
ಬೆಂಗಳೂರು(ಜು.02): ಗೃಹಲಕ್ಷ್ಮಿ ಯೋಜನೆ ಜಾರಿಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಹೌದು, ಇದೇ ಜುಲೈ 14 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ. ಗೃಹಲಕ್ಷ್ಮಿ ಜಾರಿಗೆ ಪ್ರತಿ ಜಿಲ್ಲೆಯಲ್ಲೂ ಪ್ರಜಾಪ್ರತಿನಿಧಿಗಳನ್ನ ನೇಮಕ ಮಾಡಲಾಗುತ್ತದೆ. ಪ್ರತಿ ಜಿಲ್ಲೆಗೂ 50 ರಿಂದ 100 ಜನ ಪ್ರಜಾಪ್ರತಿನಿಧಿಗಳು ನೇಮಕವಾಗಲಿದ್ದಾರೆ.
ಯೋಜನೆಯನ್ನ ಸಮರ್ಪಕವಾಗಿ ಜಾರಿಗೆ EDCS ಡಿಪಾರ್ಟ್‌ಮೆಂಟ್ ಗೃಹಲಕ್ಷ್ಮಿ ಆ್ಯಪ್ ಸಿದ್ದಪಡಿಸಿದೆ. ಪ್ರಜಾಪ್ರತಿನಿಧಿಗಳಾಗಿ ನೇಮಗೊಂಡವರ ಮೊಬೈಲ್‌ಗೆ ಆ್ಯಪ್ ಅಳವಡಿಕೆ ಚಿಂತನೆ ನಡೆಸಲಾಗುತ್ತಿದೆ. ಪ್ರಜಾಪ್ರತಿನಿಧಿಗಳು ನಿಮ್ಮ ಊರಿಗೆ ಬಂದು ಅರ್ಜಿ ಭರ್ತಿ ಮಾಡಲಿದ್ದಾರೆ. ಅರ್ಜಿ ಸ್ವೀಕಾರ ಜುಲೈ 14 ರಿಂದ ಶುರುವಾಗಲಿದೆ. ಆಗಸ್ಟ್ 15 ಕ್ಕೆ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವ ಮನ್ನ ಎಚ್ಚರ..ಎಚ್ಚರ: ಪ್ಲೇ ಸ್ಟೋರ್‌ಗೆ ಲಗ್ಗೆ ಇಟ್ಟಿವೆ ನಕಲಿ ಆ್ಯಪ್‌ಗಳು
ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್‌ನಲ್ಲಿ ಕುಟುಂಬದ ಯಜಮಾನಿ ಎಂದು ಗುರುತಿಸಿಕೊಂಡವರ ಖಾತೆಗೆ ಹಣ ಜಮಾವಣೆಯಾಗಲಿದೆ. ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.28 ಕೋಟಿ ಮಹಿಳೆಯರ ಖಾತೆಗೆ ಹಣ ಸಂದಾಯವಾಗಲಿದೆ.
ಇನ್ನು ಪ್ರತಿ ಅರ್ಜಿಗೆ ಪ್ರಜಾಪ್ರತಿನಿಗಳಿಗೆ 15 ರೂಪಾಯಿ ಸೇವಾ ಶುಲ್ಕ ನೀಡಲು ಚಿಂತನೆ ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ 10 ರೂ ಹಾಗೂ ಮುದ್ರಿತ ಪ್ರತಿಗೆ 5 ರೂಪಾಯಿ ಸರ್ಕಾರದದಿಂದ ನೀಡಲು ಸಿದ್ಧತೆ ನಡೆಯುತ್ತಿದೆ. ಆದ್ರೆ ಅರ್ಜಿದಾರರು ಯಾವುದೇ ಶುಲ್ಕ ಸಲ್ಲಿಸುವಂತಿಲ್ಲ.
ಪ್ರಜಾಪ್ರತಿನಿಧಿಗಳು ಯಾವ ರೀತಿ ಅರ್ಜಿ ಸಲ್ಲಿಸಬಹುದು?
* ಪ್ರಜಾಪ್ರತಿನಿಧಿಗಳ ಮೊಬೈಲ್‌ಗೆ ಆ್ಯಪ್ ಅಳವಡಿಕೆ
* ಮೊಬೈಲ್‌ನಲ್ಲಿ ಲಾಗಿನ್ ಆಗಲು ಪಾಸ್ ವರ್ಡ್ ಕೊಡಲಾಗುವುದು
* ಪ್ರತಿನಿಧಿಗಳು ಆ್ಯಪ್‌ಗೆ ಲಾಗಿನ್ ಆಗಿ ಆನ್ ಮೂಲಕ ಅರ್ಜಿ ಸಲ್ಲಿಕೆ
* ಅರ್ಜಿಗೆ ಬೇಕಾದ ಪೂರಕ ದಾಖಲೆ(ರೇಷನ್ ಕಾರ್ಡ್, ಆಧಾರ್ ಬ್ಯಾಂಕ್ ಖಾತೆಯ ವಿವರ) ಅಪ್ಲೋಡ್ ಮಾಡುವುದು
* ನಂತ್ರ ಅರ್ಜಿ ಸಲ್ಲಿಸಿದ ಪ್ರತಿಯನ್ನು ಫಲಾನುಭವಿಗಳಿಗೆ ನೀಡುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