ಕೆಎಸ್‌ಆರ್‌ಟಿಸಿಗೆ 2021ರ ಪಿಆರ್‌ಸಿಐ ಎಕ್ಸಲೆನ್ಸ್‌ನ ಐದು ಪ್ರಶಸ್ತಿ

By Kannadaprabha NewsFirst Published Sep 22, 2021, 10:17 AM IST
Highlights

*  ‘ಪಿಆರ್‌ಸಿಐ ಎಕ್‌ಸ್ಲೆನ್‌ಸ್’ ಪ್ರಶಸ್ತಿಗೆ ಕೆಎಸ್‌ಆರ್ಟಿಸಿ ಭಾಜನ
*  ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ
*  15ನೇ ವಿಶ್ವ ಸಾರ್ವಜನಿಕ ಸಂಪರ್ಕ ಮಂಡಳಿ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು(ಸೆ.22):  ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ(ಪಿಆರ್‌ಸಿಐ) ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ವಿನೂತನ ಉಪಕ್ರಮಗಳನ್ನು ಗುರುತಿಸಿ ಕೊಡಮಾಡುವ 2021ನೇ ಸಾಲಿನ ‘ಪಿಆರ್‌ಸಿಐ ಎಕ್‌ಸ್ಲೆನ್‌ಸ್’ ಪ್ರಶಸ್ತಿಗೆ ಕೆಎಸ್‌ಆರ್ಟಿಸಿ (KSRTC) ಐದು ವಿಭಾಗಗಳಲ್ಲಿ ಭಾಜನವಾಗಿದೆ. 

ಸಾರ್ವಜನಿಕ ವಲಯದಲ್ಲಿ ಕೋವಿಡ್ ನಿರ್ವಹಣೆಗೆ ಬೆಳ್ಳಿ ಪದಕ, ಅತ್ಯುತ್ತಮ ಸಾರ್ವಜನಿಕ ಉದ್ದಿಮೆ ಸಾಮಾಜಿಕ ಹೊಣೆಗಾರಿಕೆಯಲ್ಲಿನ ಉಪಕ್ರಮ ಅನುಷ್ಠಾನಕ್ಕೆ ಕಂಚಿನ ಪದಕ, ಆರೋಗ್ಯ ರಕ್ಷಣೆ ಸಂವಹನ ಸಾಕ್ಷ್ಯಚಿತ್ರಗಳಿಗೆ ಕಂಚಿನ ಪದಕ, ಆಂತರಿಕ ನಿಯತಕಾಲಿಕೆ ‘ಸಾರಿಗೆ ಸಂಪದ’ಕ್ಕೆ ಚಿನ್ನದ ಪದಕ ಹಾಗೂ ಕೋವಿಡ್ ಸಮಯದಲ್ಲಿನ ಗ್ರಾಹಕ ಸ್ನೇಹಿ ಉಪಕ್ರಮಕ್ಕೆ ಚಿನ್ನದ ಪದಕ ಲಭಿಸಿದೆ. 

ಸಾಲು ಸಾಲು ಹಬ್ಬ: ಹೆಚ್ಚುವರಿ ಬಸ್‌ ಓಡಿಸಲು ಕೆಎಸ್‌ಆರ್‌ಟಿಸಿ ಭರದ ಸಿದ್ಧತೆ

ಸೆ.18ರಂದು ಗೋವಾದಲ್ಲಿ(Goa) ಆಯೋಜಿಸಿದ್ದ 15ನೇ ವಿಶ್ವ ಸಾರ್ವಜನಿಕ ಸಂಪರ್ಕ ಮಂಡಳಿ ಸಮ್ಮೇಳನದಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರಶಸ್ತಿ (Award) ಪ್ರದಾನ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.
 

click me!