ಕುತೂಹಲ ಹುಟ್ಟಿಸಿದ 'ಹಿಟ್ಲರ್ ಕೀಟ': ಮನುಷ್ಯನ ಮುಖದ ಹೋಲಿಕೆ

Published : Nov 14, 2022, 04:27 PM ISTUpdated : Nov 14, 2022, 04:37 PM IST
ಕುತೂಹಲ ಹುಟ್ಟಿಸಿದ 'ಹಿಟ್ಲರ್ ಕೀಟ': ಮನುಷ್ಯನ ಮುಖದ ಹೋಲಿಕೆ

ಸಾರಾಂಶ

ಗದಗ ಜಿಲ್ಲೆಯ ಜೇಂದ್ರಗಡ ತಾಲೂಕಿನ ಭೈರಾಪೂರ ಬೆಟ್ಟದಲ್ಲಿ ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಮನಷ್ಯ ಮುಖ ಆಕಾರದ ಹಿಟ್ಲರ್ ಕೀಟ ಪತ್ತೆಯಾಗಿದೆ.

ಗದಗ (ನ.14) : ಗಜೇಂದ್ರಗಡ ತಾಲೂಕಿನ ಭೈರಾಪೂರ ಬೆಟ್ಟದಲ್ಲಿ ಮನಷ್ಯ ಮುಖ ಆಕಾರದ ಹಿಟ್ಲರ್ ಕೀಟ ಪತ್ತೆಯಾಗಿದೆ. ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಅಪರೂಪದ ಕೀಟ ಇದಾಗಿದೆ. ಮೈ ಮೇಲೆ ಹಳದಿ ಬಣ್ಣದಿಂದ ಕೂಡಿರುವ ಈ ಕೀಟ ಆಕರ್ಷಕವಾಗಿ ನೋಡುಗರಿಗೆ ಕಾಣುತ್ತದೆ. ಈ ಕೀಟವನ್ನು ವೈಜ್ಞಾನಿಕವಾಗಿ 'ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್' ಎಂದು ಕರೆಯುವರು. 
ಈ ಹುಳವನ್ನು ಗ್ರಾಮೀಣ ಅಥವಾ ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಎಂದು ಕರೆಯುತ್ತಾರೆ. ಇಕ್ಸೋರಾ (Iksora), ಗೋಡಂಬಿ ಗಿಡ, ಗುಲ್‌ಮೋಹರ್ (Gul Mohar) ಮತ್ತು ಶಿವನಿ (Shivani) ಮರಗಳಲ್ಲಿ ಹೆಚ್ಚಾಗಿ ಈ ಕೀಟ ಕಂಡು ಬರುತ್ತವೆ. ಎಲೆಗಳ ಅಡಿಯಲ್ಲಿ ಹೆಣ್ಣು ಕೀಟವು 150-200 ಮೊಟ್ಟೆಗಳನ್ನು (Egss) ಇಡುತ್ತದೆ. ಈ ಹಿಟ್ಲರ್ ಕೀಟವು (Hitler Insect) 7 ರಿಂದ 9 ತಿಂಗಳ ಜೀವಿತಾವಧಿ ಹೊಂದಿದ್ದು, ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವೆ. ಇದು ಈಗ ಮನುಷ್ಯನ ಮುಖವನ್ನು ಹೋಲುವುದರಿಂದ ಇದನ್ನು ನೋಡುಗರನ್ನು ಹೆಚ್ಚು ಆಕರ್ಷಿಸುತ್ತದೆ. ಈಗ ಕೀಟದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಹೊಲಕ್ಕೆ ಹೋಗುವ ರೈತರನ್ನು ಸಾಯಿಸುವ ಕಣಜ ಹುಳು

