ಮಾತು ತಪ್ಪದ ಮಹಾನ್ ನಾಯಕ ಸಿದ್ದರಾಮಯ್ಯ

Published : Aug 03, 2023, 11:13 AM IST
ಮಾತು ತಪ್ಪದ ಮಹಾನ್ ನಾಯಕ ಸಿದ್ದರಾಮಯ್ಯ

ಸಾರಾಂಶ

ಸಿದ್ದರಾಮಯ್ಯ ಎಂಬ ಶಕ್ತಿಯೇ ಅದ್ಭುತ. ಕೆಲವೇ ಕೆಲವರು ರಾಜಕೀಯವಾಗಿ ಅವರನ್ನು ವಿರೋಧಿಸಿದರೂ ಅಂತರಾಳದಲ್ಲಿ ಪಕ್ಷಾತೀತವಾಗಿ ಗೌರವಿಸುವ, ಆದರದಿಂದ ಕಾಣುವ ದೊಡ್ಡ ಪಡೆಯೇ ನಾಡಿನಲ್ಲಿದೆ. ತಮ್ಮ ಇಡೀ ರಾಜಕೀಯ ಜೀವನದಲ್ಲಿ ಜಾತಿ-ಧರ್ಮಕ್ಕೆ ಸೀಮಿತರಾದವರಲ್ಲ. ನನ್ನ ಬದುಕಿನಲ್ಲಿ ನೋಡಿದ ಅದ್ಭುತ ಮಹಾನ್‌ ಶಕ್ತಿ ನಮ್ಮ ಸಾಹೇಬರು. 

- ಹೊಳಬಸು ಶೆಟ್ಟರ, ಗುಳೇದಗುಡ್ಡ, ಬಾದಾಮಿ

ಸಿದ್ದರಾಮಯ್ಯ ಎಂಬ ಶಕ್ತಿಯೇ ಅದ್ಭುತ. ಕೆಲವೇ ಕೆಲವರು ರಾಜಕೀಯವಾಗಿ ಅವರನ್ನು ವಿರೋಧಿಸಿದರೂ ಅಂತರಾಳದಲ್ಲಿ ಪಕ್ಷಾತೀತವಾಗಿ ಗೌರವಿಸುವ, ಆದರದಿಂದ ಕಾಣುವ ದೊಡ್ಡ ಪಡೆಯೇ ನಾಡಿನಲ್ಲಿದೆ. ತಮ್ಮ ಇಡೀ ರಾಜಕೀಯ ಜೀವನದಲ್ಲಿ ಜಾತಿ-ಧರ್ಮಕ್ಕೆ ಸೀಮಿತರಾದವರಲ್ಲ. ನೊಂದವರ, ದೀನದಲಿತರ, ಬಡವರ ಬದುಕು ಹಸನಾಗಬೇಕು. ಸಿಕ್ಕ ಅಧಿಕಾರ ಸಮಾಜಕ್ಕೆ ಸದ್ಬಳಕೆಯಾಗಬೇಕು ಎಂಬುದು ಅವರ ದಿಟ್ಟನಿಲುವು. ಎಷ್ಟೇ ಕಷ್ಟಬರಲಿ, ಯಾರೇ ಟ್ರೋಲ್‌ ಮಾಡಲಿ ಅವರ ನಿಲುವು ಮಾತ್ರ ಬದಲಿಸದ ನಾಡಿನ ಗಟ್ಟಿರಾಮಯ್ಯ ಎಂದರೂ ತಪ್ಪಲ್ಲ.

ನನ್ನ ಬದುಕಿನಲ್ಲಿ ನೋಡಿದ ಅದ್ಭುತ ಮಹಾನ್‌ ಶಕ್ತಿ ನಮ್ಮ ಸಾಹೇಬರು. ಅವರ ಪಕ್ಕದಲ್ಲಿ, ಅವರ ಕಷ್ಟ-ಸುಖದಲ್ಲಿ, ಅವರ ಪ್ರೀತಿಯ ಪುತ್ರನಂತೆ ನನ್ನನ್ನು ಕಾಣುವ ಅವರೇ, ನಮಗೆಲ್ಲ ದೇವರ ಸಮಾನರು.

