One Nation, One Election ಇದು ಹಿಟ್ಲರ್ ಸಂಸ್ಕೃತಿ, ಸಂವಿಧಾನದಲ್ಲಿ ಅವಕಾಶವಿಲ್ಲ- ಎಚ್‌ಸಿ ಮಹದೇವಪ್ಪ

By Ravi Janekal  |  First Published Sep 4, 2023, 3:04 PM IST

ಒಂದು ರಾಷ್ಟ್ರ, ಒಂದು ಚುನಾವಣೆ ಎಂದು ಮಾಡಲು ಹೊರಟಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರದು ಸರ್ವಾಧಿಕಾರದ ಹಾಗೂ ಹಿಟ್ಲರ್ ಸಂಸ್ಕೃತಿ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.4): ಒಂದು ರಾಷ್ಟ್ರ, ಒಂದು ಚುನಾವಣೆ ಎಂದು ಮಾಡಲು ಹೊರಟಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಅವರದು ಸರ್ವಾಧಿಕಾರದ ಹಾಗೂ ಹಿಟ್ಲರ್ ಸಂಸ್ಕೃತಿ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

Tap to resize

Latest Videos

undefined

ಇಂದು ಚಿತ್ರದುರ್ಗಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಗಣತಂತ್ರ ಆಧರಿತ ದೇಶ. ಗಣತಂತ್ರ ವ್ಯವಸ್ಥೆಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದರು. 

ಒಂದು ರಾಜ್ಯದ ಅಧಿಕಾರ, ಸ್ವಾಯತ್ತತೆಗೆ ಕೇಂದ್ರ ಸರ್ಕಾರ ಕೈ ಹಾಕಲು ಬರುವುದಿಲ್ಲ. ಈಗ ನಮ್ಮಲ್ಲಿ ಇರುವುದು ಪ್ರಜಾಪ್ರಭುತ್ವ. ಮೊನ್ನೆ ತಾನೇ ರಾಜ್ಯದಲ್ಲಿ ಚುನಾವಣೆ ನಡೆದಿದ್ದು, ಬರುವ ಚುನಾವಣೆಯಲ್ಲಿ ನಮ್ಮೊಂದಿಗೆ ಬನ್ನಿ ಅಂದರೆ ಹೇಗೆ? ಮೋದಿ(Narendra modi) ಅವರು ಒಂದು ರಾಜ್ಯದ ಸ್ವಾಯತ್ತತೆಯನ್ನು ಒಸಕಿ ಹಾಕುವ ಕೆಲಸ ಮಾಡಲು ಹೊರಟಿದ್ದಾರೆ. ಇದು ಸರ್ವಾಧಿಕಾರದ ಹಾಗೂ ಹಿಟ್ಲರ್ ಸಂಸ್ಕೃತಿಯಾಗಿದೆ. ನಮ್ಮ ದೇಶದ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದರು. 

ಅವಧಿಪೂರ್ವ ಚುನಾವಣೆ ನಡೆದುಬಿಡುತ್ತಾ..? ಅಧಿವೇಶನದಲ್ಲಿ ಸಮರ ಘೋಷ?! ಏನಿದು ರಹಸ್ಯ?

ಸಿದ್ದರಾಮಯ್ಯ ಲಾಟರಿ ಸಿಎಂ(Siddaramaiah lottery CM statement) ಎಂಬ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಮಹದೇವಪ್ಪ, ಸಿದ್ದರಾಮಯ್ಯ ಓರ್ವ ಸ್ವಾಭಾವಿಕ ನಾಯಕ. ಮಾಸ್ ಲೀಡರ್ ಎಂದು ರಾಜ್ಯಕ್ಕೆ ಗೊತ್ತಿರುವ ವಿಚಾರ. ನುಡಿದಂತೆ ನಡೆಯುವುದು, ಉತ್ತಮ ಆಡಳಿತ ಅವರ ಸಾಮರ್ಥ್ಯವಾಗಿದೆ. ಇಡೀ ರಾಜ್ಯದ ಜನರು ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಈಸ್ ಎ ಗೆಸ್ಟೆಡ್ ಅಂಡ್ ಟ್ರಸ್ಟೆಡ್ ಲೀಡರ್. ಈಶ್ವರಪ್ಪ ಅವರಿಗೆ ಮೆದುಳು, ನಾಲಗೆಗೆ ಕನೆಕ್ಷನ್ ಇಲ್ಲ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಮತ್ತು ಅವರ ಪಾರ್ಟಿಯವರೇ ಈಶ್ವರಪ್ಪರನ್ನು ಕ್ಯಾರೇ ಅನ್ನುತ್ತಿಲ್ಲ. ಅಧಿಕಾರ ಇಲ್ಲದೆ ರಾಜಕೀಯ ಹತಾಶರಾಗಿರುವ ಈಶ್ವರಪ್ಪ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಈಶ್ವರಪ್ಪಗೆ ಟಾಂಗ್ ನೀಡಿದರು.

ಕೊಪ್ಪಳದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಯ ವರ್ಗಾವಣೆ ವಿಚಾರ ನನಗೆ ತಿಳಿದಿಲ್ಲ. ಹಾಗಾಗಿ ಸಚಿವ ಶಿವರಾಜ್ ತಂಗಡಗಿ, ಮಹದೇವಪ್ಪ ಮಧ್ಯೆ ಸಮನ್ವಯ ಕೊರತೆ ಎನ್ನುವುದು ತಪ್ಪು. ನಮ್ಮಲ್ಲಿ ಯಾವುದೇ ಸಮನ್ವಯದ ಕೊರತೆ ಇಲ್ಲ. ಅವರಿಗೆ ಬೇಕು ಅಂದರೆ ಆಡಳಿತಾತ್ಮಕ ದೃಷ್ಟಿಯಿಂದ ಏನು ಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು. 

ಏನಿದು ಒಂದು ರಾಷ್ಟ್ರ.. ಒಂದು ಚುನಾವಣೆ..? ವಿಪಕ್ಷಗಳಿಂದ ವಿರೋಧ ಯಾಕೆ?

 

click me!