022, 7:57 AM IST
Highlights
  • ಜೀವನದ ಕೊನೆಯವರೆಗೂ ಸೈದ್ಧಾಂತಿಕ ಬದ್ಧತೆ ಹೊಂದಿದ್ದ ಫರ್ನಾಂಡೀಸ್‌: ಸಿದ್ದು
  • -ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದ ವ್ಯಕ್ತಿ
  • ಕಾರ್ಮಿಕ ಹೋರಾಟದ ಮೂಲಕ ರಾಜಕೀಯ ಬೆಳವಣಿಗೆ
  • *ದಿ ಲೈಫ್‌ ಆ್ಯಂಡ್‌ ಟೈಮ್ಸ್‌ ಆಫ್‌ ಜಾರ್ಜ್ ಫರ್ನಾಂಡಿಸ್‌’ ಪುಸ್ತಕ ಲೋಪಾರ್ಪಣೆ

ಬೆಂಗಳೂರು (ಸೆ.26) : ಜೀವನದ ಕೊನೆಯವರೆಗೂ ಸೈದ್ಧಾಂತಿಕ ಬದ್ಧತೆ ಹೊಂದಿದ್ದ ಜಾಜ್‌ರ್‍ ಫರ್ನಾಂಡೀಸ್‌ ಅವರು ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಣ್ಣಿಸಿದ್ದಾರೆ. ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾಜ್‌ರ್‍ ಫರ್ನಾಂಡಿಸ್‌ ಜೀವನ ಚರಿತ್ರೆ ಕುರಿತ ‘ದಿ ಲೈಫ್‌ ಆ್ಯಂಡ್‌ ಟೈಮ್ಸ್‌ ಆಫ್‌ ಜಾರ್ಜ್ ಫರ್ನಾಂಡಿಸ್‌’ ಪುಸ್ತಕ ಲೋಪಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿದ್ದರಾಮೋತ್ಸವ ಜೀವಂತವಾಗಿಡಲು ಪ್ರಯತ್ನ: ಶಾಸಕ, ಎಂಎಲ್‌ಸಿ, ಕಾರ್ಯಕರ್ತರಿಗೆ ಸಿದ್ದು ಔತಣ

‘ಕಾರ್ಮಿಕ ಹೋರಾಟದ ಮೂಲಕ ರಾಜಕೀಯದಲ್ಲಿ ಬೆಳೆದ ಜಾಜ್‌ರ್‍ ಫರ್ನಾಂಡೀಸ್‌ ಅವರಿಗೆ ಸೈದ್ಧಾಂತಿಕ ಬದ್ದತೆ ಇತ್ತು. ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಇಡೀ ದೇಶ ಸುತ್ತಿ ಜನ ಸಾಮಾನ್ಯರ ಬದುಕನ್ನು ಅರ್ಥ ಮಾಡಿಕೊಂಡಿದ್ದರು. ಕಾಂಗ್ರೆಸ್‌ ವಿರುದ್ಧ ಹೋರಾಡಿದರೂ, ಕೊನೆದಿನಗಳವರೆಗೂ ರಾಜಕೀಯ ನಿಲುವುಗಳ ಬಗ್ಗೆ ಅವರ ನನ್ನ ನಡುವೆ ಭಿನ್ನಾಭಿಪ್ರಾಯವಿದ್ದರೂ ನಮ್ಮಿಬ್ಬರ ಸ್ನೇಹ ಅವೆಲ್ಲವನ್ನು ಮೀರಿದ್ದಾಗಿತ್ತು’ ಎಂದರು.

ನನ್ನ ರಾಜಕೀಯ ಬದುಕಿನಲ್ಲಿ ಜಾಜ್‌ರ್‍ ಫರ್ನಾಂಡಿಸ್‌ ಅವರಿಗೆ ವಿಶೇಷ ಸ್ಥಾನ ಇದೆ. ಅವರ ಒತ್ತಾಯದ ಮೇರೆಗೆ 1980ರಲ್ಲಿ ನಾನು ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದೆ. 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವಂತೆ ಸೂಚಿಸಿ ಚುನಾವಣೆ ಖರ್ಚಿಗೆ .10 ಸಾವಿರ ಕೊಟ್ಟು ಒಂದು ದಿನ ನನ್ನ ಪರ ಪ್ರಚಾರ ಮಾಡಿದ್ದರು. ನಾನು ರಾಜಕೀಯದಲ್ಲಿ ಬೆಳೆಯಲು ಪ್ರೋತ್ಸಾಹ ಕೊಟ್ಟಿದ್ದರು ಎಂದು ಅವರ ನೆನಪುಗಳನ್ನು ಸ್ಮರಿಸಿದರು.

