Hubli - Delhi Flight: ಉತ್ತರ ಕರ್ನಾಟಕದಿಂದ ದೆಹಲಿಗೆ ವಿಮಾನ ಸೇವೆ- ಹುಬ್ಬಳ್ಳಿಯಲ್ಲಿ ಚಾಲನೆ

By Sathish Kumar KH  |  First Published Nov 14, 2022, 5:23 PM IST

Hubballi-Delhi Regular Flight Soon: ಹುಬ್ಬಳ್ಳಿಯಿಂದ ದೆಹಲಿಗೆ ನೇರವಾಗಿ ಪ್ರಯಾಣ ಮಾಡಲು ಅನುಕೂಲ ಆಗುಯವಂತೆ  ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಹುಬ್ಬಳ್ಳಿ-ದೆಹಲಿ ವಿಮಾನಯಾನ ಸೇವೆಗೆ ಚಾಲನೆ ನೀಡಿದರು.


ಹುಬ್ಬಳ್ಳಿ (ನ.14): ಉತ್ತರ ಕರ್ನಾಟಕದ ಜನರು ಇನ್ನುಮುಂದೆ ಕಡಿಮೆ ಸಮಯದಲ್ಲಿ ನೇರವಾಗಿ ದೆಹಲಿಗೆ ಹೋಗಲು ಅನುಕೂಲ ಆಗುವಂತೆ ಹುಬ್ಬಳ್ಳಿಯಿಂದ ದೆಹಲಿಗೆ ಇಂದಿನಿಂದ ವಿಮಾನಯಾನ ಸೇವೆ ಆರಂಭಿಸಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ವರ್ಚುವಲ್‌ ಸಭೆಯ ಮೂಲಕ ಭಾಗಿಯಾದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹುಬ್ಬಳ್ಳಿ- ದೆಹಲಿ ಮಧ್ಯದ ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸಿದರು. 

ಈ ನೂತನ ವಿಮಾನಯಾನ ಸೇವೆಯಿಂದಾಗಿ ಹುಬ್ಬಳ್ಳಿ ಸೇರಿ, ಸುತ್ತಲಿನ ಜಿಲ್ಲೆಯಲ್ಲಿರುವ ಉತ್ತರ ಕರ್ನಾಟಕ (North Karnataka) ಜಿಲ್ಲೆಯ ಜನರು ಬೆಂಗಳೂರು, ಮುಂಬೈ (Mumbai), ಹೈದರಾಬಾದ್‌ (Hydarabad) ಸೇರಿ ವಿವಿಧ ನಗರಗಳಿಗೆ ತೆರಳಿ ಅಲ್ಲಿಂದ ದೆಹಲಿಗೆ ಹೋಗುವ ಪರದಾಟಕ್ಕೆ ಅಂತ್ಯ ಹಾಡಿದಂತಾಗಿದೆ. ಈ ವಿಮಾನ ಸೇವೆಯಿಂದಾಗಿ ಮಧ್ಯ ಕರ್ನಾಟಕದ ಹಾವೇರಿ, ದಾವಣಗೆರೆ ಜಿಲ್ಲೆಗಳು, ಕಲ್ಯಾಣ ಕರ್ನಾಟಕದ ಕೊಪ್ಪಳ, ಬಳ್ಳಾರಿ, ವಿಜಯನಗರ, ಉತ್ತರ ಕರ್ನಾಟಕದ ಗದಗ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ ಜನರಿಗೆ ಅನುಕೂಲ ಆಗಲಿದೆ. ಉದ್ಯಮದಾರರು (Buisiness Man), ಜನಪ್ರತಿನಿಧಿಗಳು ಮತ್ತು ಇತರೆ ವರ್ಗದವರಿಗೆ ಇದು ಅನುಕೂಲ ನಾಗಲಿದೆ.

Latest Videos

undefined

ಜಿಂದಾಲ್‌ನಿಂದ ಬೆಂಗಳೂರು, ಹೈದರಾಬಾದ್‌ಗೆ ವಿಮಾನ ಸೇವೆ ಆರಂಭ!

ಪ್ರಗತಿಯ ಪ್ರತೀಕ:
ವಿಮಾನ ಸೇವೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Prahlad joshi)ಯವರು, ಈ ನೇರ ವಿಮಾನಯಾನ ಸೇವೆ ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಾಗಿತ್ತು.  ಹಿಂದೆ ಹುಬ್ಬಳ್ಳಿಯಿಂದ ದೆಹಲಿಗೆ ಹೋಗಬೇಕಾದರೆ, ಮುಂಬೈ, ಹೈದರಾಬಾದ್ ಗೆ ತೆರಳಿ ಹೋಗಬೇಕಾಗಿತ್ತು. ಹುಬ್ಬಳ್ಳಿಯಿಂದ ರಾಷ್ಟ್ರ ರಾಜಧಾನಿ (Capital)ಗೆ ನೇರ ಸಂಪರ್ಕ ದೊರೆತಿರುವುದು ನಗರದ ಪ್ರಗತಿಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ನನ್ನ ಪ್ರಸ್ತಾವನೆಯನ್ನು ಅನುಮೋದಿಸಿ, ಸೇವೆ ಪ್ರಾರಂಭಿಸುವ ನಿರ್ಧಾರ ಕೈಗೊಂಡ ಜ್ಯೋತಿರಾದಿತ್ಯ ಸಿಂಧಿಯಾ (Jyotiradiotya Scindia) ಅವರಿಗೆ ಮತ್ತು ಸೇವೆ ಒದಗಿಸುತ್ತಿರುವ ಇಂಡಿಗೋ (Indigo) ಸಂಸ್ಥೆಗೆ ಪ್ರಲ್ಹಾದ್ ಜೋಶಿ ಧನ್ಯವಾದ ಅರ್ಪಿಸಿದರು.

