
ಬೆಂಗಳೂರು (ಜು.13): ಪ್ರೇಯಸಿ ಪವಿತ್ರಾ ಗೌಡಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳಿಸಿದನೆಂಬ ಕಾರಣಕ್ಕೆ ಚಿತ್ರದುರ್ಗ ರೇಣುಕಾಸ್ವಾಮಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ತಿಂಗಳು ಸಮೀಮಿಸಿದೆ. ಕಳೆದ ಇಪ್ಪತ್ತು ದಿನಗಳಿಂದ ಜೈಲೂಟಕ್ಕೆ ಒಗ್ಗದೆ, ನಿದ್ದೆಯೂ ಬಾರದೆ ನರಕಯಾತನೆ ಅನುಭವಿಸುತ್ತಿರುವ ದರ್ಶನ್, ಒಂದೊಂದು ಕ್ಷಣ ಕಳೆಯೋದಕ್ಕೂ ಪರದಾಡುತ್ತಿದ್ದಾರೆ.
ಪಾರ್ಟಿ, ಸಿನಿಮಾ, ಶೂಟಿಂಗ್ ಅಂತಾ ತುಂಡು ಗುಂಡು ತಿಂದುಂಡು ಜಾಲಿಯಾಗಿ ಜೀವನ ನಡೆಸುತ್ತಿದ್ದ ದರ್ಶನ್ ಇದೀಗ ಏಕಾಏಕಿ ಕೊಲೆ ಪ್ರಕರಣದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿರುವುದು ತಲೆಚಿಟ್ಟು ಹಿಡಿಸಿದೆ. ಹೀಗಾಗಿ ಡಿಬಾಸ್‌ಗೆ ಕ್ಷಣ ಕ್ಷಣವೂ ವರ್ಷಗಳಂತೆ ಭಾಸವಾಗುತ್ತಿದೆ. ಜೊತೆಗೆ ಜೈಲೂಟವೂ ದೊಡ್ಡ ಶಿಕ್ಷೆಯಂತಾಗಿದೆ. ದಿನನಿತ್ಯ ಬಿರಿಯಾನಿ ಚಿಕನ್ ತಿಂದಿದ್ದ ದೇಹ ಇದೀಗ ಮುದ್ದೆ ಸಾರು, ಚಪಾತಿ, ಅನ್ನ ಅಂದರೆ ದೇಹ ಕೇಳೀತೆ? ಜೈಲೂಟಕ್ಕೆ ಒಗ್ಗದೆ, ತಿಂದ ಆಹಾರ ಜೀರ್ಣವಾಗದೆ ಫುಡ್ ಪಾಯ್ಸನ್ ಆಗುತ್ತಿದೆ. ವಾಂತಿ ಭೇದಿಯಿಂದ ತೂಕ ಇಳಿಕೆಯಂತಹ ಆರೋಗ್ಯ ಸಮಸ್ಯೆಗಳು ಎದುರಾಗಿವೆ. ಇದೇ ಕಾರಣಕ್ಕೆ ಮನೆಯಿಂದ ಊಟಕ್ಕೆ ಅನುಮತಿ ನೀಡಿ ಎಂದು ದರ್ಶನ್ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿದ್ದೆ ಮಾಡದೇ ರಾತ್ರಿಯಿಡೀ ಚಡಪಡಿಸಿದ ಪವಿತ್ರಾ ಗೌಡ!
ಜೈಲೂಟದ ಸೇರದ್ದು ಒಂದು ಕಡೆಯಾದರೆ, ಒಂದೇ ಕಡೆ ಎಷ್ಟೊತ್ತುಂತಾ ಕೂಡೋದು? ಸಮಯವೇ ಹೋಗುತ್ತಿಲ್ಲ, ಒಂದೊಂದು ದಿನವೂ ವರ್ಷದಂತೆ ಕಳೆಯುತ್ತಿರುವ ದರ್ಶನ್. ಹೀಗಾಗಿ ಸಮಯ ಕಳೆಯಲು ಹೊಸ ಅಭ್ಯಾಸ ರೂಡಿಸಿಕೊಂಡಿದ್ದಾರೆ. ಅದೇನೆಂದರೆ ಜೈಲಿನಲ್ಲಿ ನಿತ್ಯ ಧ್ಯಾನ, ಭಜನೆ ಮಾಡಲು ಮುಂದಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಸೇರಿದ ಬಳಿಕ ದರ್ಶನ್ ಬದಲಾಗಿ ಹೋಗಿದ್ದಾರೆ. ದಿನಚರಿ ಅಷ್ಟೇ ಅಲ್ಲ, ತಮ್ಮ ಮಾತು ಮತ್ತು ನಡೆತೆಯಲ್ಲೂ ಸಂಪೂರ್ಣವಾಗಿ ಬದಲಾಗಿರುವ ದರ್ಶನ
ಬೆಳಗ್ಗೆ ಹೊತ್ತು ಫ್ರೀ ಎಕ್ಸ್‌ಸೈಜ್ , ಡಿಪ್ಸ್ ಹೊಡೆದು ಫಿಟ್‌ನೆಸ್‌ಗೆ ಒತ್ತು ನೀಡುತ್ತಿರುವ ದರ್ಶನ್, ಜೈಲಿನಲ್ಲಿ ಯಾರ ಬಳಿಯೂ ಹೆಚ್ಚಾಗಿ ಮಾತನಾಡುತ್ತಿಲ್ಲ, ಬೆರೆಯುತ್ತಿಲ್ಲ. ಬದಲಾಗಿ ಪುಸ್ತಕ ಓದುತ್ತಿದ್ದಾರೆ. ಸಂಜೆಯಾಗ್ತಿದ್ದಂತೆ ಹನುಮಾನ ಚಾಲೀಸ ಓದ್ತಾರೆ, ಭಜನೆ ಮಾಡಿ ಕಾಲ ಕಳೆಯುತ್ತಿರುವ ದರ್ಶನ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