ಶ್ರೀ ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದಿಂದ 2022-23ನೇ ಸಾಲಿನಲ್ಲಿ ಕೊಡಮಾಡುವ ‘ಸಿದ್ಧಗಂಗಾಶ್ರೀ'' ಪ್ರಶಸ್ತಿಗೆ ಶ್ರೇಷ್ಠ ಭೌತವಿಜ್ಞಾನಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಎಚ್.ಶಿವರುದ್ರಯ್ಯ ತಿಳಿಸಿದ್ದಾರೆ.
ತುಮಕೂರು (ಡಿ.13): ಶ್ರೀ ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದಿಂದ 2022-23ನೇ ಸಾಲಿನಲ್ಲಿ ಕೊಡಮಾಡುವ ‘ಸಿದ್ಧಗಂಗಾಶ್ರೀ'' ಪ್ರಶಸ್ತಿಗೆ ಶ್ರೇಷ್ಠ ಭೌತವಿಜ್ಞಾನಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಎಚ್.ಶಿವರುದ್ರಯ್ಯ ತಿಳಿಸಿದ್ದಾರೆ. ಸಿದ್ಧಗಂಗಾಮಠದಲ್ಲಿ ಡಾ.ಶಿವಕುಮಾರ ಮಹಾಸ್ವಾಮೀಜಿಗಳ ಆಶೀರ್ವಾದದೊಂದಿಗೆ ಹಾಗೂ ಶ್ರೀಮಠದ ಅಧ್ಯಕ್ಷರಾದ ಸಿದ್ಧಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಸಂಘದ 63ನೇ ಸರ್ವಸದಸ್ಯರ ವಾರ್ಷಿಕ ಮಹಾಧಿವೇಶನದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಯು 1 ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ಅಲ್ಲದೆ, ಶ್ರೀಗಳ ಹೆಸರಿನ ‘ಸಿದ್ಧಗಂಗಾ ಶಿವಕುಮಾರ ಶ್ರೀ'' ಪ್ರಶಸ್ತಿಗೆ ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೋಜಾ ಹಾಗೂ ಹಿರಿಯ ಜಾನಪದ ವಿದ್ವಾಂಸ ಬೆಂಗಳೂರಿನ ಡಾ.ಬಿ.ಎಸ್.ಸ್ವಾಮಿ ಭಾಜನರಾಗಿದ್ದಾರೆ. ಪ್ರಶಸ್ತಿಯು 15 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ.
undefined
ಶಾಸಕ ಯತ್ನಾಳ್ ಅವನತಿ ಆರಂಭವಾಗಿದೆ: ಮಾಜಿ ಸಚಿವ ಮುರುಗೇಶ್ ನಿರಾಣಿ
ಅಂತೆಯೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ‘ಸಂಘಸಿರಿ'' ಪ್ರಶಸ್ತಿಯನ್ನು ಈ ಸಾಲಿನಲ್ಲಿ 4 ಮಂದಿಗೆ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ಹಾಸನದ ಸುಶಿಲ್ ಸೋಮಶೇಖರ್, ಮೈಸೂರಿನ ಡಾ.ವಚನಾ ಕುಮಾರಸ್ವಾಮಿ, ಬೆಂಗಳೂರಿನ ಉದ್ಯಮಿ ಶ್ರೀ ಎ.ನಂಜಪ್ಪ, ಮತ್ತು ಪ್ರಗತಿಪರ ರೈತ ಹೊಸಕೋಟೆಯ ಶ್ರೀ ಟಿ.ಮಂಜುನಾಥ್ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ರಾಘವೇಂದ್ರ ಶಾಸ್ತ್ರಿಗೆ ಸಿಂಗಾಪುರ ರಾಷ್ಟ್ರಪತಿ ಪದಕ: ಕೊರೋನಾ ಸಮಯದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಸಮನ್ವಯ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಅವರಿಗೆ ಸಿಂಗಾಪುರ ಸರ್ಕಾರವು ರಾಷ್ಟ್ರಪತಿಗಳ ಸ್ಥಿತಿ ಸ್ಥಾಪಕತ್ವ ಪದಕ ನೀಡಿ ಗೌರವಿಸಿದೆ.
ಕೊರೋನಾ ಸೋಂಕಿನ ತೀವ್ರತೆ ಹೆಚ್ಚಿದ್ದ ಸಂದರ್ಭದಲ್ಲಿ ಬೆಂಗಳೂರು ಮೂಲದ ರಾಘವೇಂದ್ರ ಶಾಸ್ತ್ರಿ ಅವರು ವಿವಿಧ ನೈಸರ್ಗಿಕ ಪದಾರ್ಥಗಳ ಬಳಕೆಯಿಂದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸಿದ್ದರು. ಅದರ ಜತೆಗೆ ವಿವಿಧ ಸತತ 2 ತಿಂಗಳ ಕಾಲ ಆಸ್ಪತ್ರೆಗಳಿಗೆ ಹಣ್ಣುಗಳು, ಪಾನೀಯ, ಬಿಸಿ ತಿಂಡಿಗಳನ್ನು ಪೂರೈಸುವ ಮೂಲಕ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ಗುರುತಿಸಿ ಸಿಂಗಾಪುರ ಸರ್ಕಾರ ಗೌರವಿಸಿದೆ.
ಚುನಾವಣೆ ಹೊತ್ತಲ್ಲಿ ಮತ್ತೆ ಪಂಚಮಸಾಲಿ ಹೋರಾಟ ಕಿಚ್ಚು
ಇತ್ತೀಚೆಗೆ ನಡೆದ ಪ್ರದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರಾಘವೇಂದ್ರ ಶಾಸ್ತ್ರಿ ಅವರು, ಕೊರೋನಾ ಸೋಂಕಿನ ಭೀತಿ ಇದ್ದ ಸಂದರ್ಭದಲ್ಲಿ ವೈದ್ಯಕೀಯ ನೆರವಿನ ಜತೆಗೆ, ಆಹಾರದ ಪೂರೈಕೆ ಅವಶ್ಯಕವಾಗಿತ್ತು. ಸೋಂಕಿತರ ಜತೆಗೆ ವೈದ್ಯಕೀಯ ಸಿಬ್ಬಂದಿಗೆ ನೆರವಾಗುವ ಸಲುವಾಗಿ ಅಗತ್ಯ ವಸ್ತುಗಳನ್ನು ಪೂರೈಸಿದ್ದೆ ಎದಿದ್ದಾರೆ. ಕಾರ್ಯಕ್ರಮದಲ್ಲಿ ಸಿಂಗಾಪುರ ಸರ್ಕಾರದ ಸಂಸ್ಕೃತಿ, ಸಮುದಾಯ ಮತ್ತು ಯುವಜನ ಇಲಾಖೆ ಸಂಸದೀಯ ಕಾರ್ಯದರ್ಶಿ ಎರಿಕ್ ಚುವಾ ಇತರರಿದ್ದರು.