ದ್ರವ ಸ್ರವಿಸುವ ಕೀಟ:
ಪೆಂಟ್ಯಾಟೊಮಿಡೆ ಕೀಟಗಳು ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಫೇರಮೊನ್ ದ್ರವ (Feramon Liquid) ಸ್ರವಿಸಿ ಗುಂಪು ಗುಂಪಾಗಿ ( ಅಗ್ರಿಗೇಶನ್) ಬದುಕುತ್ತವೆ. ಸಸ್ಯದ ಕಾಂಡದ ಮೇಲೆ ವಾಸಿಸುವ ಈ ಕೀಟಗಳಿಗೆ ಇದರ ರಕ್ಷಣಾ ತಂತ್ರವೇ (Protection Skill) ಸಂತಾನೋತ್ಪತ್ತಿಗೆ ಕೂಡ ಸಹಾಯವಾಗಿದೆ. ಇವು ಸಸ್ಯದ ಎಲೆ ರಸ ಮತ್ತು ಹಣ್ಣುಗಳ ರಸವನ್ನು ಹೀರಿ ಬದುಕುತ್ತವೆ. ಇವುಗಳ ಆಹಾರ ಪದ್ದತಿಯ ಕಾರಣದಿಂದಾಗಿ ರೈತರ ಕೆಲವು ಬೆಳೆಗಳು ಹಾನಿಯಾಗುತ್ತವೆ. ಆದರೆ, ಸಂತತಿ ಹೆಚ್ಚಿನ ಪ್ರಮಾಣದಲ್ಲಿ ಇರದ ಕಾರಣ ಬೆಳೆ ಹಾನಿ ಆಗಿರುವ ಉದಾಹರಣೆಗಳಿಲ್ಲ.

ಏಷ್ಯಾ ಖಂಡದ ವಿವಿಧ ದೇಶದಲ್ಲಿ ವಾಸ:
ವೈಜ್ಞಾನಿಕವಾಗಿ ಕ್ಯಾಟಕ್ಯಾಂಥಸ್ ಇನ್‌ಕಾರ್ನೇಟಸ್ (Catacanthus incarnatus) ಎನ್ನುವ ಈ ಕೀಟಗಳಿಗೆ ಏಷ್ಯಾ ಖಂಡದಲ್ಲಿರುವ ಬಹುತೇಕ ರಾಷ್ಟ್ರಗಳ ಹವಾಗುಣ ಹೊಂದಾಣಿಕೆ ಆಗುತ್ತದೆ. ಹೀಗಾಗಿ ಭಾರತ, ಶ್ರೀಲಂಕಾ (Shrilanka), ಮ್ಯಾನ್ಮಾರ್, ಥೈಲ್ಯಾಂಡ್, ಚೀನಾ (china), ಇಂಡೋನೇಷ್ಯಾ, ಮಲೇಷ್ಯಾ, ಫಿಲಿಫೈನ್ಸ್, ಪಾಪು ನ್ಯೂಗಿನಿಯಾ, ಜಪಾನ್ (Japan), ದಕ್ಷಿಣ ಕೊರಿಯಾ ಹಾಗೂ ಪಾಕಿಸ್ತಾನ (Pakistan) ದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. 

ಭತ್ತಕ್ಕೆ ಜಿಗಿಹುಳು ಕಾಟ: ಗದ್ದೆಗಳಿಗೆ ವಿಜ್ಞಾನಿಗಳ ಭೇಟಿ

ಆಹಾರ ಸರಪಳಿಗೆ ಪೂರಕ:
ಜೀವಮಂಡಲದಲ್ಲಿ ಆಹಾರ ಸರಪಳಿ (Food Circle)ಮುಖ್ಯವಾಗಿದ್ದು, ಅದಕ್ಕೆ ಈ ಕೀಟ ಪೂರಕವಾಗಿದೆ. ಆಹಾರ ಸರಪಳಿಯ ಮೊದಲ ಹಂತವಾಗಿ ಸಸ್ಯವನ್ನು ತಿಂದು ಬದುಕುವ ಕೀಟವು, ದೊಡ್ಡ ಕೀಟಗಳಿಗೆ ಆಹಾರವಾಗುತ್ತಿದೆ.  ಹೀಗಾಗಿ, ಉನ್ನತ ಸ್ಥರದ ಜೀವಿಗಳಿಗೆ ಆಹಾರ ಒದಗಿಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಕೀಟಗಳು ನಿಸರ್ಗದಲ್ಲಿ ನೈಸರ್ಗಿಕವಾಗಿ (Natual) ನಿಯಂತ್ರಿಸಲ್ಪಡುತ್ತವೆ. ಸ್ಥಳೀಯವಾಗಿ ಈ ಕೀಟವನ್ನು ಜೀವ ವೈವಿಧ್ಯ ಸಂಶೋಧಕರಾದ ಮಂಜುನಾಥ ಎಸ್. ನಾಯಕ, ಸಂಗಮೇಶ ಕಡಗದ, ಶರಣುಗೌಡರ ಗುರುತಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!