ಎರಡೂವರೆ ಗಂಟೆಯಲ್ಲಿ ದೆಹಲಿ:
ಹುಬ್ಬಳ್ಳಿಯಿಂದ ದೆಹಲಿದೆ ಬರೋಬ್ಬರಿ 1,866 ಕಿ.ಮೀ ದೂರವಿದ್ದು, ಬಹುತೇಕರು ರೈಲಿನ ಮೂಲಕ ರಾಷ್ಟ್ರ ರಾಜಧಾನಿಗೆ ಹೋಗುತ್ತಿದ್ದರು. ದೆಹಲಿ ತಲುಪಲು ಒಂದೂವರೆ ದಿನದಿಂದ 2 ದಿನಗಳು ಬೇಕಾಗುತ್ತಿತ್ತು. ಇನ್ನು ಸ್ವಂತ ವಾಹನದಲ್ಲಿ ದೆಹಲಿಗೆ ಹೊರಟರೂ 34 ಗಂಟೆಗಳು ಸಮಯ ಬೇಕು. ಈಗ ವಿಮಾನ ಸೇವೆ ಆರಂಭವಾಗಿದ್ದರಿಂದ ದೆಹಲಿಯನ್ನು ಕೇವಲ 2 ಗಂಟೆ 30 ನಿಮಿಷದಲ್ಲಿ ತಲುಪಬಹುದು. ಪ್ರಯಾಣದ ಸಮಯದಲ್ಲಿ ಭಾರಿ ಉಳಿತಾಯ ಆಗಲಿದೆ. ದೆಹಲಿಯಲ್ಲಿ ಏನೇ ಕೆಲಸವಿದ್ದರೂ ಒಂದು ದಿನದಲ್ಲಿ ಮುಗಿಸಿಕೊಂಡು ವಾಪಸ್‌ ಬರಬಹುದು. ಜೊತೆಗೆ ದೆಹಲಿಯಲ್ಲಿರುವವರು ತುರ್ತು ಕಾರ್ಯ ನಿಮಿತ್ತ ಹುಬ್ಬಳ್ಳಿ ಸೇರಿ ಉತ್ತರ ಕರ್ನಾಟಕದ ಯಾವುದೇ ಜಿಲ್ಲೆಗಳಿಗೆ ಹೋಗಲು ಅನುಕೂಲ ಆಗಲಿದೆ. ಹುಬ್ಬಳ್ಳಿಯಿಂದ ದೆಹಲಿಗೆ ಪ್ರತಿನಿತ್ಯ ಇಂಡಿಗೋ ವಿಮಾನ ಸೇವೆ ಒದಗಿಸಲಿದೆ.

Kempegowda International Airport: ಡಿಸೆಂಬರ್‌ನಿಂದ ಟರ್ಮಿನಲ್‌-2ರಲ್ಲಿ ವಿಮಾನ ಸೇವೆ

ಸಾಮಾನ್ಯರ ಕೈಗೆಟುಕಿದ ವಿಮಾನಸೇವೆ:
 ಇತ್ತೀಚೆಗೆ ಕೇಂದ್ರ ಸರ್ಕಾರ ಆರಂಭಿಸಿದ ಉಡಾನ್‌ (Udaan) ಸೇವೆಯಿಂದಾಗಿ ಸಾಮಾನ್ಯ ಜನರಿಗೂ ವಿಮಾನ ಪ್ರಯಾಣ (Travel) ಕೈಗೆಟುಕುತ್ತಿದೆ. ಇತ್ತೀಚೆಗೆ ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವ ಎಲ್ಲ ಪ್ರಮುಖ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ (Airport) ಆರಂಭಿಸಲಾಗುತ್ತಿದೆ. ವಿಮಾನ ಯಾನ ದರವೂ ಕೂಡ ಕೈಗೆಟುಕುವ ದರವಿದ್ದು, ದೂರದ ಪ್ರದೇಶಗಳಿಗೆ ವಿಮಾನದಲ್ಲಿ ಹೋಗುವವರ ಸಂಖ್ಯೆಯೂ ಅಧಿಕವಾಗುತ್ತಿದೆ. 

click me!