: ಸಮುದ್ರ ವಿಹಾರಕ್ಕೆ ಬಂದಿದ್ದ ವೈದ್ಯರು ಸಮುದ್ರ ಪಾಲಾದ ದುರ್ಘಟನೆ ಮಂಗಳೂರು ಹೊರವಲಯದ ಸೋಮೇಶ್ವರ ರುದ್ರಪಾದೆ ಬಳಿ ನಡೆದಿದೆ.
ಮಂಗಳೂರು (ಸೆ.4) : ಸಮುದ್ರ ವಿಹಾರಕ್ಕೆ ಬಂದಿದ್ದ ವೈದ್ಯರು ಸಮುದ್ರ ಪಾಲಾದ ದುರ್ಘಟನೆ ಮಂಗಳೂರು ಹೊರವಲಯದ ಸೋಮೇಶ್ವರ ರುದ್ರಪಾದೆ ಬಳಿ ನಡೆದಿದೆ.
ಡಾ. ಆಶೀಕ್ ಗೌಡ (30) ಮೃತ ದುರ್ದೈವಿ. ನಗರದ ಎ.ಜೆ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದ ಮೃತರು, ನಿನ್ನೆ ತಡರಾತ್ರಿ 11 ಗಂಟೆ ಸಮಯ ಆಶೀಕ್ ಗೌಡ, ಮೂವರು ಇಂಟನ್೯ಶಿಪ್ ನಡೆಸುತ್ತಿರುವ ವೈದ್ಯರ ಜೊತೆಗೆ ಸೋಮೇಶ್ವರಕ್ಕೆ ಬಂದಿದ್ದಾರೆ. ತಡರಾತ್ರಿ ರುದ್ರಪಾದೆಯಲ್ಲಿ ವಿಹರಿಸುತ್ತಿದ್ದ ಸಂದರ್ಭ ಡಾ.ಪ್ರದೀಶ್ ಎಂಬಾತ ಕಲ್ಲಿನಿಂದ ಜಾರಿ ಆಯಾತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ರಕ್ಷಣೆಗಾಗಿ ಕೂಗುತ್ತಿದ್ದಾಗ, ಡಾ.ಆಶೀಕ್ ಗೌಡ ಇಣುಕುವ ಸಂದರ್ಭ ಅವರೂ ಸಹ ಕಾಲುಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಡಾ. ಪ್ರದೀಶ್ ಸಣ್ಣ ಕಲ್ಲು ಹಿಡಿದು ಸಮುದ್ರದಿಂದ ಪಾರಾಗಿದ್ದಾರೆ. ಆದರೆ ವೈದ್ಯ ಆಶೀಕ್ ಗೌಡ ಅಲೆಗಳ ಹೊಡೆತಕ್ಕೆ ಮೃತಪಟ್ಟಿದ್ದಾರೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕದಳ. ತಡರಾತ್ರಿವರೆಗೂ ಅಗ್ಮಿಶಾಮಕ ದಳ, ಉಳ್ಳಾಲ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೆ ರಾತ್ರಿವೇಳೆ ವೈದ್ಯ ಆಶೀಕ್ ಗೌಡ ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಅದೇ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಜ್ರಾಬಾದ್ ಕೋಟೆ ನೋಡುವ ವೇಳೆ ಕಾಲು ಜಾರಿ ಬಿದ್ದಿದ್ದ ಪ್ರವಾಸಿಗನ ರಕ್ಷಣೆ
ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಂಜ್ರಾಬಾದ್ ಕೋಟೆ ನೋಡಲು ಬಂದು ಕಾಲು ಜಾರಿ ಬಿದ್ದಿದ್ದ ಯುವಕನನ್ನು ರಕ್ಷಿಸಲಾಗಿದೆ.
ಮಡಿಕೇರಿಯಿಂದ ನಾಪತ್ರೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಸಮುದ್ರ ಪಾಲು!
ಬೆಂಗಳೂರು ಮೂಲದ ವಿನಯ್ ಕಾಲು ಜಾರಿ ಬಿದ್ದಿದ್ದ ಯುವಕ. ಕೋಟೆಯ ಗೋಡೆ ಮೇಲಿಂದ ಪ್ರಕೃತಿ ವೀಕ್ಷಣೆ ವೇಳೆ ನಡೆದಿರುವ ದುರಂತ ಕೋಟೆಯ ಮೇಲ್ಭಾಗದಿಂದ ಕೆಳಭಾಗದ ಕಾಡಿಗೆ ಬಿದ್ದಿದ್ದ ಯುವಕ. ಕೆಳಗೆ ಬಿದ್ದ ಬಳಿಕ ಕಾಪಾಡುವಂತೆ ಕಿರುಚಿಕೊಂಡಿದ್ದ ಯುವಕ ತಕ್ಷಣ ಕಾರ್ಯಪ್ರವೃತ್ತರಾದ ಪ್ರವಾಸಿ ಮಿತ್ರ ಪೊಲೀಸ್ ಲೋಹಿತ್ ಮತ್ತು ಪ್ರವಾಸಿಗರು ಏಣಿ ಮೂಲಕ ಮೇಲಕ್ಕೆ ಹತ್ತಿಸಿ ಆಪತ್ತಿನಲ್ಲಿದ್ದವನ ರಕ್ಷಣೆ ಪ್ರವಾಸಿ ಮಿತ್ರ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ. ಜೀವ ರಕ್ಷಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಪ್ರವಾಸಿಗ ವಿನಯ್