ನಿವೃತ್ತ ನ್ಯಾಯಮೂರ್ತಿ ಎನ್‌.ವೆಂಕಟಾಚಲಯ್ಯ ಅವರು ಮಾತನಾಡಿ, ಜಾಜ್‌ರ್‍ ಅವರು ಅತ್ಯುತ್ತಮ ಆತ್ಮಕತೆ ಬರೆದಿದ್ದಾರೆ. ನಮ್ಮ ನೆರೆಹೊರೆಯವರಾಗಿದ್ದವರು. ನಮ್ಮ ಮನೆಯಿಂದ ಹೋಳಿಗೆ ತರಿಸಿಕೊಳ್ಳುತ್ತಿದ್ದರು ಎಂಬುದನ್ನು ಸ್ಮರಿಸಿದರು. ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ, ಲೇಖಕ ರಾಮಚಂದ್ರ ಗುಹಾ, ಲೇಖಕ ರಾಹುಲ್‌ ರಾಮಗುಂಡಂ, ಮೈಕಲ್‌ ಬಿ.ಫರ್ನಾಂಡಿಸ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂದು ನಮ್ಮೊಂದಿಗೆ ಇರಬೇಕಿತ್ತು

ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯವನ್ನು ದಮನಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವ ಇಂತಹ ಸಂದಿಗ್ಧ ಸಮಯದಲ್ಲಿ ಜಾಜ್‌ರ್‍ ಫರ್ನಾಂಡೀಸ್‌ ಅವರು ನಮ್ಮೊಂದಿಗೆ ಇರಬೇಕಿತ್ತು. ಹುಟ್ಟೂರನ್ನು ಅವರು ಮರೆತಿರಲಿಲ್ಲ. ಕೇಂದ್ರ ರೈಲ್ವೆ ಸಚಿವರಾಗಿದ್ದ ಕಾಲದಲ್ಲಿ ಕರಾವಳಿ ಜನತೆಯ ಬಹುದಿನಗಳ ಕನಸಾದ ಕೊಂಕಣ ರೈಲ್ವೇ ಯೋಜನೆ’ಯನ್ನು ಯಶಸ್ವಿಯಾಗಿ ಜಾರಿಗೊಳಿಸಿದರು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ PayCMಗೆ ಬಿಜೆಪಿ Pay2 Congress Madam ಪ್ರತ್ಯುತ್ತರ; ಕ್ರಿಯೇಟಿವ್‌ ಆಗಿ ಕಿತ್ತಾಡ್ತಿದ್ದಾರೆ ರಾಜ್ಯ ನಾಯಕರು!

ಕೋಕೋ ಕೋಲಾ ಕುಡಿಯುವುದನ್ನು ಬಿಟ್ಟೆ:

ಜಾಜ್‌ರ್‍ ಫರ್ನಾಂಡೀಸ್‌ ಅವರು ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದಾಗ ಕೈಗಾರಿಕಾ ಸಚಿವರಾಗಿದ್ದರು. ಆಗ ಮೈಸೂರಿಗೆ ಒಮ್ಮೆ ಬಂದಿದ್ದರು. ಮೈಸೂರಿನ ತಮ್ಮೆಲ್ಲಾ ಸ್ನೇಹಿತರನ್ನು ಒಟ್ಟಿಗೆ ಸೇರಿಸಿಕೊಂಡು ನಾನು ಕೋಕೋ ಕೋಲಾ ವಿರುದ್ಧ ಹೋರಾಟವನ್ನು ಮಾಡುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಬೇಕು ಮತ್ತು ಯಾವತ್ತೂ ಕೊಕೊ ಕೋಲಾ ಕುಡಿಯುವುದಿಲ್ಲ ಎಂದು ಶಪಥ ಮಾಡಬೇಕು ಎಂದು ನನಗೆ ಹೇಳಿದ್ದರು. ಅವರ ಮಾತಿಗೆ ಒಪ್ಪಿ ಕೋಕೋ ಕೋಲ ಕುಡಿಯುವುದನ್ನು ಬಿಟ್ಟವನು ಇಲ್ಲಿಯವರೆಗೆ ಕುಡಿದಿಲ್ಲ ಎಂದು ಹೇಳಿದರು.

click me!