ಅಪ್ಪಟ ಹಳ್ಳಿಯ ಸೊಗಡು

ಸಿದ್ದರಾಮಯ್ಯ ಎರಡು ಬಾರಿ ಈ ನಾಡಿನ ಮುಖ್ಯಮಂತ್ರಿಯಾದರೂ ತಮ್ಮ ಹಳ್ಳಿಯ ಸೊಗಡು, ಕರುನಾಡಿನ ಸಂಸ್ಕೃತಿ ಬಿಟ್ಟವರಲ್ಲ. ಅವರು ತಮ್ಮ ಬಾಲ್ಯ ಮತ್ತು ಯುವಕರಾಗಿದ್ದಾಗ ಪಟ್ಟಕಷ್ಟಗಳನ್ನೇ ಮೆಟ್ಟಿನಿಂತು ರಾಜಕೀಯದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದವರು. ತಮಗಾಗಿ ಏನನ್ನೂ ಮಾಡಿಕೊಳ್ಳದ ಸಮಾಜಮುಖಿ ನಾಯಕರು. ಇಂತಹ ನಾಯಕರು ನಮ್ಮ ಬಾದಾಮಿ ಕ್ಷೇತ್ರದಿಂದ ಒಂದು ಬಾರಿ ಶಾಸಕರಾಗಿದ್ದರು ಎಂಬುದು ನಮಗೆಲ್ಲ ದೊಡ್ಡ ಹೆಮ್ಮೆ ಮತ್ತು ಗೌರವ ತಂದಿತ್ತು. ಆದರೆ, ಬಾದಾಮಿ ಶಾಸಕರಾಗಿದ್ದಾಗಲೇ ನಾಡಿನ ಮುಖ್ಯಮಂತ್ರಿಯಾಗಬೇಕೆಂಬ ನಮ್ಮ ಬಯಕೆ ಈಡೇರದಿದ್ದರೂ ಬಾಗಲಕೋಟೆ ಜಿಲ್ಲೆ ಬಗ್ಗೆ, ಬಾದಾಮಿ ಕ್ಷೇತ್ರದ ಬಗ್ಗೆ ಅವರಿಗೆ ಅತೀವ ಕಾಳಜಿ. ಕೇವಲ ಬಾದಾಮಿ ಅಷ್ಟೇ ಅಲ್ಲ, ಕರುನಾಡಿನ ಪ್ರತಿ ಹಳ್ಳಿ, ನಗರ-ಪಟ್ಟಣಗಳ ಸಮಗ್ರ ಮಾಹಿತಿ, ಕುಂದು-ಕೊರತೆ ಆಲಿಸುವ ಹೃದಯವಂತರು.

ಇನ್ನು 2-3 ತಿಂಗಳಲ್ಲಿ ಜಾತಿಗಣತಿ ವರದಿ ಸಲ್ಲಿಕೆ: ಜಯಪ್ರಕಾಶ ಹೆಗ್ಡೆ

ಪಕ್ಷ-ಪ್ರದೇಶ-ಧರ್ಮಕ್ಕೆ ಸೀಮಿತರಲ್ಲ

ರಾಜಕಾರಣ ಎನ್ನುವುದು ಒಂದು ಅಧಿಕಾರವೆಂದು ಅವರೆಂದೂ ಭಾವಿಸಿಲ್ಲ. ಅಧಿಕಾರ ಎಂಬುದು ಜನರ ಸೇವೆ ಮಾಡಲು ಸಿಕ್ಕ ಒಂದು ಅವಕಾಶವೆಂದು ಸದಾ ಅವರು ಹೇಳುತ್ತಿರುತ್ತಾರೆ. ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಸಿಕ್ಕ ಅವಕಾಶವನ್ನು ಸಮೃದ್ಧ ನಾಡು ಕಟ್ಟಲು ಬಳಸಿಕೊಂಡಿದ್ದಾರೆ.

