ರೌಡಿ ಕೋತಿ ಕೊನೆಗೂ ಸೆರೆ, ನಿಟ್ಟುಸಿರು ಬಿಟ್ಟ ಹಳೇ ಕುಂದುವಾಡ ಗ್ರಾಮಸ್ಥರು!

By Ravi JanekalFirst Published Aug 24, 2023, 6:49 PM IST
Highlights

ದಾವಣಗೆರೆ ಸಮೀಪದ  ಹಳೇ ಕುಂದುವಾಡ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಿದ್ದ ರೌಡಿ ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆಹಿಡಿದಿದ್ದಾರೆ.  ಮುಸ್ಯಾ ಜಾತಿಗೆ ಸೇರಿದ ಕೋತಿ ಕೆಲ ದಿನಗಳಿಂದ ಗ್ರಾಮದಲ್ಲಿ ನೆಮ್ಮದಿ ಕದಡಿತ್ತು.

-ವರದರಾಜ್ 

ದಾವಣಗೆರೆ (ಆ.24) ದಾವಣಗೆರೆ ಸಮೀಪದ  ಹಳೇ ಕುಂದುವಾಡ ಗ್ರಾಮಸ್ಥರ ಮೇಲೆ ದಾಳಿ ಮಾಡುತ್ತಿದ್ದ ರೌಡಿ ಕೋತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆಹಿಡಿದಿದ್ದಾರೆ.  ಮುಸ್ಯಾ ಜಾತಿಗೆ ಸೇರಿದ ಕೋತಿ ಕೆಲ ದಿನಗಳಿಂದ ಗ್ರಾಮದಲ್ಲಿ ನೆಮ್ಮದಿ ಕದಡಿತ್ತು.  ಸಿಕ್ಕ ಸಿಕ್ಕವರ ಮೈಮೇಲೆ ಎರಗುತ್ತಿದ್ದ ಕೋತಿ  ಹಲವರನ್ನು  ಕಚ್ಚಿ ಗಾಯಗೊಳಿಸಿತ್ತು. ಗ್ರಾಮದಲ್ಲಿ 10 ಕ್ಕು ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿತ್ತು. ಏಕಾಏಕಿ ಮನೆಗಳಿಗೆ ನುಗ್ಗುತ್ತಿದ್ದ ಕೋತಿ ಕೈಗೆ ಸಿಕ್ಕ ವಸ್ತುಗಳನ್ನು ಕೊಂಡೊಯ್ಯುತ್ತಿತ್ತು. ಇದರಿಂದ ಮುಸ್ಯಾನ ಕಾಟಕ್ಕೆ ಗ್ರಾಮಸ್ಥರು ಬೇಸತ್ತು ಹೋಗಿದ್ದರು. ಕೋತಿಯನ್ನು ಹೇಗಾದ್ರು ಮಾಡಿ ಗ್ರಾಮದಿಂದ ಓಡಿಸಬೇಕೆಂದುಕೊಂಡಿದ್ದ ಗ್ರಾಮದ ಯುವಕರಿಗೆ ಕೋತಿ ಚೆಳ್ಳೆ ಹಣ್ಣು ತಿನ್ನಿಸುತ್ತಿತ್ತು.

ಗ್ರಾಮದಲ್ಲಿ ರೌಡಿ ಕೋತಿಯೆಂದು ಹೆಸರಾಗಿದ್ದು ಕುಂದವಾಡ ಗ್ರಾಮದ ಮಕ್ಕಳು ರಸ್ತೆಯಲ್ಲಿ   ಶಾಲೆಗೆ ಹೋಗಲು ಭಯಪಡಿಸುತ್ತಿದ್ದರು. ಮಹಿಳೆಯರು  ವಯಸ್ಸಾದವರು ಕೈನಲ್ಲಿ ಏನಾದ್ರು ಹಿಡಿದುಕೊಂಡು ಹೊರಟರೆ ಮೈ ಮೇಲೆ ಎರಗುತ್ತಿತ್ತು. ಇದರಿಂದ ಕೋತಿಯ ಕಾಟಕ್ಕೆ ಮಹಿಳೆರು ಹೊರಬರಲು ಹೆದರುತ್ತಿದ್ದರು. ಬೈಕ್ ಸವಾರರನ್ನು ಟಾರ್ಗೆಟ್ ಮಾಡುತ್ತಿದ್ದ ಕೋತಿ ಕೀಟಲೆಯಿಂದ ಬೇಸತ್ತದಿಂದ ಜನರು  ಹೇಗಪ್ಪ ಕೋತಿ ಕಾಟದಿಂದ ತಪ್ಪಿಸಿಕೊಳ್ಳುವುದೆಂದು ಚಿಂತೆಗೀಡಾಗಿದ್ದರು. 