ಜನರ ಬೆವರ ಗಳಿಕೆಯ ತೆರಿಗೆ ಹಣವನ್ನು ಬಳಸಿಕೊಂಡು ಚುನಾಯಿತ ಸರ್ಕಾರ ರೂಪಿಸುವ ಯೋಜನೆಗಳು ನಾಡಿನ ಪ್ರತಿಯೊಬ್ಬರಿಗೂ ತಲುಪಬೇಕು. ಅವರ ಬದುಕು ಹಸನಾಗಬೇಕು. ಪ್ರತಿ ಮನೆಯಲ್ಲೂ ಸರ್ಕಾರದ ಯೋಜನೆಗಳ ಫಲಾನುಭವಿ ಇರಬೇಕು. ಜನರ ಕಷ್ಟಗಳಿಗೆ ಪರಿಹಾರವಾಗಿ ಒಂದು ಸರ್ಕಾರದ ಯೋಜನೆಗಳು ರೂಪುಗೊಳ್ಳಬೇಕು ಎಂಬುದು ಅವರ ಸಾಮಾಜಿಕ ನಿಲುವು. ಹಾಗೆಯೇ ನಡೆದಿದ್ದಾರೆ ಕೂಡ.

ಮಾತು ತಪ್ಪದ ಮಹಾನ್‌ ನಾಯಕ

ಸಿದ್ದರಾಮಯ್ಯ ಅವರು ಆಗದೇ ಇರುವುದನ್ನು ಮಾತಾಡಲ್ಲ. ಕೊಟ್ಟಮಾತು ತಪ್ಪಿದ್ದು ಅವರ ರಾಜಕೀಯ ಜೀವನದಲ್ಲಿಯೇ ಇಲ್ಲ. ಇದನ್ನು ಪ್ರಸ್ತುತ ಐದು ಗ್ಯಾರಂಟಿ ಯೋಜನೆಗಳೇ ಸಾರಿ ಹೇಳುತ್ತವೆ. ಪ್ರಸ್ತುತ 2023ನೇ ಸಾಲಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾಡಿನ ಜನ, ಸಿದ್ದರಾಮಯ್ಯ ಅವರ ಮೇಲೆ ಹಾಗೂ ಕಾಂಗ್ರೆಸ್‌ ಪಕ್ಷದ ಮೇಲೆ ವಿಶ್ವಾಸವಿಟ್ಟು, ಸ್ಪಷ್ಟಬಹುಮತದ ಸರ್ಕಾರ ರಚನೆಗೆ ಕಾರಣರಾದರು. ಜನರಿಗೆ ಕೊಟ್ಟಮಾತಿನಂತೆಯೇ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ಎಷ್ಟೋ ಜನ, ಉಚಿತ ಬಸ್‌ ಪ್ರಯಾಣ, ಉಚಿತ ವಿದ್ಯುತ್‌, ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂಬಂತೆ ಟೀಕಿಸಿದರು. ಆದರೆ, ಬಡವರ ಪರ ಗಟ್ಟಿನಿರ್ಧಾರ ತೆಗೆದುಕೊಂಡ ಅವರು, ವಿರೋಧಿಗಳೂ ಗೌರವಿಸುವಂತಹ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ ಪಕ್ಷದ ಪ್ರತಿಯೊಬ್ಬ ನಾಯಕರ ಸಹಕಾರ-ಬೆಂಬಲ ಕೂಡ ಇರುವುದು ಅವರ ದೂರದೃಷ್ಟಿಯ ಆಲೋಚನಾ ಲಹರಿಯೇ ವಿನೂತನ.

'ಗ್ಯಾರಂಟಿ' ಜಾರಿಗೆ ಪರಿಶಿಷ್ಟರ 11 ಸಾವಿರ ಕೋಟಿ ಅನುದಾನ ಬಳಸಿಕೊಂಡ ಸರ್ಕಾರ!

ಇಂತಹ ಸಮಾಜವಾದಿ, ಸಮಾಜಮುಖಿ ನಾಯಕರನ್ನು ಪಡೆದ ನಾವೇ ಧನ್ಯರು. ನಾಯಕರಿಂದು 75 ವರ್ಷ ಪೂರೈಸಿ, 76ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ದೇವರು ಆಯುಷ್ಯ, ಆರೋಗ್ಯ, ನಾಡಿನ ಸಮಗ್ರ ಅಭಿವೃದ್ಧಿಗೆ ಮತ್ತಷ್ಟುಶಕ್ತಿ ಕೊಡಲೆಂದು ಹೃದಯಂತರಾಳದಿಂದ ಹಾರೈಸುತ್ತೇನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!