ತಲೆಗೆ 20 ಸಾವಿರ ಘೋಷಿಸಿದ್ದ Most Wanted ರೌಡಿ ಕೋತಿ ಕೊನೆಗೂ ಅರೆಸ್ಟ್

ಕೊನೆಗೆ ಅರಣ್ಯ ಇಲಾಖೆಗೆ ದೂರು ನೀಡಿದ ಗ್ರಾಮಸ್ಥರು. ದೂರು ಹಿನ್ನಲೆ ದಾವಣಗೆರೆ ಉಪಸಂರಕ್ಷಣಾಧಿಕಾರಿ ಶಶಿಧರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕುಂದವಾಡ ಗ್ರಾಮ(Kundavada village rowdy monkey)ಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯ ಚಲನವಲನಗಳನ್ನು ನೋಡಿ ಬೋನ್ ನಲ್ಲಿ ಹಿಡಿಯುವ ಪ್ಲಾನ್ ಮಾಡಿದರು. ಬಾಳೆಹಣ್ಣು, ಬಿಸ್ಕೆಟ್, ಮಿರರ್ ಇಟ್ಟು ನಾಲ್ಕು ದಿನಗಳಿಂದ ಕಾದಿದ್ದ ಅರಣ್ಯ ಇಲಾಖೆ(forest depertment)  ಸಿಬ್ಬಂದಿಗೆ ಬೋನ್ ನಿಂದ ನಿನ್ನೆ ಜಸ್ಟ್ ಮಿಸ್ಸಾಗಿತ್ತು. 

ಇಂದು ಬೋನ್ ಬಳಿ ಬಂದ ಮುಸ್ಯಾ ಕೋತಿ ಬೋನ್ ಮೇಲೆ ಕೂತು ಕಪಿಚೇಷ್ಟೆ ಮಾಡುತ್ತಿದ್ದು ನಂತರ ಬಾಳೆ ಹಣ್ಣು ತಿನ್ನಲು ಇಳಿದಾಗ ಕೋತಿ ಲಾಕ್ ಆಗಿದೆ. ಕೋತಿ ಬೋನಿಗೆ ಬಿದ್ದಿರುವ ವಿಷ್ಯ ಕೇಳಿ ಗ್ರಾಮಸ್ಥರು ನಿಟ್ಟಿಸಿರುಬಿಟ್ಟಿದ್ದಾರೆ. 

Viral Video: ಸರ್ಕಾರಿ ಶಾಲೆಗೆ ಬಂದ ವಿಶೇಷ ಅತಿಥಿ: ಪಾಠ ಕೇಳಲು ದಿನಾ ಶಾಲೆಗೆ ಬರುತ್ತೆ ಕೋತಿ..!

ಗ್ರಾಮದಲ್ಲಿ ರೌಡಿ ಕೋತಿ ಸೆರೆಯಾಗಿರುವುದನ್ನು ತಿಳಿದ ಮಕ್ಕಳು ಬೋನ್ ಬಳಿ ಕುಣಿದು ಕುಪ್ಪಳಿಸಿದ್ದಾರೆ. ಕೋತಿ ಸೆರೆಯಾಗಿರುವ ವಿಡಿಯೋವನ್ನು ಯುವಕರು  ಸಾಮಾಜಿಕ ಜಾಲತಾಣಗಳಲ್ಲಿ ಡೈಲಾಗ್ ನೊಂದಿಗೆ ಟ್ರೋಲ್ ಮಾಡುತ್ತಾ ಖುಷಿಪಡುತ್ತಿದ್ದಾರೆ.

click me!